ದೆಹಲಿ(ಏ.28): ಫಿರೋಝ್ ಷಾ ಕೋಟ್ಲಾ ಮೈದಾನದಲ್ಲಿ ನಡೆಯುತ್ತಿರುವ 46ನೇ ಐಪಿಎಲ್ ಲೀಗ್ ಹೋರಾಟ ಅಭಿಮಾನಿಗಳ ಕುತೂಹಲ ಇಮ್ಮಡಿಗೊಳಿಸಿದೆ. ರಾಯಲ್ ಚಾಲೆಂಜರ್ಸ್ ವಿರುದ್ದ ಅಬ್ಬರಿಸಿದ ಡೆಲ್ಲಿ ಕ್ಯಾಪಿಟಲ್ಸ್ 5 ವಿಕೆಟ್ ನಷ್ಟಕ್ಕೆ 187 ರನ್ ಸಿಡಿಸಿದೆ. ಈ ಮೂಲಕ RCBಗೆ 188 ರನ್ ಟಾರ್ಗೆಟ್ ನೀಡಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಡೆಲ್ಲಿ ತಂಡಕ್ಕೆ ಶಿಖರ್ ಧವನ್ ಉತ್ತಮ ಆರಂಭ ನೀಡಿದರು. ಆದರೆ ಪೃಥ್ವಿ ಶಾ ಕೇವಲ 18 ರನ್ ಸಿಡಿಸಿ ಔಟಾದರು. ಧವನ್ ಹಾಗೂ ನಾಯಕ ಶ್ರೇಯಸ್ ಅಯ್ಯರ್ ಜೊತೆಯಾಟ ಡೆಲ್ಲಿ ತಂಡ ಬೃಹತ್ ಮೊತ್ತಕ್ಕೆ ಕಾರಣವಾಯಿತು. ಧವನ್ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರು.

ಧವನ್ 50 ರನ್ ಸಿಡಿಸಿ ಔಟಾದರು. ಇನ್ನು ರಿಷಬ್ ಪಂತ್ ನಿರಾಸೆ ಅನುಭವಿಸಿದರು. ಶ್ರೇಯಸ್ ಅಯ್ಯರ್ 37 ಎಸೆತದಲ್ಲಿ 52 ರನ್ ಸಿಡಿಸಿ ಔಟಾದರು. ಕೊಲಿನ ಇನ್‌ಗ್ರಾಂ 11ರನ್ ಕಾಣಿಕೆ ನೀಡಿದರು. ಶೆರ್ಫಾನೆ ರುದ್‌ಫೋರ್ಡ್ ಅಜೇಯ 28 ರನ್ ಹಾಗೂ ಅಕ್ಸರ್ ಪೇಟಲ್ ಅಜೇಯ 16 ರನ್ ಮೂಲಕ ಡೆಲ್ಲಿ 5 ವಿಕೆಟ್ ನಷ್ಟಕ್ಕೆ 187 ರನ್ ಸಿಡಿಸಿತು.