ರೋಹಿತ್ ಶರ್ಮಾ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ 3 ಬಾರಿ ಐಪಿಎಲ್ ಟ್ರೋಫಿ ಎತ್ತಿಹಿಡಿದೆ. ಮುಂಬೈ ತಂಡದ ಸೂರ್ ಸ್ಟಾರ್ ರೋಹಿತ್ ಶರ್ಮಾಗೆ ಅಪಾರ ಅಭಿಮಾನಿ ಬಳಗವಿದೆ. ಇದೇ ರೋಹಿತ್ ಭೇಟಿಯಾದ ಅಭಿಮಾನಿ ಒಂದೇ ಸಮನೆ ಅತ್ತ ಘಟನೆ ನಡೆದಿದೆ. ಇಲ್ಲಿದೆ ಹೆಚ್ಚಿನ ವಿವರ.
ಮುಂಬೈ(ಏ.07): ಐಪಿಎಲ್ ಕ್ರಿಕೆಟ್ ಹಲವು ಐತಿಹಾಸಿಕ ಕ್ಷಣಗಳನ್ನು ನೀಡಿದೆ. ವಿಶೇಷವಾಗಿ ಅಭಿಮಾನಿಗಳ ಸಂಭ್ರಮನ್ನು ಇಮ್ಮಡಿಗೊಳಿಸಿದೆ. ಐಪಿಎಲ್ ಕ್ರಿಕೆಟ್‌ನಲ್ಲಿ ಮುಂಬೈ ಇಂಡಿಯನ್ಸ್‌ಗೆ ಅಪಾರ ಅಭಿಮಾನಿ ಬಳಗವಿದೆ. ಇನ್ನು ಮುಂಬೈ ಕೂಡ ಅಭಿಮಾನಿಗಳಿಗೆ ವಿಶೇಷ ಪ್ರಾತಿನಿದ್ಯ ನೀಡಿದೆ. ಈ ಬಾರಿಯ ಆಯ್ದ ಅಭಿಮಾನಿಗಳಿಗೆ ಮುಂಬೈ ಇಂಡಿಯನ್ಸ್ ತಂಡದ ಸ್ಟಾರ್ ಆಟಾಗರರನ್ನು ಭೇಟಿ ಮಾಡೋ ಅವಕಾಶ ನೀಡಿತ್ತು.
ಇದನ್ನೂ ಓದಿ: ಬೀಮರ್ ಎಸೆತ: ಸಿರಾಜ್‌ಗೆ ಗೇಟ್ ಪಾಸ್- ಚಹಾರ್‌ಗೆ ಅವಕಾಶ; ಯಾಕೆ ಹೀಗೆ?
ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಒನರ್ ನೀತಾ ಅಂಬಾನಿ ಹಾಗೂ ಅಕಾಶ್ ಅಂಬಾನಿ ಅಭಿಮಾನಿಗಳಿಗೆ ಹೊಸ ಅವಕಾಶ ಕಲ್ಪಿಸಿದ್ದರು. ಮುಂಬೈನ ವಾಖಂಡೆ ಕ್ರೀಡಾಂಗಣದಲ್ಲಿ ಆಯ್ದ ಅಭಿಮಾನಿಗಳಿಗೆ ಆ ಅವಕಾಶ ನೀಡಲಾಗಿತ್ತು. ಆರಂಭದಲ್ಲಿ ನೀತಾ ಅಂಬಾನಿ ಹಾಗೂ ಆಕಾಶ್ ಭೇಟಿ ಮಾಡಿದ ಅಭಿಮಾನಿ ಬಳಿಕ ಮುಂಬೈ ಇಂಡಿಯನ್ಸ್ ತಂಡದ ಸೂಪರ್ ಸ್ಟಾರ್, ನಾಯಕ ರೋಹಿತ್ ಶರ್ಮಾರನ್ನು ಭೇಟಿ ಮಾಡಲು ಅವಕಾಶ ನೀಡಲಾಯಿತು. ರೋಹಿತ್ ಕಂಡೊಡನೆ ತಕ್ಷಣ ತಬ್ಬಿಕೊಂಡ ಅಭಿಮಾನಿ ಗಳಗಳನೇ ಅತ್ತು ಬಿಟ್ಟ.
ಇದನ್ನೂ ಓದಿ: IPL ಕ್ರಿಕೆಟ್‌ನಲ್ಲಿ ಅಲ್ಜಾರಿ ಜೋಸೆಫ್ ಸರ್ವ ಶ್ರೇಷ್ಠ ದಾಖಲೆ!
ರೋಲ್ ಮಾಡೆಲ್ ಭೇಟಿಯಾದ ಖುಷಿಯನ್ನು ನಿಯಂತ್ರಿಸಲು ಅಭಿಮಾನಿಗೆ ಸಾಧ್ಯವಾಗಲಿಲ್ಲ. ರೋಹಿತ್ ನೋಡಿ ಖುಷಿಗೆ ಮಾತೇ ಬರಲಿಲ್ಲ. ಅಭಿಮಾನಿಯ ಸಂತಸ ನೋಡಿ ರೋಹಿತ್ ಶರ್ಮಾ ಕೂಡ ಭಾವುಕರಾದರು. ಇನ್ನು ನೀತಾ ಅಂಬಾನಿ, ಆಕಾಶ್ ಅಂಬಾನಿ ಅಭಿಮಾನಿಯ ಅಭಿಮಾನಕ್ಕೆ ತಲೆಬಾಗಿದರು.
