ಹೈದರಾಬಾದ್(ಏ.14):  ಡೆಲ್ಲಿ ಕ್ಯಾಪಿಟಲ್ಸ್ ನೀಡಿದ ಸುಲಭ ಟಾರ್ಗೆಟ್, ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಚೇಸ್ ಮಾಡಲು ಸಾಧ್ಯವಾಗಿಲ್ಲ. ಡೆಲ್ಲಿ ತಂಡದ  ಅದ್ಬುತ ಬೌಲಿಂಗ್ ದಾಳಿ ಗೆ ಹೈದರಾಬಾದ್ ತತ್ತರಿಸಿತು. ಹೀಗಾಗಿ  ಡೆಲ್ಲಿ 39 ರನ್ ಗೆಲುವು ಸಾಧಿಸಿದೆ.

ಗೆಲುವಿಗೆ 156 ರನ್ ಟಾರ್ಗೆಟ್ ಪಡೆದ SRH ತಂಡಕ್ಕೆ ಡೇವಿಡ್ ವಾರ್ನರ್ ಹಾಗೂ ಜಾನಿ ಬೈರ್‌ಸ್ಟೋ ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್‌ಗೆ ಈ ಜೋಡಿ 72 ರನ್ ಜೊತೆಯಾಟ ನೀಡಿದರು.  ಬೈರ್‌ಸ್ಟೋ 41 ರನ್ ಸಿಡಿಸಿ ಔಟಾದರು. ನಾಯಕ ಕೇನ್ ವಿಲಿಯಮ್ಸನ್ ಕೇವಲ 3 ರನ್ ಸಿಡಿಸಿ ನಿರ್ಗಮಿಸಿದರು.

ರಿಕಿ ಬುಯಿ 7 ರನ್‌ಗೆ ಔಟಾದರು. ಆದರೆ ಡೇವಿಡ್ ವಾರ್ನರ್ ಹೋರಾಟ ನೀಡಿದರು. ಆದರೆ ಅರ್ಧಶತಕ ಸಿಡಿಸಿದ ಬೆನ್ನಲ್ಲೇ ಔಟಾದರು. ವಾರ್ನರ್ 51 ರನ್ ಕಾಣಿಕೆ ನೀಡಿದರು. ವಿಜಯ್ ಶಂಕರ್ ಕೂಡ ನೆರವಾಗಲಿಲ್ಲ. ಅಷ್ಟರಲ್ಲಿ ಹೈದರಾಬಾದ್ ತಂಡದ ಗೆಲುವಿನ ಹಾದಿ ಮತ್ತಷ್ಟು ಕಠಿಣವಾಯಿತು.

ಕಾಗಿಸೋ ರಬಾಡ, ಕ್ರಿಸ್ ಮೊರಿಸ್ ಹಾಗೂ ಕೀಮೋ ಪೌಲ್ ದಾಳಿ ಎದುರಿಸಲು SRH ಪರದಾಡಿತು. ಅಂತಿಮ ಹಂತದಲ್ಲಿ ಹೈದರಾಬಾದ್ ದಿಢೀರ್ ಕುಸಿತ ಕಂಡಿತು.  18.5 ಓವರ್‌ಗಳಲ್ಲಿ 116 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಡೆಲ್ಲಿ 39 ರನ್ ಗೆಲುವು ಸಾಧಿಸಿತು. ರಬಾಡ 4, ಮೊರಿಸ್ 3 ಹಾಗೂ ಕೀಮೋ ಪೌಲ್ 3 ವಿಕೆಟ್ ಕಬಳಿಸಿದರು.