ಉಭಯ ತಂಡಗಳು ಕಡೆಯ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮಣಿಸಿದ್ದು, ಗೆಲುವಿನ ನಾಗಾಲೋಟದ ವಿಶ್ವಾಸದಲ್ಲಿವೆ.

ಕೋಲ್ಕತಾ[ಏ.07]: ಕೋಲ್ಕತಾ ನೈಟ್’ರೈಡರ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ನಡುವಿನ ಪಂದ್ಯದಲ್ಲಿ ಟಾಸ್ ಗೆದ್ದ ಕೆಕೆಆರ್ ನಾಯಕ ದಿನೇಶ್ ಕಾರ್ತಿಕ್ ಫೀಲ್ಡಿಂಗ್ ಆಯ್ದುಕೊಂಡಿದ್ದಾರೆ.

Scroll to load tweet…

ಸತತ ಸೋಲಿನ ಬಳಿಕ ಕೊನೆಯ ಪಂದ್ಯ ಜಯಿಸಿ ಅಂಕಪಟ್ಟಿಯಲ್ಲಿ ಕಡೆಯಿಂದ ಎರಡನೇ ಸ್ಥಾನದಲ್ಲಿರುವ ರಾಜಸ್ಥಾನ ರಾಯಲ್ಸ್ ತಂಡವು ಬಲಿಷ್ಠ ನೈಟ್’ರೈಡರ್ಸ್ ಎದುರಿಸಲು ಸಜ್ಜಾಗಿದೆ. ಮೊದಲ ಪಂದ್ಯದಲ್ಲಿ ಅಬ್ಬರಿಸಿ ಆ ಬಳಿಕ ಮೆತ್ತಗಾಗಿರುವ ಜೋಸ್ ಬಟ್ಲರ್ ಸಿಡಿದರೆ ಚೊಚ್ಚಲ ಆವೃತ್ತಿಯ ಚಾಂಪಿಯನ್ ರಾಯಲ್ಸ್ ಬೃಹತ್ ಮೊತ್ತ ಕಲೆಹಾಕಬಹುದಾಗಿದೆ. 

ರಾಜಸ್ಥಾನ ರಾಯಲ್ಸ್ ತಂಡದಲ್ಲಿ 2 ಬದಲಾವಣೆ ಮಾಡಲಾಗಿದ್ದು, ಸ್ಟುವರ್ಟ್ ಬಿನ್ನಿ, ಆರೋನ್ ವರಣ್’ಗೆ ರೆಸ್ಟ್ ನೀಡಿ ಪ್ರಶಾಂತ್ ಚೋಪ್ರಾ ಹಾಗೂ ಮಿದುನ್’ಗೆ ಅವಕಾಶ ಕಲ್ಪಿಸಲಾಗಿದೆ. ಇನ್ನು ಕೆಕೆಆರ್ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ಲೂಕಿ ಫರ್ಗ್ಯೂಸನ್ ಬದಲಿಗೆ ಹೆನ್ರಿ ಗುರ್ರೇಗೆ ಅವಕಾಶ ನೀಡಲಾಗಿದೆ.

ತಂಡಗಳು ಹೀಗಿವೆ:

KKR

Scroll to load tweet…

RR: 

Scroll to load tweet…