Asianet Suvarna News Asianet Suvarna News

IPL 2019: ಡೆಲ್ಲಿ ಮಣಿಸಿ ಅಗ್ರಸ್ಥಾನಕ್ಕೇರಿದ CSK

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆಲ್ರೌಂಡರ್ ಪ್ರದರ್ಶನ ನೀಡಿದ ಚೆನ್ನೈ ಸೂಪರ್ ಕಿಂಗ್ಸ್ ಭರ್ಜರಿ 80 ರನ್ ಗೆಲುವು ಸಾಧಿಸಿದೆ. CSK ಪರ ರೈನಾ ಹಾಗೂ ಧೋನಿ ಬ್ಯಾಟಿಂಗ್‌ನಲ್ಲಿ ಮಿಂಚಿದರೆ, ತಾಹೀರ್ ಹಾಗೂ ಜಡೇಜಾ ಬೌಲಿಂಗ್‌ನಲ್ಲಿ ಕಮಾಲ್ ಮಾಡಿದರು. ಈ ಪಂದ್ಯದ ಹೈಲೈಟ್ಸ್ ಇಲ್ಲಿದೆ. 

IPL 2019 CSK beat delhi capitals by 80 runs at chennai
Author
Bengaluru, First Published May 1, 2019, 11:17 PM IST
  • Facebook
  • Twitter
  • Whatsapp

ಚೆನ್ನೈ(ಮೇ.01): 12ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತೆ ಮೊದಲ ಸ್ಥಾನಕ್ಕೇರಿದೆ. ಇಮ್ರಾನ್ ತಾಹೀರ್ ಹಾಗೂ ರವೀಂದ್ರ ಜಡೇಜಾ ಅದ್ಬುತ ಬೌಲಿಂಗ್ ದಾಳಿಗೆ ಡೆಲ್ಲಿ ಕ್ಯಾಪಿಟಲ್ಸ್ ತತ್ತರಿಸಿದೆ. ಡೆಲ್ಲಿ ತಂಡ ಕೇವಲ 16.2  ಓವರ್‌ಗಳಲ್ಲಿ 99 ರನ್‌ಗೆ ಆಲೌಟ್ ಆಗಿದೆ. ಈ ಮೂಲಕ ಚೆನ್ನೈ 80 ರನ್ ಭರ್ಜರಿ ಗೆಲುವು ಸಾಧಿಸಿತು. 

ಗೆಲುವಿಗೆ 180 ರನ್ ಟಾರ್ಗೆಟ್ ಪಡೆದ ಡೆಲ್ಲಿ ಕ್ಯಾಪಿಟಲ್ಸ್ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಸಂಕಷ್ಟ ಅನುಭವಿಸಿತು. ಪೃಥ್ವಿ ಶಾ 4 ರನ್ ಸಿಡಿಸಿ ಔಟಾದರು. ಶಿಖರ್ ಧವನ್ 19 ರನ್ ಸಿಡಿಸಿ ನಿರ್ಗಮಿಸಿದರು. ನಾಯಕ ಶ್ರೇಯಸ್ ಅಯ್ಯರ್  ಹೊರತು ಪಡಿಸಿದರೆ ಇನ್ಯಾವ ಬ್ಯಾಟ್ಸ್‌ಮನ್ ಕೂಡ ಹೋರಾಟ ನೀಡಲಿಲ್ಲ.

ರಿಷಪ್ ಪಂತ್, ಕೊಲಿನ್ ಇನ್‌ಗ್ರಾಂ, ಅಕ್ಸರ್ ಪಟೇಲ್, ಶೆರ್ಫಾನೆ ರುದ್‌ಫೋರ್ಡ್ ಅಬ್ಬರಿಸಿಲ್ಲ. ಕ್ರಿಸ್ ಮೋರಿಸ್ ಕ್ರಿಸ್‌ನಲ್ಲಿ ನಿಲ್ಲೋ ಮೊದಲೇ ಧೋನಿ ಸ್ಟಂಪ್ ಔಟ್ ಮಾಡಿದರು. ಏಕಾಂಗಿ ಹೋರಾಟ ನೀಡಿದ ಶ್ರೇಯಸ್ ಅಯ್ಯರ್ 44 ರನ್ ಕಾಣಿಕೆ ನೀಡಿ ಔಟಾದರು.

ಜೆ ಸುಚಿತ್ 6 ರನ್ ಸಿಡಿಸಿ ಔಟಾದರು. ಅಮಿತ್ ಮಿಶ್ರಾ ವಿಕೆಟ್ ಪತನದೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ 16.2 ಓವರ್‌ಗಳಲ್ಲಿ 99 ಆಲೌಟ್ ಆಯಿತು. ಈ ಮೂಲಕ CSK 80 ರನ್ ಗೆಲುವು ಸಾಧಿಸಿತು. ಇಮ್ರಾನ್ ತಾಹೀರ್ 4 ಹಾಗೂ ರವೀಂದ್ರ ಜಡೇಡಾ 3 ವಿಕೆಟ್ ಕಬಳಿಸಿದರು. 

Follow Us:
Download App:
  • android
  • ios