ಚೆನ್ನೈ(ಏ.26): ಐಪಿಎಲ್ ಟೂರ್ನಿಯಲ್ಲಿಂದು ಬಲಿಷ್ಠ ತಂಡಗಳ ಹೋರಾಟ. ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಇಂದಿನ ಪಂದ್ಯ ಉಭಯ ತಂಡಗಳಿಗೆ ಪ್ರಮುಖವಾಗಿದೆ. ಎರಡೂ ತಂಡ ಒಟ್ಟು 3 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಭಾರಿ ಚೆನ್ನೈ ಮೊದಲ ಸ್ಥಾನದಲ್ಲಿದ್ದರೆ, ಮುಂಬೈ ಇಂಡಿಯನ್ಸ್ 3ನೇ ಸ್ಥಾನದಲ್ಲಿದೆ.

ಇದನ್ನೂ ಓದಿ: ಗೆಲುವಿಗೆ ಮರಳಿದ RCBಗೆ ನಿಜಕ್ಕೂ ನೋವಾಗಿದ್ದು ಎಲ್ಲಿ? ಕೊಹ್ಲಿ ಹೇಳಿದ್ರು ಸತ್ಯ!

ಚೆನ್ನೈನ ಚಿಪಾಕ್ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಹೋರಾಟ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಸತತ 2 ಪಂದ್ಯ ಸೋತು ಸನ್‌ರೈಸರ್ಸ್ ಹೈದರಾಬಾದ್ ವಿರುದ್ದ ಗೆಲುವಿನ ಲಯ ಕಂಡುಕೊಂಡಿರುವ ಚೆನ್ನೈ ಇದೀಗ ಮತ್ತೊಂದು ಗೆಲುವಿನ ಮೂಲಕ ಪ್ಲೇ ಆಫ್ ಕದನದಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳೋ ಲೆಕ್ಕಾಚಾರದಲ್ಲಿದೆ. ಇತ್ತ ಮುಂಬೈ ಕಳೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಮುಗ್ಗರಿಸಿರುವ ಮುಂಬೈ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಇಲ್ಲಿದೆ CSK ಹಾಗೂ MI ಸಂಭಾವ್ಯ ತಂಡ.

ಇದನ್ನೂ ಓದಿ: ಹೊಸ ತಂಡ ಕೂಡಿಕೊಂಡ ರಹಾನೆ..!

CSK ಸಂಭವನೀಯ ತಂಡ:
ಶೇನ್ ವ್ಯಾಟ್ಸನ್, ಫಾಫ್ ಡುಪ್ಲೆಸಿಸ್, ಸುರೇಶ್ ರೈನಾ, ಅಂಬಾಟಿ ರಾಯುಡು, ಕೇದಾರ್ ಜಾಧವ್, ಎಂ.ಎಸ್.ಧೋನಿ, ಡ್ವೇನ್ ಬ್ರಾವೋ, ರವೀಂದ್ರ ಜಡೇಜಾ, ಇಮ್ರಾನ್, ತಾಹೀರ್, ದೀಪಕ್ ಚಹಾರ್, ಹರ್ಭಜನ್ ಸಿಂಗ್

ಮುಂಬೈ ಸಂಭವನೀಯ ತಂಡ:
ರೋಹಿತ್ ಶರ್ಮಾ, ಕ್ವಿಂಟನ್ ಡಿಕಾಕ್, ಸೂರ್ಯಕುಮಾರ್ ಯಾಧವ್, ಇಶಾನ್ ಕಿಶನ್, ಕೀರನ್ ಪೊಲಾರ್ಡ್, ಹಾರ್ದಿಕ್ ಪಾಂಡ್ಯ, ಕ್ರುನಾಲ್ ಪಾಂಡ್ಯ, ದೀಪಕ್ ಚಹಾರ್, ಜಸ್ಪ್ರೀತ್ ಬುಮ್ರಾ, ಲಸಿತ್ ಮಲಿಂಗ, ಮಯಾಂಕ್ ಮಾರ್ಕಂಡೆ