ಚೆನ್ನೈ(ಮೇ.07): 12ನೇ ಆವೃತ್ತಿ ಐಪಿಎಲ್ ಟೂರ್ನಿಯ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ಗೆಲುವಿಗಾಗಿ ತೀವ್ರ ಹೋರಾಟ ನಡೆಯುತ್ತಿದೆ. ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ನೀಡುವಲ್ಲಿ ವಿಫಲವಾಗಿರುವ ಚೆನ್ನೈ 4 ವಿಕೆಟ್ ನಷ್ಟಕ್ಕೆ 131 ರನ್ ಸಿಡಿಸಿದೆ. ಈ ಮೂಲಕ ಮುಂಬೈ ಗೆಲುವಿಗೆ 132 ರನ್ ಟಾರ್ಗೆಟ್ ನೀಡಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಚೆನ್ನೈ ಆರಂಭದಲ್ಲೇ ಫಾಪ್ ಡುಪ್ಲೆಸಿಸ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಇನ್ನು ಸುರೇಶ್ ರೈನಾ ಕೂಡ ಆಸರೆಯಾಗಲಿಲ್ಲ. ರೈನಾ 5 ರನ್ ಸಿಡಿಸಿ ಔಟಾದರು. ಇತ್ತ ಹೋರಾಟ ನೀಡೋ ಸೂಚನೆ ನೀಡಿದ ಶೇನ್ ವ್ಯಾಟ್ಸನ್ 10 ರನ್ ಸಿಡಿಸಿ ಔಟಾದರು. 32 ರನ್‌ಗೆ ಚೆನ್ನೈ 3 ವಿಕೆಟ್ ಕಳೆದುಕೊಂಡಿತು.

ಮುರಳಿ ವಿಜಯ್ 26 ರನ್ ಸಿಡಿಸಿ ಔಟಾದರು. ಅಂಬಾಟಿ ರಾಯುಡು ಹಾಗೂ ನಾಯಕ ಎಂ.ಎಸ್.ಧೋನಿ ಜೊತೆಯಾಟ ಅಭಿಮಾನಿಗಳಿಗೆ ಕೊಂಚ ಸಮಾಧಾನ ತಂದಿತು. 31 ರನ್ ಸಿಡಿಸಿ ಅಬ್ಬರಿಸುತ್ತಿದ್ದ ಧೋನಿಗೆ ನೋ ಬಾಲ್ ಜೀವದಾನ ವರವಾಯಿತು.  ರಾಯುಡು ಅಜೇಯ 42 ರನ್ ಸಿಡಿಸಿದರೆ, ಧೋನಿ ಅಜೇಯ 37 ರನ್ ಭಾರಿಸಿದರು. ಈ ಮೂಲಕ ಚೆನ್ನೈ 4 ವಿಕೆಟ್ ನಷ್ಟಕ್ಕೆ 131 ರನ್ ಸಿಡಿಸಿತು.