Asianet Suvarna News Asianet Suvarna News

IPL 2019: ಮೊಹಾಲಿಯಲ್ಲಿ ಪಂಜಾಬ್ VS ಸನ್‌ರೈಸರ್ಸ್ ಹೋರಾಟ!

ಐಪಿಎಲ್ ಟೂರ್ನಿಯಲ್ಲಿ ಗೆಲುವಿನ ಅಲೆಯಲ್ಲಿದ್ದ ಪಂಜಾಬ್ ಹಾಗೂ ಸನ್‌ರೈರ್ಸ್ ತಂಡಗಳು ಕಳೆದ ಪಂದ್ಯದಲ್ಲಿ ಸೋಲಿನ ಕಹಿ ಅನುಭವಿಸಿದೆ. ಇದೀಗ ಈ ಎರಡು ತಂಡಗಳು ಮುಖಾಮುಖಿಯಾಗುತ್ತಿದೆ. ಅಂಕಿ ಅಂಶದ ಪ್ರಕಾರ ಸನ್‌ರೈಸ್ಸ್ ಗೆಲುವಿನ ಫೇವರಿಟ್ ಏನಿಸಿಕೊಂಡಿದೆ.

IPL 2019 Kings XI punjab Vs Sunrisers Hyderabad match preview
Author
Bengaluru, First Published Apr 8, 2019, 12:27 PM IST

ಮೊಹಾಲಿ(ಏ.08): ಸುಲಭವಾಗಿ ಗೆಲ್ಲಬಹುದಾಗಿದ್ದ ಪಂದ್ಯಗಳನ್ನು ಕೈಚೆಲ್ಲಿ ನಿರಾಸೆಗೊಳಗಾಗಿರುವ ಸನ್‌ರೈಸರ್ಸ್ ಹೈದರಾಬಾದ್‌ ಹಾಗೂ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ಸೋಮವಾರ ಮೊಹಾಲಿಯಲ್ಲಿ ಪರಸ್ಪರ ಎದುರಾಗಲಿದ್ದು, ಗೆಲುವಿನ ಹಳಿಗೆ ಮರಳಲು ಎದುರು ಹಪಹಪಿಸುತ್ತಿವೆ. ಪ್ಲೇ-ಆಫ್‌ ಲೆಕ್ಕಾಚಾರಕ್ಕೆ ಇನ್ನೂ ಸಮಯವಿದೆಯಾದರೂ, ಈ ಹಂತದಲ್ಲಿ ಗೆಲುವಿನ ಲಯ ಉಳಿಸಿಕೊಂಡು ಅಂಕಪಟ್ಟಿಯಲ್ಲಿ ಅಗ್ರ 4ರಲ್ಲಿ ಉಳಿದುಕೊಳ್ಳುವುದು ತಂಡಗಳ ಗುರಿಯಾಗಿದೆ. ಸನ್‌ರೈಸರ್ಸ್‌ಗೆ ಮಧ್ಯಮ ಕ್ರಮಾಂಕದ ಸಮಸ್ಯೆ ಕಾಡುತ್ತಿದ್ದರೆ, ಪಂಜಾಬ್‌ಗೆ ಸ್ಥಿರತೆಯ ಕೊರತೆ ಎದುರಾಗಿದೆ.

ಇದನ್ನೂ ಓದಿ: IPL 2019: ರೋಹಿತ್ ಶರ್ಮಾ ಭೇಟಿ ಮಾಡಿದ ಗಳಗಳನೆ ಅತ್ತ ಅಭಿಮಾನಿ!

ಒಟ್ಟು ಮುಖಾಮುಖಿ: 12
ಪಂಜಾಬ್‌: 03
ಸನ್‌ರೈಸರ್ಸ್: 09

ಸ್ಥಳ: ಮೊಹಾಲಿ, ಪಂದ್ಯ ಆರಂಭ: ರಾತ್ರಿ 8ಕ್ಕೆ

ಪಿಚ್‌ ರಿಪೋರ್ಟ್‌
ಮೊಹಾಲಿ ಪಿಚ್‌ ವೇಗದ ಬೌಲಿಂಗ್‌ಗೆ ಹೆಚ್ಚು ನೆರವು ನೀಡಲಿದ್ದು, ಈ ಆವೃತ್ತಿಯಲ್ಲಿ ಇಲ್ಲಿ ನಡೆದಿರುವ 2 ಪಂದ್ಯಗಳಲ್ಲಿ ವೇಗಿಗಳೇ ಹೆಚ್ಚು ಯಶಸ್ಸು ಕಂಡಿದ್ದಾರೆ. ಮೊದಲು ಬ್ಯಾಟ್‌ ಮಾಡುವ ತಂಡ 180ಕ್ಕೂ ಹೆಚ್ಚು ಮೊತ್ತ ಕಲೆಹಾಕಿದರೆ ಗೆಲ್ಲುವ ಸಾಧ್ಯತೆ ಹೆಚ್ಚು. ಟಾಸ್‌ ಪ್ರಮುಖ ಪಾತ್ರ ವಹಿಸಲಿದೆ.

Follow Us:
Download App:
  • android
  • ios