ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಬ್ರೆಟ್ ಲೀ ಮನ ಗೆಲ್ಲುವಲ್ಲಿ ಕರ್ನಾಟಕದ ಯುವ ವೇಗಿ ಯಶಸ್ವಿಯಾಗಿದ್ದಾರೆ. ಅಷ್ಟಕ್ಕೂ ಯಾರು ಆ ಬೌಲರ್ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ...

ಮುಂಬೈ[ಏ.19]: ಕರ್ನಾಟಕದ ಯುವ ವೇಗದ ಬೌಲರ್‌ ಪ್ರಸಿದ್ಧ್ ಕೃಷ್ಣ ಬೌಲಿಂಗ್‌ ಶೈಲಿ ಕುರಿತು ಆಸ್ಪ್ರೇಲಿಯಾದ ದಿಗ್ಗಜ ವೇಗಿ ಬ್ರೆಟ್‌ ಲೀ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಲೀ, ‘ಭಾರತೀಯ ವೇಗಿಗಳ ಪ್ರದರ್ಶನ ಬಹಳ ಖುಷಿ ನೀಡಿದೆ. ಗಂಟೆಗೆ 145 ಕಿ.ಮೀ ವೇಗದಲ್ಲಿ ಬೌಲ್‌ ಮಾಡಬಲ್ಲ ಪ್ರಸಿದ್ಧ್ ಉತ್ತಮ ಬೌಲಿಂಗ್‌ ಶೈಲಿ ಹೊಂದಿದ್ದಾರೆ. ತಮ್ಮ ಓಟದ ವೇಗದಲ್ಲಿ ಮತ್ತಷ್ಟು ಸುಧಾರಣೆ ಕಂಡರೆ ಸ್ಥಿರ ಪ್ರದರ್ಶನ ತೋರಬಹುದು. ವೇಗದ ಬೌಲರ್‌ ಆಗಲು ಇಚ್ಛಿಸುವವರು ಉತ್ತಮ ಅಥ್ಲೀಟ್‌ ಆಗಿರಬೇಕು. ಪ್ರಸಿದ್ಧ್ ಭಾರತದ ಭವಿಷ್ಯದ ತಾರೆಯಾಗಲಿದ್ದಾರೆ ಎನ್ನುವ ವಿಶ್ವಾಸವಿದೆ’ ಎಂದಿದ್ದಾರೆ.

IPL 2019: ಇಲ್ಲಿದೆ KKR ವಿರುದ್ದದ ಪಂದ್ಯಕ್ಕೆ RCB ಸಂಭಾವ್ಯ ತಂಡ!

ವಿಶ್ವ ಕ್ರಿಕೆಟ್ ಕಂಡ ಅತ್ಯಂತ ಶ್ರೇಷ್ಠ ವೇಗದ ಬೌಲರ್’ಗಳಲ್ಲಿ ಬ್ರೆಟ್ ಲೀ ಕೂಡಾ ಒಬ್ಬರೆನಿಸಿದ್ದಾರೆ. ಲೀ ಆಸ್ಟ್ರೇಲಿಯಾ ಪರ 76 ಟೆಸ್ಟ್ ಹಾಗೂ 221 ಏಕದಿನ ಪಂದ್ಯಗಳನ್ನಾಡಿದ್ದು ಕ್ರಮವಾಗಿ 310 ಮತ್ತು 380 ವಿಕೆಟ್ ಕಬಳಿಸಿದ್ದಾರೆ.