Asianet Suvarna News Asianet Suvarna News

17ರ ಪೋರನ ಏಕಾಂಗಿ ಹೋರಾಟ- ಡೆಲ್ಲಿಗೆ 116 ರನ್ ಟಾರ್ಗೆಟ್

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್ ನ ಬ್ಯಾಟ್ಸ್‌ಮನ್‌ಗಳ ಸದ್ದೇ ಇಲ್ಲ. ಆರಂಭದಿಂದ ಅಂತ್ಯದವರೆಗೂ ಡೆಲ್ಲಿ ಬೌಲರ್‌ಗಳೇ ಪ್ರಾಬಲ್ಯ ಮೆರೆದಿದ್ದಾರೆ. ಡೆಲ್ಲಿ ಸೂಪರ್ ಬೌಲಿಂಗ್ ದಾಳಿಗೆ ರಾಜಸ್ಥಾನ 115 ರನ್ ಸಿಡಿಸಿದೆ. ಪಂದ್ಯದ ಅಪ್‌ಡೇಟ್ಸ್ ಇಲ್ಲಿದೆ.

IPL 2019 Ishanth sharma Amith mishra help Delhi to restrict rajasthan by 115 runs
Author
Bengaluru, First Published May 4, 2019, 5:47 PM IST

ದೆಹಲಿ(ಮೇ.04): ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಗೆದ್ದು ಪ್ಲೇ ಆಫ್ ಆಸೆ ಜೀವಂತವಾಗಿರಿಸೋ ಆತ್ಮವಿಶ್ವಾಸದಲ್ಲಿರುವ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಬ್ಯಾಟ್ಸ್‌ಮನ್‌ಗಳು ಕೈಕೊಟ್ಟಿದ್ದಾರೆ. ರಿಯಾನ್ ಪರಾಗ್ ಏಕಾಂಗಿ ಹೋರಾಟ ನಡೆವೆಯೂ ಡೆಲ್ಲಿ ಮಾರಕ ದಾಳಿಗೆ ತುತ್ತಾದ ರಾಜಸ್ಥಾನ  9 ವಿಕೆಟ್ ನಷ್ಟಕ್ಕೆ 115 ರನ್‌ ಸಿಡಿಸಿದೆ. ಮೂಲಕ ಡೆಲ್ಲಿ ತಂಡಕ್ಕೆ 116 ರನ್ ಸುಲಭ ಗುರಿ ನೀಡಿದೆ.

ಟಾಸ್ ಗೆದ್ದ ರಾಜಸ್ಥಾನ ಚೇಸಿಂಗ್ ಬದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ರಾಜಸ್ಥಾನ ಟಾಸ್ ಗೆದ್ದಿದ್ದೇ ಬಂತು, ಕ್ರೀಸಿಗಳಿದಾಗ ಎಲ್ಲವೂ ಉಲ್ಟಾ ಆಗಿತ್ತು. ಆರಂಭದಲ್ಲೇ ಇಶಾಂತ್ ಶರ್ಮಾ ದಾಳಿಗೆ ತತ್ತರಿಸಿತು. ಅಮಿತ್ ಮಿಶ್ರಾ ಕೂಡ  ಸ್ಪಿನ್ ಮೋಡಿ ಮಾಡೋ ಮೂಲಕ ರಾಜಸ್ಥಾನಕ್ಕೆ ಶಾಕ್ ಮೇಲೆ ಶಾಕ್ ನೀಡಿದರು.

ನಾಯಕ ಅಜಿಂಕ್ಯ ರಹಾನೆ 2, ಲಿವಿಂಗ್ ಲಿಯಾಮ್‌ಸ್ಟೋನ್ 14, ಸಂಜುಸಾಮ್ಸನ್ 5, ಮಹಿಪಾಲ್ ಲೊಮ್ರೊರ್ 8, ಶ್ರೇಯಸ್ ಗೋಪಾಲ್ 12, ಸ್ಟುವರ್ಟ್ ಬಿನ್ನಿ ಶೂನ್ಯ, ಕೆ ಗೌತಮ್ 6 ರನ್ ಸಿಡಿಸಿ ಔಟಾದರು. ಇತ್ತ ರಿಯಾನ್ ಪರಾಗ್ ಏಕಾಂಗಿ ಹೋರಾಟ ನೀಡಿದರು. ಆದರೆ ಇತರರಿಂದ ಉತ್ತಮ ಸಾಥ್ ಸಿಗಲಿಲ್ಲ.  

ಅದ್ಬುತ ಪ್ರದರ್ಶನ ನೀಡಿದ 17 ವರ್ಷದ ರಿಯಾನ್ ಆಕರ್ಷಕ ಅರ್ಧಶತಕ ಸಿಡಿಸಿದರು. ಈ ಮೂಲಕ IPL ಟೂರ್ನಿಯಲ್ಲಿ ಹಾಫ್ ಸೆಂಚುರಿ ಸಿಡಿಸಿದ ಅತೀ ಕಿರಿಯ ಕ್ರಿಕೆಟಿಗ ಅನ್ನೋ ದಾಖಲೆ ಬರೆದರು. ಅಂತಿಮ ಎಸೆತದಲ್ಲಿ ರಿಯಾನ್ ಪರಾಗ್ ಔಟಾದರು. ಪರಾದ್ 50 ರನ್ ಸಿಡಿಸಿದರು. ಈ ಮೂಲಕ ರಾಜಸ್ಥಾನ 9 ವಿಕೆಟ್ ನಷ್ಟಕ್ಕೆ 115 ರನ್ ಸಿಡಿಸಿತು 

Follow Us:
Download App:
  • android
  • ios