Asianet Suvarna News

ನೈಟ್’ರೈಡರ್ಸ್’ಗೆ ಮಾಡು ಇಲ್ಲವೇ ಮಡಿ ಪಂದ್ಯ

ವಾಂಖೇಡೆ ಕ್ರೀಡಾಂಗಣ ಈ ಎರಡೂ ತಂಡಗಳ ಜಿದ್ದಾಜಿದ್ದಿಗೆ ಸಾಕ್ಷಿಯಾಗಲಿದೆ. ಶುಕ್ರವಾರ ಪಂಜಾಬ್ ವಿರುದ್ಧ 7 ವಿಕೆಟ್‌ಗಳ ಜಯ ಸಾಧಿಸಿ ಪ್ಲೇ-ಆಫ್ ಆಸೆಯನ್ನು ಜೀವಂತ ವಾಗಿರಿಸಿಕೊಂಡಿರುವ ಕೋಲ್ಕತಾ, ಮುಂಬೈ ವಿರುದ್ಧ ಗೆದ್ದರೇ ಪ್ಲೇ-ಆಫ್ ಗೇರುವುದು ಖಚಿತವಾಗಲಿದೆ. ಸೋತರೆ ಹೊರಬೀಳಲಿದೆ.

IPL 12 Kolkata Knight Riders face in-form Mumbai Indians in do or die battle
Author
Mumbai, First Published May 5, 2019, 1:33 PM IST
  • Facebook
  • Twitter
  • Whatsapp

ಮುಂಬೈ[ಮೇ.05] ಐಪಿಎಲ್ 12ನೇ ಆವೃತ್ತಿಯ ಕೊನೆಯ ಲೀಗ್ ಪಂದ್ಯದಲ್ಲಿ ಮಾಜಿ ಚಾಂಪಿಯನ್‌ಗಳಾದ ಕೋಲ್ಕತಾ ನೈಟ್ ರೈಡರ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳ ರೋಚಕ ಹಣಾಹಣಿ ನಡೆಯಲಿದೆ.

ವಾಂಖೇಡೆ ಕ್ರೀಡಾಂಗಣ ಈ ಎರಡೂ ತಂಡಗಳ ಜಿದ್ದಾಜಿದ್ದಿಗೆ ಸಾಕ್ಷಿಯಾಗಲಿದೆ. ಶುಕ್ರವಾರ ಪಂಜಾಬ್ ವಿರುದ್ಧ 7 ವಿಕೆಟ್‌ಗಳ ಜಯ ಸಾಧಿಸಿ ಪ್ಲೇ-ಆಫ್ ಆಸೆಯನ್ನು ಜೀವಂತ ವಾಗಿರಿಸಿಕೊಂಡಿರುವ ಕೋಲ್ಕತಾ, ಮುಂಬೈ ವಿರುದ್ಧ ಗೆದ್ದರೇ ಪ್ಲೇ-ಆಫ್ ಗೇರುವುದು ಖಚಿತವಾಗಲಿದೆ. ಸೋತರೆ ಹೊರಬೀಳಲಿದೆ.

ಪಿಚ್ ರಿಪೋರ್ಟ್: 
ವಾಂಖೇಡೆ ಕ್ರೀಡಾಂಗಣ ಬೌಲಿಂಗ್ ಸ್ನೇಹಿ ಪಿಚ್ ಆಗಿದೆ. ಇಲ್ಲಿ ನಡೆದಿರುವ ಕಳೆದ 5 ಪಂದ್ಯಗಳಲ್ಲೂ ದೊಡ್ಡ ಮೊತ್ತ ದಾಖಲಾಗಿದೆ. ಕೊನೆಯ 3 ಪಂದ್ಯಗಳಲ್ಲಿ ಮೊದಲು ಫೀಲ್ಡಿಂಗ್ ಮಾಡಿದ ತಂಡ ಗೆಲುವು ಸಾಧಿಸಿದೆ. ವೇಗಿಗಳಿಗೆ ಪಿಚ್ ಹೆಚ್ಚಿನ ನೆರವು ನೀಡಲಿದೆ. ಇಲ್ಲಿ ಟಾಸ್ ಪ್ರಮುಖ ಪಾತ್ರ ವಹಿಸಲಿದೆ.

ಸಂಭಾವ್ಯ ತಂಡ ಹೀಗಿದೆ:

ಮುಂಬೈ ಇಂಡಿಯನ್ಸ್: ರೋಹಿತ್ (ನಾಯಕ), ಡಿಕಾಕ್, ಸೂರ್ಯ, ಲೆವಿಸ್, ಹಾರ್ದಿಕ್, ಪೊಲ್ಲಾರ್ಡ್, ಕೃನಾಲ್, ಸ್ರಾನ್, ರಾಹುಲ್, ಬುಮ್ರಾ, ಮಾಲಿಂಗ

ಕೋಲ್ಕತಾ ನೈಟ್’ರೈಡರ್ಸ್: ಶುಭ್‌ಮನ್, ಲಿನ್, ಉತ್ತಪ್ಪ, ರಸೆಲ್, ಕಾರ್ತಿಕ್(ನಾಯಕ), ನರೈನ್, ನಿತೀಶ್, ರಿಂಕು, ಪೀಯೂಷ್, ಗುರ್ನೆ, ಸಂದೀಪ್ ವಾರಿಯರ್

ಸ್ಥಳ: ಮುಂಬೈ
ಆರಂಭ: ರಾತ್ರಿ 8ಕ್ಕೆ 
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ 1

Follow Us:
Download App:
  • android
  • ios