Asianet Suvarna News Asianet Suvarna News

ಚಿನ್ನಸ್ವಾಮಿ ಮೈದಾನದಲ್ಲಿ ಹೈಡ್ರಾಮಾ; ಇದು ನಾಟೌಟ್ ಅಂತೆ..!!

ಆರ್’ಸಿಬಿ ಪರ ಉಮೇಶ್ ಯಾದವ್ ಹಾಕಿದ ಮೂರನೇ ಓವರ್’ನ 5ನೇ ಎಸೆತ ಈ ಚರ್ಚೆಗೆ ಮೂಲ ಕಾರಣ. ಉಮೇಶ್ ಹಾಕಿದ ಎಸೆತವನ್ನು ಅಲೆಕ್ಸ್ ಹೇಲ್ಸ್ ಎತ್ತಿಬಾರಿಸಿದರು, ಆಗ ಟಿಮ್ ಸೌಥಿ ಅದ್ಭುತ ಕ್ಯಾಚ್ ಪಡೆದರು. ಕ್ಯಾಚ್ ಕುರಿತಂತೆ ಫೀಲ್ಡ್ ಅಂಪೈರ್ ಮೂರನೇ ಅಂಪೈರ್ ಮೊರೆ ಹೋದಾಗ ನಾಟೌಟ್ ಎಂದು ತೀರ್ಪು ಬಂತು.

IPL 2018 On field drama Out or Not Out You Decide

ಬೆಂಗಳೂರು[ಮೇ.18]: ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್’ರೈಸರ್ಸ್ ಹೈದರಾಬಾದ್ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಚಿನ್ನಸ್ವಾಮಿ ಮೈದಾನ ಸಾಕ್ಷಿಯಾಗಿತ್ತು.
ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಸನ್’ರೈಸರ್ಸ್ ಹೈದರಾಬಾದ್ ತಂಡವನ್ನು ಆರ್’ಸಿಬಿ ಬಗ್ಗುಬಡಿದು ತನ್ನ ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್’ನಲ್ಲಿ ಸಾಂಘಿಕ ಪ್ರದರ್ಶನ ತೋರಿದ ಆರ್’ಸಿಬಿ 14 ರನ್’ಗಳ ರೋಚಕ ಜಯ ಸಾಧಿಸಿ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದೆ.
ಆದರೆ ಈ ಪಂದ್ಯದಲ್ಲಿ ಹೈಡ್ರಾಮಾವೊಂದು ನಡೆದದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಆರ್’ಸಿಬಿ ಪರ ಉಮೇಶ್ ಯಾದವ್ ಹಾಕಿದ ಮೂರನೇ ಓವರ್’ನ 5ನೇ ಎಸೆತ ಈ ಚರ್ಚೆಗೆ ಮೂಲ ಕಾರಣ. ಉಮೇಶ್ ಹಾಕಿದ ಎಸೆತವನ್ನು ಅಲೆಕ್ಸ್ ಹೇಲ್ಸ್ ಎತ್ತಿಬಾರಿಸಿದರು, ಆಗ ಟಿಮ್ ಸೌಥಿ ಅದ್ಭುತ ಕ್ಯಾಚ್ ಪಡೆದರು. ಕ್ಯಾಚ್ ಕುರಿತಂತೆ ಫೀಲ್ಡ್ ಅಂಪೈರ್ ಮೂರನೇ ಅಂಪೈರ್ ಮೊರೆ ಹೋದಾಗ ನಾಟೌಟ್ ಎಂದು ತೀರ್ಪು ಬಂತು.
ಈ ತೀರ್ಪಿನ ಕುರಿತಂತೆ ನಾಯಕ ವಿರಾಟ್ ಕೊಹ್ಲಿ ಹಾಗೂ ಟಿಮ್ ಸೌಥಿ ಅಚ್ಚರಿ ವ್ಯಕ್ತಪಡಿಸಿದರು. ಹೀಗಿತ್ತು ಆ ಕ್ಯಾಚ್, ಇದು ಔಟ್/ನಾಟೌಟ್ ನೀವೇ ತೀರ್ಮಾನಿಸಿ.. 

Follow Us:
Download App:
  • android
  • ios