Asianet Suvarna News Asianet Suvarna News

ಡೆಲ್ಲಿ ವಿರುದ್ಧ ಮುಗ್ಗರಿಸಿದ ಕೊಹ್ಲಿ ಪಡೆ- RCB ಪ್ಲೇ ಆಫ್ ಕನಸಿಗೆ ಹಿನ್ನಡೆ!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಗೆಲುವಿನ ಓಟಕ್ಕೆ ಡೆಲ್ಲಿ ಬ್ರೇಕ್ ಹಾಕಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ನಡೆದ ಹೋರಾಟದಲ್ಲಿ ಬೆಂಗಳೂರು ಮುಗ್ಗರಿಸಿದೆ. ಸೋಲಿನ ಬಳಿಕವೂ RCB ಪ್ಲೇ ಆಫ್ ಪ್ರವೇಶಕ್ಕೆ ಅವಕಾಶವಿದೆಯಾ? ಇಲ್ಲಿದೆ ವಿವರ.

IPL 2019  delhi capitals beat rcb by 16 runs at Kotla stadium
Author
Bengaluru, First Published Apr 28, 2019, 7:34 PM IST

ದೆಹಲಿ(ಏ.28): ಹ್ಯಾಟ್ರಿಕ್ ಗೆಲುವಿನ ಮೂಲಕ ಭರ್ಜರಿ ಕಮ್‌ಬ್ಯಾಕ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಶಾಕ್ ನೀಡಿದೆ. ಮಹತ್ವದ ಪಂದ್ಯದಲ್ಲಿ RCB ಸೋಲಿಗೆ ಶರಣಾಗಿದೆ. ಈ ಮೂಲಕ ಕೊಹ್ಲಿ ಸೈನ್ಯದ ಪ್ಲೇ ಆಫ್ ಕನಸು ಕಮರಿಹೋದರೆ, ಡೆಲ್ಲಿ 2ನೇ ತಂಡವಾಗಿ ಪ್ಲೇ ಆಫ್ ಪ್ರವೇಶಿಸಿತ. RCB ಇನ್ನೇನಿದ್ದರೂ ಸೋಲಿನ ಅಂತರ ಕಡಿಮೆ ಮಾಡಿಕೊಳ್ಳಲು ಹೋರಾಟ ನಡೆಸಬೇಕಿದೆ.

ಗೆಲುವಿಗೆ 188 ರನ್ ಟಾರ್ಗೆಟ್ ಪಡೆದ RCB ಉತ್ತಮ ಆರಂಭ ಪಡೆಯಿತು. ಪಾರ್ಥೀವ್ ಪಟೇಲ್ ಹಾಗೂ ನಾಯಕ ವಿರಾಟ್ ಕೊಹ್ಲಿ ಮೊದಲ ವಿಕೆಟ್‌ಗೆ 63 ರನ್ ಜೊತೆಯಾಟ ನೀಡಿದರು. ಒಂದು ಜೀವದಾನ ಪಡೆದರೂ ಕೊಹ್ಲಿ 23 ರನ್ ಸಿಡಿಸಿ ಪೆವಿಲಿಯನ್ ಸೇರಿದರು.  ಪಾರ್ಥೀವ್ ಪಟೇಲ್ 20 ಎಸೆತದಲ್ಲಿ 39 ರನ್ ಸಿಡಿಸಿ ಔಟಾದರು.

ಎಬಿ ಡಿವಿಲಿಯರ್ಸ್ ಹೋರಾಟ 17 ರನ್‌ಗಳಿಗೆ ಅಂತ್ಯವಾಯಿತು. ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದ RCB ಒತ್ತಡಕ್ಕೆ ಸಿಲುಕಿತು. ಹೆನ್ರಿತ್ ಕ್ಲಸೆನ್ ಹಾಗೂ ಶಿವಂ ದುಬೆ ಅಬ್ಬರಿಸಲಿಲ್ಲ. 111 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು RCB ಗೆಲುವಿನ ಹಾದಿ ಮತ್ತಷ್ಟು ಕಠಿಣವಾಯಿತು.

ಗುರುಕೀರತ್ ಸಿಂಗ್ ಹಾಗೂ ಮಾರ್ಕಸ್ ಸ್ಟೊಯ್ನಿಸ್ ಜೊತೆಯಾಟ RCB ಅಭಿಮಾನಿಗಳಲ್ಲಿ ಗೆಲುವಿನ ಆಸೆ ಚಿಗುರೊಡೆಸಿತು. ಅಂತಿಮ 18 ಎಸೆತದಲ್ಲಿ RCB ಗೆಲುವಿಗೆ 36 ರನ್ ಅವಶ್ಯಕತೆ ಇತ್ತು. ಗುರುಕೀರತ್ ಸಿಂಗ್ 27 ರನ್ ಸಿಡಿಸಿ ಔಟಾದರು. ಹೀಗಾಗಿ  RCB ಗೆಲುವು ಕಷ್ಟವಾಯಿತು. ಅಂತಿಮ 6 ಎಸೆತದಲ್ಲಿ 25 ರನ್ ಬೇಕಿತ್ತು. ವಾಶಿಂಗ್ಟನ್ ಸುಂದರ್ ಕೇವಲ 1 ರನ್ ಸಿಡಿಸಿ ನಿರ್ಗಮಿಸಿದರು.

ಮಾರ್ಕಸ್ ಸ್ಟೊಯ್ನಿಸ್ ಅಜೇಯ ರನ್ ಸಿಡಿಸಿ ಹೋರಾಟ ನೀಡಿದರೂ ಗೆಲುವು ಸಿಗಲಿಲ್ಲ. RCB 7 ವಿಕೆಟ್ ನಷ್ಟಕ್ಕೆ 171 ರನ್ ಸಿಡಿಸಿ ಸೋಲೊಪ್ಪಿಕೊಂಡಿತು.  16 ರನ್ ಗೆಲುವು ಸಾಧಿಸಿದ ಡೆಲ್ಲಿ 2ನೇ ತಂಡವಾಗಿ ಪ್ಲೇ ಆಫ್ ಪ್ರವೇಶಿಸಿತು. ಇತ್ತ RCB ಪ್ಲೇ ಆಫ್ ಹಂತಕ್ಕೇರೋ ಕೊನೆಯ ಆಸೆಯೂ ಮಣ್ಣಾಯಿತು.

Follow Us:
Download App:
  • android
  • ios