ಕೋಲ್ಕತಾ(ಏ.19): ಕೋಲ್ಕತಾ ನೈಟ್‌ ರೈಡರ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೋರಾಟಕ್ಕೆ ಈಡನ್ ಗಾರ್ಡ್ಸನ್ ಮೈದಾನ ಸಜ್ಜಾಗಿದೆ. ಉಭಯ ತಂಡಗಳಿಗೆ ಇದು ಮಹತ್ವದ ಪಂದ್ಯ. 7 ಸೋಲು ಕಂಡಿರುವ RCB ಇನ್ನುಳಿದ ಎಲ್ಲಾ ಪಂದ್ಯ ಗೆದ್ದು ಪ್ಲೇ ಆಫ್ ಕನಸು ಕಾಣುತ್ತಿದೆ. ಇತ್ತ KKR, ಪ್ಲೇ ಆಫ್ ಕನಸು ಜೀವಂತವಾಗಿರಿಸಲು ಈ ಪಂದ್ಯ ಗೆಲ್ಲಲೇಬೇಕು. ಹೀಗಾಗಿ ಎರಡೂ ತಂಡಗಳು ಗೆಲುವಿಗಾಗಿ ಕಠಿಣ ಹೋರಾಟ ನಡೆಸಲಿದೆ.

RCB ಆಡಿದ 8 ಪಂದ್ಯದಲ್ಲಿ 1ರಲ್ಲಿ ಮಾತ್ರ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಕೋಲ್ಕತಾ ನೈಟ್ ರೈಡರ್ಸ್ 8ರಲ್ಲಿ 4 ಪಂದ್ಯ ಗೆದ್ದು ನಾಲ್ಕರಲ್ಲಿ ಸೋಲು ಕಂಡಿದೆ. ಹೀಗಾಗಿ 6ನೇ ಸ್ಥಾನದಲ್ಲಿದೆ. ಇಂದಿನ ಪಂದ್ಯಕ್ಕೆ ಆ್ಯಂಡ್ರೆ ರಸೆಲ್ ಅಲಭ್ಯರಾಗುವ ಸಾಧ್ಯತೆ ಇದೆ. ಇಂದಿರಿಯಿಂತ ಚೇತರಿಸಿಕೊಳ್ಳದ ಕಾರಣ ರಸೆಲ್ ಹೊರಗುಳಿಯುವ ಸಾಧ್ಯತೆ ಇದೆ. ಇಂದಿನ ಪಂದ್ಯಕ್ಕೆ ಬಲಿಷ್ಠ ತಂಡವನ್ನು ಕಣಕ್ಕಿಳಿಸಲು ನಿರ್ಧರಿಸಿದೆ. ಇಲ್ಲಿದೆ RCB ಹಾಗೂ KKR ಸಂಭವನೀಯ ತಂಡದ ವಿವರ.

RCB ಸಂಭವನೀಯ ತಂಡ:
ವಿರಾಟ್ ಕೊಹ್ಲಿ(ನಾಯಕ), ಪಾರ್ಥೀವ್ ಪಟೇಲ್, ಎಬಿ ಡಿವಿಲಿಯರ್ಸ್, ಮಾರ್ಕಸ್ ಸ್ಟಯ್ನಿಸ್, ಮೊಯಿನ್ ಆಲಿ,ಅಕ್ಷದೀಪ್ ನಾಥ್, ಪವನ್ ನೇಗಿ, ಉಮೇಶ್ ಯಾಧವ್, ಯಜುವೇಂದ್ರ ಚಹಾಲ್, ನವದೀಪ್ ಸೈನಿ, ಕುಲ್ವಂತ್ ಕೆಜ್ರೊಲಿಯಾ

KKR ಸಂಭವನೀಯ ತಂಡ:
ಸುನಿಲ್ ನರೈನ್, ಕ್ರಿಸ್ ಲಿನ್, ರಾಬಿನ್ ಉತ್ತಪ್ಪ, ನಿತೀಶ್ ಕಾಣ, ದಿನೇಶ್ ಕಾರ್ತಿಕ್, ಕಾರ್ಲೋಸ್ ಬ್ರಾಥ್ವೈಟ್, ಶುಭ್‌ಮಾನ್ ಗಿಲ್, ಪಿಯೂಷ್ ಚಾವ್ಲಾ, ಪ್ರಸಿದ್ಧ ಕೃಷ್ಣ, ಕುಲ್ದೀಪ್ ಯಾದವ್,ಹ್ಯಾರಿ ಗರ್ನಿ