ಯುರೋಪಿಯನ್ ಲೀಗ್‌'ಗಳಲ್ಲಿ ಸಾಮಾನ್ಯವಾಗಿರುವ ಈ ಪದ್ಧತಿಯನ್ನು ಐಪಿಎಲ್‌'ನಲ್ಲೂ ಪರಿಚಯಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ. ಮೊದಲ 7 ಪಂದ್ಯಗಳಲ್ಲಿ ಒಂದೂ ಪಂದ್ಯವನ್ನು ಆಡದ ಆಟಗಾರರನ್ನು ಮತ್ತೊಂದು ತಂಡದವರು ಎರವಲು ಪಡೆಯಬಹುದಾಗಿದೆ.

ಮುಂಬೈ(ನ.23): 2018ರ ಐಪಿಎಲ್ ಹಲವು ಬದಲಾವಣೆಗಳಿಗೆ ಸಾಕ್ಷಿ ಆಗಲಿದ್ದು, ಈ ಬಾರಿ ಒಂದು ತಂಡದ ಆಟಗಾರರನ್ನು ಮತ್ತೊಂದು ತಂಡದವರು ಎರವಲು ಪಡೆಯಲು ಅವಕಾಶ ನೀಡುವ ಸಾಧ್ಯತೆಯಿದೆ.

ಯುರೋಪಿಯನ್ ಲೀಗ್‌'ಗಳಲ್ಲಿ ಸಾಮಾನ್ಯವಾಗಿರುವ ಈ ಪದ್ಧತಿಯನ್ನು ಐಪಿಎಲ್‌'ನಲ್ಲೂ ಪರಿಚಯಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ. ಮೊದಲ 7 ಪಂದ್ಯಗಳಲ್ಲಿ ಒಂದೂ ಪಂದ್ಯವನ್ನು ಆಡದ ಆಟಗಾರರನ್ನು ಮತ್ತೊಂದು ತಂಡದವರು ಎರವಲು ಪಡೆಯಬಹುದಾಗಿದೆ. ಅಲ್ಲದೇ ಇದಕ್ಕೆ ಎಲ್ಲಾ 8 ತಂಡಗಳ ಫ್ರಾಂಚೈಸಿಗಳು ಒಪ್ಪಿಗೆ ಸೂಚಿಸಿದರೆ ಮಾತ್ರ ಈ ಪ್ರಕ್ರಿಯೆಗೆ ಅಂಗೀಕಾರ ಸಿಗಲಿದೆ ಎಂದು ಮೂಲಗಳು ತಿಳಿಸಿದ್ದು, ಈ ಕುರಿತು ಬಿಸಿಸಿಐ ಜತೆ ಐಪಿಎಲ್ ಫ್ರಾಂಚೈಸಿಗಳು ಗಂಭೀರ ಚಿಂತನೆ ನಡೆಸಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.

ಒಂದೊಮ್ಮೆ ತಂಡ ಸತತ ಸೋಲಿನಿಂದ ಕಂಗೆಟ್ಟಿದ್ದಾಗ ಈ ನಿಯಮ ಅನ್ವಯವಾಗುವುದಿಲ್ಲ. ಹಾಗೆ ಬದಲು ಮಾಡುವ ಆಟಗಾರ ಯಾವ ಪಂದ್ಯವನ್ನು ಆಡಿರಬಾರದು. ಅಂತಹ ಆಟಗಾರರನ್ನು ಮಾತ್ರ ಎರವಲು ಪಡೆಯಬಹುದಾಗಿದೆ.