ಮುಂಬೈ(ಏ.03): ಐಪಿಎಲ್ ಟೂರ್ನಿಯ ಬಲಿಷ್ಠ ತಂಡಗಳ ಹೋರಾಟಕ್ಕೆ ಮುಂಬೈನ ವಾಂಖೆಡೆ ಕ್ರೀಡಾಂಗಣ ಸಾಕ್ಷಿಯಾಗಲಿದೆ. 3 ಬಾರಿ ಐಪಿಎಲ್ ಟ್ರೋಫಿ ಗೆದ್ದಿರುವ ಮುಂಬೈ ಹಾಗೂ CSK ತಂಡಗಳ ಹೋರಾಟ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಇದೀಗ ಚೆನ್ನೈ ವಿರುದ್ಧ ಟಾಸ್ ಗೆದ್ದ  ಮುಂಬೈ ಇಂಡಿಯನ್ಸ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. 

 

 

ಇದನ್ನೂ ಓದಿ: ಧೋನಿ CSK ಪರ ಅಬ್ಬರಿಸುವುದರ ಹಿಂದಿನ ಗುಟ್ಟೇನು..?

ಚೆನ್ನೈ ಸೂಪರ್ ಕಿಂಗ್ಸ್ 3 ರಲ್ಲಿ 3 ಪಂದ್ಯ ಗೆದ್ದು ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಇನ್ನು ಮುಂಬೈ ಇಂಡಿಯನ್ಸ್ 2 ಸೋಲು ಹಾಗೂ 1 ಗೆಲುವು ಸಾಧಿಸಿದೆ. ಇದೀಗ ತವರಿನಲ್ಲಿ ಚೆನ್ನೈ ಎದುರಿಸುತ್ತಿರುವ ಮುಂಬೈಗೆ ಕಠಿಣ ಸವಾಲು ಎದುರಾಗೋದರಲ್ಲಿ ಯಾವುದೇ ಅನುಮಾನವಿಲ್ಲ.