ಚೆನ್ನೈ(ಮೇ.01): ಅಗ್ರಸ್ಥಾನಕ್ಕಾಗಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಹೋರಾಟ ನಡೆಸುತ್ತಿದೆ. ಸುರೇಶ್ ರೈನಾ ಅರ್ಧಶತಕ ಹಾಗೂ ಎಂ.ಎಸ್.ಧೋನಿ ಸ್ಫೋಟಕ ಬ್ಯಾಟಿಂಗ್  ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ 4 ವಿಕೆಟ್ ನಷ್ಟಕ್ಕೆ 179 ರನ್ ಸಿಡಿಸಿದೆ. ಇದೀಗ ಡೆಲ್ಲಿ ಕ್ಯಾಪಿಟಲ್ಸ್ ಅಗ್ರಸ್ಥಾನ ಉಳಿಸಿಕೊಳ್ಳಲು 180 ರನ್ ಸಿಡಿಸಬೇಕಿದೆ.

ಟಾಸ್ ಸೋತು ಬ್ಯಾಟಿಂಗ್ ಇಳಿದ ಚೆನ್ನೈ ಸೂಪರ್ ಕಿಂಗ್ಸ್ ನಿಧಾನಗತಿಯಲ್ಲಿ ಬ್ಯಾಟಿಂಗ್ ನಡೆಸಿತು.ಶೇನ್ ವ್ಯಾಟ್ಸನ್ ಶೂನ್ಯಕ್ಕೆ ಔಟಾದರು. ಬಳಿಕ ಫಾಫ್ ಡುಪ್ಲೆಸಿಸ್ ಹಾಗೂ ಸುರೇಶ್ ರೈನಾ ತಂಡಕ್ಕೆ ಚೇತರಿಕೆ ನೀಡಿದರು. ಆದರೆ ಕಡಿಮೆ ರನ್‌ರೇಟ್ ತಂಡದ ಮೊತ್ತದ ಮೇಲೆ ಪರಿಣಾಮ ಬೀರಿತು.  ಡುಪ್ಲೆಸಿಸ್ 39 ರನ್ ಸಿಡಿಸಿ ಔಟಾದರು.

ಹೋರಾಟ ನೀಡಿದ ಸುರೇಶ್ ರೈನಾ 37 ಎಸೆತದಲ್ಲಿ 59 ರನ್ ಸಿಡಿಸಿ ಔಟಾದರು. ಎಂ.ಎಸ್.ಧೋನಿ ಹಾಗೂ ರವೀಂದ್ರ ಜಡೇಜಾ ಆಗಮನದ ಬಳಿಕ CSK ರನ್ ವೇಗ ಹೆಚ್ಚಾಯಿತು. ಜಡೇಜಾ 10 ಎಸೆತದಲ್ಲಿ 2 ಬೌಂಡರಿ ಹಾಗೂ 2 ಸಿಕ್ಸರ್ ಮೂಲಕ 25 ರನ್ ಸಿಡಿಸಿ ಔಟಾದರು.  ಧೋನಿ 22 ಎಸೆತದಲ್ಲಿ ಅಜೇಯ 44 ರನ್ ಸಿಡಿಸಿದರು. ಈ ಮೂಲಕ CSK 4 ವಿಕೆಟ್ ನಷ್ಟಕ್ಕೆ ರನ್ ಸಿಡಿಸಿತು.