ಜೈಪುರ[ಏ.11] 12ನೇ ಆವೃತ್ತಿಯಲ್ಲಿ ಆಡಿರುವ 5 ಪಂದ್ಯಗಳಲ್ಲಿ 4ರಲ್ಲಿ ಸೋತು, ಕೇವಲ 1 ಪಂದ್ಯ ಗೆದ್ದಿರುವ ರಾಜಸ್ಥಾನ ರಾಯಲ್ಸ್ ತಂಡ, ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೆಣಸಲು ಸಜ್ಜಾಗಿದೆ. 

ಗುರುವಾರ ಇಲ್ಲಿನ ಸವಾಯ್ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದ್ದು ತವರಿನ ಲಾಭದೊಂದಿಗೆ ಚೆನ್ನೈ ಎದುರು ಪಾರಮ್ಯ ಮೆರೆಯಲು ರಹಾನೆ ಪಡೆ ಕಠಿಣ ಅಭ್ಯಾಸದಲ್ಲಿ ನಿರತವಾಗಿದೆ. ತವರಿನಲ್ಲಿ ಇದುವರೆಗೂ 3 ಪಂದ್ಯಗಳನ್ನಾಡಿರುವ ರಾಜಸ್ಥಾನ, ಆರ್‌ಸಿಬಿ ವಿರುದ್ಧ ಮಾತ್ರ ಗೆಲುವು ಸಾಧಿಸಿದೆ. ಉಳಿದಂತೆ 2 ಪಂದ್ಯಗಳಲ್ಲಿ ಸೋಲುಂಡಿದೆ. ಇದೀಗ ಬಲಿಷ್ಠ ಚೆನ್ನೈ ವಿರುದ್ಧ ರಹಾನೆ ಪಡೆ ವಿಭಿನ್ನ ತಂತ್ರಗಾರಿಕೆಯಲ್ಲಿ ಕಣಕ್ಕಿಳಿಯಲು ಎದುರು ನೋಡುತ್ತಿದೆ. ಉಳಿದ ಎಲ್ಲಾ ಪಂದ್ಯಗಳನ್ನು ಗೆದ್ದರೆ ಮಾತ್ರ ರಾಜಸ್ಥಾನ ತಂಡದ ಮುಂದಿನ ಹಾದಿ ಸುಗಮವಾಗಲಿದೆ.

10 ವರ್ಷಗಳ ಬಳಿಕ IPLನಲ್ಲೊಂದು ಅಪರೂಪದ ದಾಖಲೆ..!

ಅತ್ತ ಕೆಕೆಆರ್ ತಂಡವನ್ನು ಬಗ್ಗುಬಡಿದು ಜಯದ ಹುಮ್ಮಸ್ಸಿನಲ್ಲಿರುವ ಚೆನ್ನೈ, ರಾಜಸ್ಥಾನ ವಿರುದ್ಧ ಮತ್ತೊಂದು ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಗಟ್ಟಿ ಮಾಡಿಕೊಳ್ಳುವ ವಿಶ್ವಾಸದಲ್ಲಿದೆ. ಇದುವರೆಗೂ 6 ಪಂದ್ಯಗಳನ್ನಾಡಿರುವ ಚೆನ್ನೈ 5 ರಲ್ಲಿ ಜಯಿಸಿದ್ದು ಕೇವಲ 1 ಪಂದ್ಯ ಮಾತ್ರ ಸೋತಿದೆ. ಒಟ್ಟಾರೆ ಪ್ರಬಲ ಚೆನ್ನೈ ವಿರುದ್ಧ ರಹಾನೆ ಬಳಗ ಗೆಲುವಿನ ಉತ್ಸಾಹದಲ್ಲಿ ಕಣಕ್ಕಿಳಿಯುತ್ತಿದೆ.

ಪಿಚ್ ರಿಪೋರ್ಟ್: ಸವಾಯ್ ಮಾನ್‌ಸಿಂಗ್ ಕ್ರೀಡಾಂಗಣದ ಪಿಚ್ ವೇಗದ ಬೌಲಿಂಗ್ ಜತೆಯಲ್ಲಿ ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚಿನ ನೆರವು ನೀಡಲಿದೆ. ಈ ಆವೃತ್ತಿಯಲ್ಲಿ ನಡೆದಿರುವ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡುವ ತಂಡಗಳು 160ಕ್ಕೂ ಅಧಿಕ ರನ್ ಗಳಿಸಿದರೂ ರಕ್ಷಿಸಿಕೊಳ್ಳುವುದು ಅಸಾಧ್ಯ. ಹೀಗಾಗಿ ಟಾಸ್ ಪ್ರಮುಖ ಪಾತ್ರವಹಿಸಲಿದೆ.

ಸಂಭಾವ್ಯ ತಂಡ:

ರಾಜಸ್ಥಾನ ರಾಯಲ್ಸ್: ಅಜಿಂಕ್ಯ ರಹಾನೆ (ನಾಯಕ), ಬಟ್ಲರ್, ಸ್ಟೀವ್ ಸ್ಮಿತ್, ರಾಹುಲ್ ತ್ರಿಪಾಠಿ, ಬೆನ್ ಸ್ಟೋಕ್ಸ್, ಪ್ರಶಾಂತ್ ಚೋಪ್ರಾ, ಕೆ. ಗೌತಮ್, ಜೋಫ್ರಾ ಆರ್ಚರ್, ಶ್ರೇಯಸ್ ಗೋಪಾಲ್, ಧವಳ್ ಕುಲಕರ್ಣಿ, ಸುದೇಶನ್ ಮಿದುನ್

ಚೆನ್ನೈ ಸೂಪರ್’ಕಿಂಗ್ಸ್: ಅಂಬಟಿ ರಾಯುಡು, ಶೇನ್ ವಾಟ್ಸನ್, ಸುರೇಶ್ ರೈನಾ, ಧೋನಿ (ನಾಯಕ), ಕೇದಾರ್ ಜಾಧವ್, ದೀಪಕ್ ಚಾಹರ್, ರವೀಂದ್ರ ಜಡೇಜಾ, ಫಾಫ್ ಡುಪ್ಲೆಸಿ, ಶಾರ್ದೂಲ್ ಠಾಕೂರ್, ಮೋಹಿತ್ ಶರ್ಮಾ, ತಾಹಿರ್

ಸ್ಥಳ: ಜೈಪುರ 
ಆರಂಭ: ರಾತ್ರಿ 8.00
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ 1

ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.