12ನೇ ಆವೃತ್ತಿಯ ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ತೋರುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್, ಗುರುವಾರ ಮುಂಬೈ ಇಂಡಿಯನ್ಸ್ ಎದುರು ಮತ್ತೊಂದು ಗೆಲುವಿಗಾಗಿ ಸೆಣಸಲು ಸಜ್ಜಾಗಿದೆ. 

ಮಾ. 24 ರಂದು ನಡೆದಿದ್ದ ಪಂದ್ಯದಲ್ಲಿ ಮುಂಬೈ ವಿರುದ್ಧ ಡೆಲ್ಲಿ 37 ರನ್‌ಗಳ ಗೆಲುವು ಸಾಧಿಸಿತ್ತು. ಈ ಸೋಲಿನ ಸೇಡು ತೀರಿಸಲು ರೋಹಿತ್ ಬಳಗ ಕಾತರಿಸುತ್ತಿದೆ. ಎರಡೂ ತಂಡಗಳು 8 ಪಂದ್ಯಗಳನ್ನಾಡಿದ್ದು, ತಲಾ 5 ಗೆಲುವು, 3 ಸೋಲಿನೊಂದಿಗೆ 10 ಅಂಕಗಳಿಸಿವೆ. ಆದರೆ ಡೆಲ್ಲಿ ನೆಟ್ ರನ್ ರೇಟ್ ಆಧಾರದಲ್ಲಿ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದಿದ್ದರೆ, ಮುಂಬೈ 3ನೇ ಸ್ಥಾನಿಯಾಗಿದೆ. 

ಸಂಭಾವ್ಯ ತಂಡ:

ಡೆಲ್ಲಿ ಕ್ಯಾಪಿಟಲ್ಸ್: ಪೃಥ್ವಿ ಶಾ, ಧವನ್, ಮನ್ರೋ, ಶ್ರೇಯಸ್ (ನಾಯಕ), ಪಂತ್, ಮೋರಿಸ್, ಅಕ್ಷರ್, ಕೀಮೋ , ಕಗಿಸೋ ರಬಾಡ, ಅಮಿತ್ ಮಿಶ್ರಾ, ಇಶಾಂತ್ ಶರ್ಮಾ

ಮುಂಬೈ ಇಂಡಿಯನ್ಸ್: ಡಿಕಾಕ್, ರೋಹಿತ್ (ನಾಯಕ), ಸೂರ್ಯಕುಮಾರ್, ಇಶಾನ್, ಕೃನಾಲ್, ಹಾರ್ದಿಕ್, ಪೊಲ್ಲಾರ್ಡ್, ಚಾಹರ್, ಬೆಹ್ರೆನ್‌ಡೊರ್ಫ್, ಮಾಲಿಂಗ, ಬುಮ್ರಾ.

ಸ್ಥಳ: ನವದೆಹಲಿ

ಪಂದ್ಯ ಆರಂಭ: ರಾತ್ರಿ 8ಕ್ಕೆ

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ 1

ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.