ಮುಂಬೈ[ಏ.13]: ಹ್ಯಾಟ್ರಿಕ್‌ ಗೆಲುವಿನೊಂದಿಗೆ ಬೀಗುತ್ತಿರುವ ಮುಂಬೈ ಇಂಡಿಯನ್ಸ್‌, ಗೆಲುವಿನ ಓಟ ಮುಂದುವರಿಸುವ ಉತ್ಸಾಹದಲ್ಲಿದ್ದು ಶನಿವಾರ ರಾಜಸ್ಥಾನ ರಾಯಲ್ಸ್‌ ಸವಾಲನ್ನು ತನ್ನ ತವರು ವಾಂಖೇಡೆ ಕ್ರೀಡಾಂಗಣದಲ್ಲಿ ಎದುರಿಸಲಿದೆ. 

ಅಗತ್ಯ ಸಮಯದಲ್ಲಿ ಪೊಲ್ಲಾರ್ಡ್‌ ಲಯ ಕಂಡುಕೊಂಡಿರುವುದು ಮುಂಬೈನ ಬಲ ಹೆಚ್ಚಿಸಿದೆ. ಅಲ್ಜಾರಿ ಜೋಸೆಫ್‌ ಬೌಲಿಂಗ್‌ ವಿಭಾಗಕ್ಕೆ ಬಲ ತುಂಬಿದ್ದಾರೆ. 

ಇಂಜುರಿಯಿಂದ ರೋಹಿತ್ ಶರ್ಮಾ ಚೇತರಿಕೆ- ರಾಜಸ್ಥಾನ ವಿರುದ್ಧ ಕಣಕ್ಕೆ?

6 ಪಂದ್ಯಗಳಲ್ಲಿ 5ರಲ್ಲಿ ಸೋಲು ಕಂಡಿರುವ ರಾಜಸ್ಥಾನ, ಈ ಪಂದ್ಯದಲ್ಲೂ ಪರಾಭವಗೊಂಡರೆ ಪ್ಲೇ-ಆಫ್‌ ರೇಸ್‌ನಿಂದ ಬಹುತೇಕ ಹೊರಬಿದ್ದಂತಾಗುತ್ತದೆ. ರಹಾನೆ ಪಡೆಗೆ ಇದು ಮಾಡು ಇಲ್ಲವೇ ಮಡಿ ಪಂದ್ಯ ಎನಿಸಿದೆ.

ಪಿಚ್‌ ರಿಪೋರ್ಟ್‌

ವಾಂಖೇಡೆ ಕ್ರೀಡಾಂಗಣದ ಪಿಚ್‌ ಬ್ಯಾಟ್ಸ್‌ಮನ್‌ ಸ್ನೇಹಿಯಾಗಿದ್ದು, ರನ್‌ ಹೊಳೆ ಹರಿಯಲಿದೆ. ಇಲ್ಲಿ ನಡೆದಿರುವ ಪಂದ್ಯಗಳಲ್ಲಿ ತಂಡಗಳು ದೊಡ್ಡ ಮೊತ್ತ ದಾಖಲಿಸಿವೆ. ಮೊದಲು ಬ್ಯಾಟ್‌ ಮಾಡುವ ತಂಡ 200ಕ್ಕೂ ಹೆಚ್ಚು ರನ್‌ ಗಳಿಸಿದರೂ ರಕ್ಷಿಸಿಕೊಳ್ಳುವುದು ಕಷ್ಟ. ಸ್ಪಿನ್ನರ್‌ಗಳು ಪ್ರಮುಖ ಪಾತ್ರ ವಹಿಸಲಿದ್ದಾರೆ.

ಒಟ್ಟು ಮುಖಾಮುಖಿ: 18

ಮುಂಬೈ: 10

ರಾಜಸ್ಥಾನ: 08

ಸಂಭವನೀಯ ಆಟಗಾರರ ಪಟ್ಟಿ

ಮುಂಬೈ: ರೋಹಿತ್‌(ನಾಯಕ), ಡಿಕಾಕ್‌, ಸೂರ್ಯ, ಇಶಾನ್‌, ಹಾರ್ದಿಕ್‌, ಕೃನಾಲ್‌, ಪೊಲ್ಲಾರ್ಡ್‌, ರಾಹುಲ್‌, ಬೆಹ್ರೆನ್‌ಡಾಫ್‌ರ್‍, ಅಲ್ಜಾರಿ, ಬೂಮ್ರಾ.

ರಾಜಸ್ಥಾನ: ರಹಾನೆ (ನಾಯಕ), ಬಟ್ಲರ್‌, ಸ್ಮಿತ್‌, ಸ್ಯಾಮ್ಸನ್‌, ತ್ರಿಪಾಠಿ, ಸ್ಟೋಕ್ಸ್‌, ರಿಯಾನ್‌ ಪರಾಗ್‌, ಆರ್ಚರ್‌, ಶ್ರೇಯಸ್‌, ಉನಾದ್ಕತ್‌, ಧವಳ್‌.

ಸ್ಥಳ: ಮುಂಬೈ 
ಪಂದ್ಯ ಆರಂಭ: ಸಂಜೆ 4ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ 1