ಕ್ರಿಕೆಟ್‌ಗೆ ವಯಸ್ಸು ಅಡ್ಡಿ ಬರುವುದಿಲ್ಲ. ವಯಸ್ಸು ಕೇವಲ ಎಣಿಕೆಗಷ್ಟೇ ಎನ್ನುವುದನ್ನು ಹರ್ಭಜನ್ ಸಿಂಗ್ ಮತ್ತು ಇಮ್ರಾನ್ ತಾಹಿರ್ ಸಾಬೀತು ಪಡಿಸಿದ್ದಾರೆ. ಈ ಇಬ್ಬರೂ ಆಟಗಾರರು ಹಳೆಯ ವೈನ್ ಇದ್ದಂತೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಧೋನಿ ಬಣ್ಣಿಸಿದ್ದಾರೆ. 

ಏರ್‌ಪೋರ್ಟ್ ನೆಲದಲ್ಲೇ ಮಲಗಿದ ಧೋನಿ, ಸಾಕ್ಷಿ!

ಈ ಮೂಲಕ ಇಬ್ಬರೂ ಆಟಗಾರರ ಪ್ರದರ್ಶನದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಮಂಗಳವಾರ ಕೋಲ್ಕತಾ ವಿರುದ್ಧದ ಪಂದ್ಯದಲ್ಲಿ 38 ವರ್ಷದ ಹರ್ಭಜನ್ 15ಕ್ಕೆ 2 ವಿಕೆಟ್ ಪಡೆದರೆ, 40 ವರ್ಷದ ತಾಹಿರ್ 21ಕ್ಕೆ 2 ವಿಕೆಟ್ ಕಿತ್ತಿದ್ದರು. 

ಚೆಪಾಕ್ ಪಿಚ್ ಬಗ್ಗೆ ಧೋನಿ ಅಸಮಾಧಾನ: 

ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಈಗಾಗಲೇ ಆಡಿರುವ ಆರು ಪಂದ್ಯಗಳ ಪೈಕಿ ಐದರಲ್ಲಿ ಗೆಲುವು ಸಾಧಿಸಿರುವ ಚೆನ್ನೈ ಸೂಪರ್ ಕಿಂಗ್ಸ್‌ನ ನಾಯಕ ಮಹೇಂದ್ರ ಸಿಂಗ್ ಧೋನಿ ತಂಡದ ತವರು ಚೆಪಾಕ್ ಪಿಚ್ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. 

IPL 2019: KKR ಮಣಿಸಿ ಅಗ್ರಸ್ಥಾಕ್ಕೇರಿದ CSK

ಚೆಪಾಕ್'ನಲ್ಲಿ ನಿಧಾನಗತಿಯ ಸ್ಕೋರಿಂಗ್ ಪಿಚ್ ಸಿದ್ಧಪಡಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿರುವ ಧೋನಿ, ‘ಇಂತಹ ಪಿಚ್‌ನಲ್ಲಿ ಅದು ಹೇಗೆ ಪಂದ್ಯವನ್ನು ನಿರ್ವಹಣೆ ಮಾಡಬೇಕೆನ್ನುವುದೇ ಅರ್ಥವಾಗುತ್ತಿಲ್ಲ ಎಂದು ಹೇಳಿದ್ದಾರೆ. 

ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.