ಬೆಂಗಳೂರು(ಮಾ.20): ಚೊಚ್ಚಲ ಬಾರಿಗೆ ಐಪಿಎಲ್‌ ಟ್ರೋಫಿ ಗೆಲ್ಲುವ ಕನಸು ಹೊತ್ತು ಕಠಿಣ ಅಭ್ಯಾಸದಲ್ಲಿ ತೊಡಗಿರುವ ಆರ್‌ಸಿಬಿ ತಂಡಕ್ಕೆ ಮಂಗಳವಾರ(ಮಾ.19) ಭಾರತ ಹಾಗೂ ಬೆಂಗಳೂರು ಫುಟ್ಬಾಲ್‌ ಕ್ಲಬ್‌ ತಂಡದ ನಾಯಕ ಸುನಿಲ್‌ ಚೆಟ್ರಿ ಶುಭ ಕೋರಿದರು. 

ಇದನ್ನೂ ಓದಿ: ಬೆಂಗಳೂರಲ್ಲಿ 7 ಐಪಿಎಲ್‌ ಪಂದ್ಯ- ಸಂಪೂರ್ಣ ಸಜ್ಜಾಗಿದೆ ಚಿನ್ನಸ್ವಾಮಿ ಕ್ರೀಡಾಂಗಣ!

ಕಳೆದ ಭಾನುವಾರವಷ್ಟೇ ಚೊಚ್ಚಲ ಐಎಸ್‌ಎಲ್‌ ಟ್ರೋಫಿ ಗೆದ್ದು, ಬೆಂಗಳೂರಿಗೆ ಆಗಮಿಸಿದ ಚೆಟ್ರಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ತಂಡದ ಜತೆ ಕೆಲ ಕಾಲ ಅಭ್ಯಾಸ ನಡೆಸಿದರು. ಬ್ಯಾಟಿಂಗ್‌, ಬೌಲಿಂಗ್‌ ಹಾಗೂ ಫೀಲ್ಡಿಂಗ್‌ ಮಾಡಿದ ಚೆಟ್ರಿ, ತಮ್ಮ ಆಪ್ತ ಸ್ನೇಹಿತ ವಿರಾಟ್‌ ಕೊಹ್ಲಿ ಜತೆ ಮೋಜಿನಲ್ಲಿ ತೊಡಗಿದರು. ಜತೆಗೆ ಆರ್‌ಸಿಬಿ ಆಟಗಾರರ ಜತೆ ತಮ್ಮ ಫಿಟ್ನೆಸ್‌ ಗುಟ್ಟನ್ನು ಹಂಚಿಕೊಂಡರು.

ಇದನ್ನೂ ಓದಿ: IPL ಫೈಟ್’ಗೆ ವಿರಾಟ್ ಕೊಹ್ಲಿ ರೆಡಿ

ಈ ಭಾರಿಯ ISL ಫುಟ್ಬಾಲ್ ಟೂರ್ನಿಯಲ್ಲಿ ಸುನಿಲ್ ಚೆಟ್ರಿ ನಾಯಕತ್ವದ ಬೆಂಗಳೂರು FC ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಫೈನಲ್ ಪಂದ್ಯದಲ್ಲಿ ಗೋವಾ ವಿರುದ್ಧ 1-0 ಅಂತರದಲ್ಲಿ ಗೆಲುವು ದಾಖಲಿಸೋ ಮೂಲಕ ಪ್ರಶಸ್ತಿ ಗೆದ್ದುಕೊಂಡಿತು. ಇದೀಗ  ಲೀಗ್ ಕ್ರೀಡೆಗಳಲ್ಲಿ ಬೆಂಗಳೂರಿನ ಬಹುತೇಕ ಎಲ್ಲಾ ತಂಡಗಳು ಪ್ರಶಸ್ತಿ ಗೆದ್ದಿವೆ. ಹೀಗಾಗಿ ಈ ಬಾರಿ RCB ಕೂಡ ಪ್ರಶಸ್ತಿ ಗೆಲ್ಲಲಿದೆ ಅನ್ನೋ ವಿಶ್ವಾಸ ಅಭಿಮಾನಿಗಳಲ್ಲಿದೆ.