IPL 2019: ಪ್ಲೇ ಆಫ್ ಹಾಗೂ ಫೈನಲ್ ಪಂದ್ಯದ ಸಮಯ ಬದಲಾವಣೆ!
IPL 2019ರ ಪ್ಲೇ ಆಫ್, ಫೈನಲ್ ಪಂದ್ಯ ಹಾಗೂ ಮಹಿಳಾ ಐಪಿಎಲ್ ಪ್ರದರ್ಶನದ ಪಂದ್ಯದ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ನೂತನ ವೇಳಾಪಟ್ಟಿ ಬಿಡುಗಡೆ ಮಾಡಿರುವ ಬಿಸಿಸಿಐ ಹೊಸ ಸಮಯದಲ್ಲಿ ಪಂದ್ಯ ಆರಂಭಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದೆ.
ಮುಂಬೈ(ಏ.29): ಐಪಿಎಲ್ ಟೂರ್ನಿ ಅಂತಿಮ ಘಟ್ಟ ತಲುಪುತ್ತಿದೆ. ಪ್ಲೇ ಆಪ್ ಸ್ಥಾನಕ್ಕಾಗಿ ತಂಡಗಳ ಹೋರಾಟ ಜೋರಾಗಿದೆ. ಮೇ 5ರಂದು ಲೀಗ್ ಹಂತದ ಪಂದ್ಯಗಳು ಮುಕ್ತಾಯಗೊಳ್ಳಲಿದ್ದು, ಮೇ ರಿಂದ ಪ್ಲೇ ಆಪ್ ಹಂತದ ಪಂದ್ಯಗಳು ಆರಂಭಗೊಳ್ಳಲಿದೆ. ಇದೀಗ ಬಿಸಿಸಿಐ ನೂತನ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದ್ದು, ಐಪಿಎಲ್ ಪ್ಲೇ ಆಫ್, ಫೈನಲ್ ಹಾಗೂ ಮಹಿಳಾ ಐಪಿಎಲ್ ಪ್ರದರ್ಶನ ಪಂದ್ಯದ ಸಮಯ ಬದಲಾವಣೆ ಮಾಡಲಾಗಿದೆ.
ನೂತನ ವೇಳಾಪಟ್ಟಿಯಲ್ಲಿ ಪ್ಲೇ ಆಫ್, ಫೈನಲ್ ಹಾಗೂ ಮಹಿಳಾ ಐಪಿಎಲ್ ಪ್ರದರ್ಶನ ಪಂದ್ಯ ಸಂಜೆ 7.30ಕ್ಕೆ ಆರಂಭವಾಗಲಿದೆ. ಈ ಮೊದಲು 8 ಗಂಟೆಗೆ ನಿಗಧಿಪಡಿಸಲಾಗಿತ್ತು. ಇದೀಗ ಅರ್ಧಗಂಟೆ ಮುಂಚಿತವಾಗಿ ಪ್ಲೇಆಫ್ ಪಂದ್ಯಗಳು ಆರಂಭಗೊಳ್ಳಲಿದೆ.
ಬದಲಾಯದ IPL ಪ್ಲೇ ಆಫ್ - ಫೈನಲ್ ಪಂದ್ಯದ ಸಮಯ:
ದಿನಾಂಕ | ಪಂದ್ಯ | ಕ್ರೀಡಾಂಗಣ | ಸಮಯ |
ಮೇ, 7 | ಕ್ವಾಲಿಫೈಯರ್1 | ಚೆನ್ನೈ | 7.30PM |
ಮೇ,8 | ಎಲಿಮಿನೇಟರ್ | ವೈಝಾಗ್ | 7.30PM |
ಮೇ,10 | ಕ್ವಾಲಿಫೈಯರ್2 | ವೈಝಾಗ್ | 7.30PM |
ಮೇ,12 | ಫೈನಲ್ | ಹೈದರಾಬಾದ್ | 7.30PM |
ಮಹಿಳಾ ಐಪಿಎಲ್ ಪ್ರದರ್ಶನ ಪಂದ್ಯ:
ದಿನಾಂಕ | ಪಂದ್ಯ | ಕ್ರೀಡಾಂಗಣ | ಸಮಯ |
ಮೇ,6 | Supernovas vs Trailblazers | ಜೈಪುರ | 7.30PM |
ಮೇ,8 | Trailblazers vs Velocity | ಜೈಪುರ | 7.30PM |
ಮೇ,9 | Supernovas vs Velocity | ಜೈಪುರ | 7.30PM |
ಮೇ,11 | Final | ಜೈಪುರ | 7.30PM |