IPL 12 RCB ಪಡೆಗೆ ಶಾಕ್ ಕೊಟ್ಟ ರಬಾಡ

ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಶ್ರೇಯಸ್ ಅಯ್ಯರ್ ಫೀಲ್ಡಿಂಗ್ ಆಯ್ದುಕೊಂಡರು. ಬೆಂಗಳೂರು ತಂಡ ಆರಂಭದಲ್ಲೇ ಪಾರ್ಥಿವ್ ಪಟೇಲ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆ ಬಳಿಕ ಎಬಿ ಡಿವಿಲಿಯರ್ಸ್[17] ಉತ್ತಮ ಆಟವಾಡುವ ಮುನ್ಸೂಚನೆ ನೀಡಿದರಾದರೂ ಹೆಚ್ಚು ಹೊತ್ತು ಕ್ರೀಸ್’ನಲ್ಲಿ ನೆಲೆಯೂರಲು ರಬಾಡ ಅವಕಾಶ ನೀಡಲಿಲ್ಲ.

IPL 12 Rabada Picks Four as RCB End at 149 for 8

ಬೆಂಗಳೂರು[ಏ.07]: ಕಗಿಸೋ ರಬಾಡ ಮಾರಕ ದಾಳಿ[21/4]ಯ ಹೊರತಾಗಿಯೂ, ನಾಯಕ ವಿರಾಟ್ ಕೊಹ್ಲಿ, ಆಲ್ರೌಂಡರ್ ಮೊಯಿನ್ ಅಲಿ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 149 ರನ್’ಗಳ ಸ್ಫರ್ಧಾತ್ಮಕ ಮೊತ್ತ ಕಲೆಹಾಕಿದೆ. ಸತತ 5 ಸೋಲು ಕಂಡಿರುವ ಆರ್’ಸಿಬಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.

2019: DC ವಿರುದ್ಧ ಹಸಿರು ಜರ್ಸಿಯಲ್ಲಿ ಕಣಕ್ಕಿಳಿಯಲಿದೆ RCB!

ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಶ್ರೇಯಸ್ ಅಯ್ಯರ್ ಫೀಲ್ಡಿಂಗ್ ಆಯ್ದುಕೊಂಡರು. ಬೆಂಗಳೂರು ತಂಡ ಆರಂಭದಲ್ಲೇ ಪಾರ್ಥಿವ್ ಪಟೇಲ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆ ಬಳಿಕ ಎಬಿ ಡಿವಿಲಿಯರ್ಸ್[17] ಉತ್ತಮ ಆಟವಾಡುವ ಮುನ್ಸೂಚನೆ ನೀಡಿದರಾದರೂ ಹೆಚ್ಚು ಹೊತ್ತು ಕ್ರೀಸ್’ನಲ್ಲಿ ನೆಲೆಯೂರಲು ರಬಾಡ ಅವಕಾಶ ನೀಡಲಿಲ್ಲ.

IPL 2019: RCB ವಿರುದ್ಧ ಟಾಸ್ ಗೆದ್ದ DC ಫೀಲ್ಡಿಂಗ್ ಆಯ್ಕೆ

ಆಸರೆಯಾದ ಕೊಹ್ಲಿ-ಅಲಿ: ಒಂದು ಹಂತದಲ್ಲಿ 66 ರನ್’ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ RCB ತಂಡಕ್ಕೆ ನಾಯಕ ಕೊಹ್ಲಿ[41] ಹಾಗೂ ಮೊಯಿನ್ ಅಲಿ[32] ತಂಡಕ್ಕೆ ಆಸರೆಯಾದರು. ನಾಯಕ ಕೊಹ್ಲಿ ಎಚ್ಚರಿಕೆಯ ಆಟವಾಡಿದರೆ, ಅಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಅಲಿ ಕೇವಲ 18 ಎಸೆತಗಳಲ್ಲಿ 32 ರನ್ ಬಾರಿಸುವ ಮೂಲಕ ತಂಡದ ಮೊತ್ತವನ್ನು ನೂರರ ಗಡಿ ದಾಟಿಸಿದರು.

ಶಾಕ್ ಕೊಟ್ಟ ರಬಾಡ: ಡೆಲ್ಲಿ ಸ್ಟಾರ್ ವೇಗಿ ಕಗಿಸೋ ರಬಾಡ RCB ಬ್ಯಾಟ್ಸ್’ಮನ್’ಗಳ ಪಾಲಿಗಿಂದು ವಿಲನ್ ಆಗಿ ಪರಿಣಮಿಸಿದರು. ಮೊದಲಿಗೆ ಎಬಿಡಿ ವಿಕೆಟ್ ಪಡೆದ ರಬಾಡ, ಆ ಬಳಿಕ ಒಂದೇ ಓವರ್’ನಲ್ಲಿ ವಿರಾಟ್ ಕೊಹ್ಲಿ, ಅಕ್ಷದೀಪ್ ನಾಥ್ ಹಾಗೂ ಪವನ್ ನೇಗಿ ಬಲಿ ಪಡೆದರು. 4 ಓವರ್’ನಲ್ಲಿ ರಬಾಡ ಕೇವಲ 21 ರನ್ ನೀಡಿ 4 ವಿಕೆಟ್ ಕಬಳಿಸಿ ಯಶಸ್ವಿ ಬೌಲರ್ ಆಗಿ ಹೊರಹೊಮ್ಮಿದರು.

ಸಂಕ್ಷಿಪ್ತ ಸ್ಕೋರ್:
RCB: 149/8
ವಿರಾಟ್ ಕೊಹ್ಲಿ: 41
ರಬಾಡ: 21/4
ವಿವರ ಅಪೂರ್ಣ

Latest Videos
Follow Us:
Download App:
  • android
  • ios