ಕೋಲ್ಕತಾ[ಏ.25]: ಸತತ 5 ಸೋಲು ಕಂಡು ಕಂಗೆಟ್ಟಿರುವ ಕೋಲ್ಕತಾ ನೈಟ್’ರೈಡರ್ಸ್ ತಂಡ ಇದೀಗ ತವರಿನಲ್ಲಿ ರಾಜಸ್ಥಾನ ರಾಯಲ್ಸ್ ಎದುರು ಮುಖಾಮುಖಿಯಾಗುತ್ತಿದೆ. ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸ್ಟೀವ್ ಸ್ಮಿತ್ ಫೀಲ್ಡಿಂಗ್ ಆಯ್ದುಕೊಂಡಿದ್ದಾರೆ.

ರಾಜಸ್ಥಾನ ರಾಯಲ್ಸ್ ತಂಡದಲ್ಲಿ 2 ಬದಲಾವಣೆ ಮಾಡಲಾಗಿದ್ದು, ಓಶಾನೆ ಹಾಗೂ ವರುಣ್ ಆ್ಯರೋನ್ ತಂಡ ಕೂಡಿಕೊಂಡಿದ್ದು, ಆಸ್ಟನ್ ಟರ್ನರ್ ಹಾಗೂ ಧವಳ್ ಕುಲಕರ್ಣಿಗೆ ರೆಸ್ಟ್ ನೀಡಲಾಗಿದೆ. ಇನ್ನು ಕೆಕೆಆರ್ ಪರ ಕೂಡಾ 2 ಬದಲಾವಣೆ ಮಾಡಲಾಗಿದ್ದು, ಪ್ರಸಿದ್ಧ್ ಕೃಷ್ಣ ಹಾಗೂ ಬ್ರಾಥ್’ವೈಟ್ ತಂಡ ಕೂಡಿಕೊಂಡಿದ್ದು, ಕಾರ್ಯಪ್ಪ ಮತ್ತು ಗುರ್ನೆಗೆ ವಿಶ್ರಾಂತಿ ನೀಡಲಾಗಿದೆ. 

ಆರಂಭದಲ್ಲಿ 4 ಪಂದ್ಯಗಳನ್ನು ಗೆದ್ದು ಬೀಗಿದ್ದ ದಿನೇಶ್ ಕಾರ್ತಿಕ್ ನೇತೃತ್ವದ ಕೆಕೆಆರ್ ತಂಡ ಆ ಬಳಿಕ ಸತತ 5 ಸೋಲು ಕಂಡು ಕಂಗಾಲಾಗಿದೆ. ಬಲಿಷ್ಠ ಆಟಗಾರರ ದಂಡನ್ನೇ ಹೊಂದಿದ್ದರೂ ಗೆಲುವು ಕೆಕೆಆರ್ ಪಾಲಿಗೆ ಮರೀಚಿಕೆಯಾಗಿದೆ. ಇನ್ನು ಆಡಿದ 10 ಪಂದ್ಯಗಳಲ್ಲಿ 7 ಸೋಲು ಹಾಗೂ 3 ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ರಾಜಸ್ಥಾನ ತಂಡವು ಕೆಕೆಆರ್’ಗೆ ಮತ್ತೊಂದು ಆಘಾತ ನೀಡಲು ರೆಡಿಯಾಗಿದೆ.

ತಂಡಗಳು ಹೀಗಿವೆ: