ಚೆನ್ನೈ ಪರ ಎನ್ಜಿಡಿ 10 ರನ್ ನೀಡಿ 4 ವಿಕೆಟ್ ಕಬಳಿಸಿದರೆ, ಶಾರ್ದೂಲ್ ಠಾಕೂರ್ ಹಾಗೂ ಡ್ವೇನ್ ಬ್ರಾವೋ ತಲಾ 2 ವಿಕೆಟ್ ಕಬಳಿಸಿದರು.

ಪುಣೆ[ಮೇ.20]: ಲುಂಗಿಸನಿ ಎನ್ಜಿಡಿ ಮಾರಕ ದಾಳಿ[10/4]ಯ ಹೊರತಾಗಿಯೂ ಕನ್ನಡಿಗ ಕರುಣ್ ನಾಯರ್ ಸ್ಫೋಟಕ ಅರ್ಧಶತಕದ ನೆರವಿನಿಂದ ಕಿಂಗ್ಸ್ ಇಲೆವನ್ ಪಂಜಾಬ್ 153 ರನ್’ಗಳ ಸವಾಲಿನ ಮೊತ್ತ ಕಲೆಹಾಕಿದೆ. ಇನ್ನು ಸವಾಲಿನ ಗುರಿ ಬೆನ್ನತ್ತಿದ ಚೆನ್ನೈ ಎರಡನೇ ಓವರ್’ನಲ್ಲೇ ಅಂಬಟಿ ರಾಯುಡು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಆರಂಭದಲ್ಲೇ 16/3 ಸಂಕಷ್ಟಕ್ಕೆ ಸಿಲುಕಿತು. ಎನ್ಜಿಡಿ ಆರಂಭಿಕರಾದ ರಾಹುಲ್ ಹಾಗೂ ಗೇಲ್’ರನ್ನು ಪೆವಿಲಿಯನ್’ಗೆ ಅಟ್ಟಿದರೆ, ಫಿಂಚ್[4] ಕೂಡಾ ನಿರಾಸೆ ಮೂಡಿಸಿದರು.
ಆರಂಭಿಕ ಸಂಕಷ್ಟದಲ್ಲಿದ್ದ ಪಂಜಾಬ್’ಗೆ ತಿವಾರಿ-ಮಿಲ್ಲರ್ ಜೋಡಿ 60 ರನ್’ಗಳ ಜತೆಯಾಟವಾಡುವ ಮೂಲಕ ಆಸರೆಯಾದರು. ಒಂದು ಕಡೆ ನಿರಂತರ ವಿಕೆಟ್ ಬೀಳುತ್ತಿದ್ದರೂ ಮತ್ತೊಂದೆಡೆ ಸ್ಫೋಟಕ ಬ್ಯಾಟಿಂಗ್ ನಡೆಸಿದ ಕರುಣ್ ನಾಯರ್ ಕೇವಲ 26 ಎಸೆತಗಳಲ್ಲಿ 54 ರನ್ ಸಿಡಿಸಿದರು. ಕರುಣ್ ಸ್ಫೋಟಕ ಇನಿಂಗ್ಸ್’ನಲ್ಲಿ 5 ಭರ್ಜರಿ ಸಿಕ್ಸರ್ ಹಾಗೂ 3 ಬೌಂಡರಿಗಳು ಸೇರಿದ್ದವು.
ಚೆನ್ನೈ ಪರ ಎನ್ಜಿಡಿ 10 ರನ್ ನೀಡಿ 4 ವಿಕೆಟ್ ಕಬಳಿಸಿದರೆ, ಶಾರ್ದೂಲ್ ಠಾಕೂರ್ ಹಾಗೂ ಡ್ವೇನ್ ಬ್ರಾವೋ ತಲಾ 2 ವಿಕೆಟ್ ಕಬಳಿಸಿದರು.
ಸಂಕ್ಷಿಪ್ತ ಸ್ಕೋರ್
KXIP: 153/10
ಕರುಣ್ ನಾಯರ್: 54
ಎನ್ಜಿಡಿ: 10/4
[* ವಿವರ ಅಪೂರ್ಣ]