ಮುಂಬೈ(ಮೇ.05): ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಪ್ಲೇ ಆಫ್ ಪ್ರವೇಶಿಸಲು ಮುಂಬೈ ಇಂಡಿಯನ್ಸ್ ವಿರುದ್ಧ ಗೆಲ್ಲಲೇಬೇಕು. ಮಹತ್ವದ ಪಂದ್ಯದಲ್ಲಿ ಕೆಕೆಆರ್ ಸ್ಫೋಟಕ ಬ್ಯಾಟ್ಸ್‌ಮನ್‌ಗಳು ಕೈಕೊಟ್ಟರೂ, 7 ವಿಕೆಟ್ ನಷ್ಟಕ್ಕೆ 133 ರನ್ ಸಿಡಿಸುವಲ್ಲಿ ಯಶಸ್ವಿಯಾಗಿದೆ. ಇದೀಗ ಮುಂಬೈ ಅಗ್ರಸ್ಥಾನಕ್ಕೇರಲು 134 ರನ್ ಚೇಸ್ ಮಾಡೋ ವಿಶ್ವಾಸದಲ್ಲಿದೆ.

ಟಾಸ್ ಸೋತು ಬ್ಯಾಟಿಂಗ್ ಇಳಿದ ಕೆಕೆಆರ್, ಆರಂಭದಲ್ಲೇ ಶುಭ್‌ಮಾನ್ ಗಿಲ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಗಿಲ್ ಕೇವಲ 9 ರನ್ ಸಿಡಿಸಿ ಔಟಾದರು.  ಆದರೆ ಕ್ರಿಸ್ ಲಿನ್ ಹೋರಾಟ ಕೆಕೆಆರ್ ತಂಡಕ್ಕೆ ನೆರವಾಯಿತು. ಲಿನ್ 29 ಎಸೆತದಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್ ಮೂಲಕ 41 ರನ್ ಸಿಡಿಸಿ ಔಟಾದರು.

ರಾಬಿನ್ ಉತ್ತಪ್ಪ ಹೋರಾಟ ಮುಂದುವರಿಸಿದರು. ಆದರೆ ನಾಯಕ ದಿನೇಶ್ ಕಾರ್ತಿಕ್, ಸ್ಫೋಟಕ ಬ್ಯಾಟ್ಸ್‌ಮನ್ ಆ್ಯಂಡ್ರೆ ರಸೆಲ್ ಅಬ್ಬರಿಸಿಲ್ಲ.  ನಿತೀಶ್ ರಾಣ 26 ರನ್ ಸಿಡಿಸಿ ಔಟಾದರು. ನಿಧಾನಗತಿಯಲ್ಲಿ ಬ್ಯಾಟ್ ಬೀಸಿದ ರಾಬಿನ್ ಉತ್ತಪ್ಪ 40 ರನ್ ಸಿಡಿಸಿ ಔಟಾದರು. ಕೆಕೆಆರ್ 7 ವಿಕೆಟ್ ನಷ್ಟಕ್ಕೆ 133 ರನ್ ಸಿಡಿಸಿತು.