ಚೆನ್ನೈನಲ್ಲಿ ನಡೆಯುತ್ತಿರುವ CSK ಹಾಗೂ KKR ನಡುವಿನ ಪಂದ್ಯದ ಟಾಸ್ ಪ್ರಕ್ರಿಯೆ ಮುಗಿದಿದೆ. ಟಾಸ್ ಗೆದ್ದಿರುವ CSK  ಫೀಲ್ಡಿಂಗ್ ಆಯ್ಕೆ ಮಾಡಿದೆ. ಉಭಯ ತಂಡದ ಬದಲಾವಣೆ ಏನು? ಇಲ್ಲಿದೆ ವಿವರ

ಚೆನ್ನೈ(ಏ.09): ಐಪಿಎಲ್ ಟೂರ್ನಿಯಲ್ಲಿಂದ ಬಲಿಷ್ಠ ತಂಡಗಳ ಹೋರಾಟ. ಅಂಕಪಟ್ಟಿಯಲ್ಲಿ ಮೊದಲೆರೆಡು ಸ್ಥಾನ ಹಂಚಿಕೊಂಡಿರುವ ಕೋಲ್ಕತಾ ನೈಟ್ ರೈಡರ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗುತ್ತಿದೆ. ಟಾಸ್ ಗೆದ್ದಿರುವ CSK ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.ಉಭಯ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Scroll to load tweet…

ಈ ಆವೃತ್ತಿಯಲ್ಲಿ ತವರಿನಲ್ಲಿ ಧೋನಿ ಸೈನ್ಯ ಅಜೇಯ ಓಟ ಮುಂದವರಿಸಿದೆ. ಇದೀಗ ರಸೆಲ್ ಆರ್ಭಟಕ್ಕೆ ಬ್ರೇಕ್ ಹಾಕಲು CSK ಮುಂದಾಗಿದೆ. ಕೆಕೆಆರ್ 5 ಪಂದ್ಯದಲ್ಲಿ 4ರಲ್ಲಿ ಗೆಲವು ಸಾಧಿಸಿ ನೆಟ್ ರನ್‌ರೇಟ್ ಆಧಾರದಲ್ಲಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಇನ್ನು CSK 5 ರಲ್ಲಿ 4 ಗೆಲುವು ಸಾಧಿಸಿ 2ನೇ ಸ್ಥಾನದಲ್ಲಿದೆ.

Scroll to load tweet…