ಮೊಹಾಲಿ[ಮೇ.05]: ಐಪಿಎಲ್ 12ನೇ ಆವೃತ್ತಿಯಲ್ಲಿ ಈಗಾಗಲೇ ಪ್ಲೇ-ಆಫ್ ಸ್ಥಾನವನ್ನು ಖಚಿತಪಡಿಸಿಕೊಂಡಿರುವ ಚೆನ್ನೈ, ಭಾನುವಾರ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಸೆಣಸಲು ಸಜ್ಜಾಗಿದೆ. 

ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳುವ ವಿಶ್ವಾಸದಲ್ಲಿರುವ ಚೆನ್ನೈ, ಪಂಜಾಬ್ ಎದುರು ಜಯದ ಲೆಕ್ಕಚಾರದಲ್ಲಿ ಕಣಕ್ಕಿಳಿಯುತ್ತಿದೆ. ಇನ್ನೊಂದೆಡೆ ತವರಿನಲ್ಲಿ ನಡೆಯಲಿರುವ ಕೊನೆಯ ಲೀಗ್ ಪಂದ್ಯದಲ್ಲಿ ಗೆಲುವು ಸಾಧಿಸುವ ಉತ್ಸಾಹದಲ್ಲಿ ಅಶ್ವಿನ್ ನೇತೃತ್ವದ ಪಂಜಾಬ್ ಇದೆ. ಒಂದು ಕಡೆ ಅಗ್ರಸ್ಥಾನ ಹೊಂದಿರುವ ಚೆನ್ನೈ ಸೂಪರ್’ಕಿಂಗ್ಸ್ ಇದೀಗ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಪಂಜಾಬ್ ಎದುರು ಕಾದಾಡಲಿದೆ.

ಪಿಚ್ ರಿಪೋರ್ಟ್
ಇಲ್ಲಿನ ಪಿಚ್ ಬ್ಯಾಟಿಂಗ್ ಸ್ನೇಹಿಯಾಗಿದೆ. ಕ್ರೀಡಾಂಗಣ ದೊಡ್ಡದಿರುವ ಕಾರಣದಿಂದ ಬೌಂಡರಿ ಬಾರಿಸುವುದು ಕಷ್ಟವಾಗಲಿದೆ. ಮೊದಲು ಬ್ಯಾಟ್ ಮಾಡುವ ತಂಡ 190ಕ್ಕೂ ಅಧಿಕ ಮೊತ್ತಗಳಿಸಿದರೇ ಸುರಕ್ಷಿತ. ಮೊದಲು ಫೀಲ್ಡಿಂಗ್ ಮಾಡುವ ತಂಡಕ್ಕೆ ಹೆಚ್ಚಿನ ಲಾಭ. ಟಾಸ್ ಪ್ರಮುಖ ಪಾತ್ರವಹಿಸಲಿದೆ. 

ಸಂಭಾವ್ಯ ತಂಡ ಹೀಗಿದೆ:

ಕಿಂಗ್ಸ್ ಇಲೆವನ್ ಪಂಜಾಬ್: ಗೇಲ್, ರಾಹುಲ್, ಮಯಾಂಕ್, ನಿಕೋಲಸ್, ಮನ್‌ದೀಪ್, ಕರ್ರನ್, ಅಶ್ವಿನ್ (ನಾಯಕ), ಟೈ, ಶಮಿ, ಎಂ. ಅಶ್ವಿನ್, ಆರ್ಶ್‌ದೀಪ್

ಚೆನ್ನೈ ಸೂಪರ್’ಕಿಂಗ್ಸ್: ಡುಪ್ಲೆಸಿ, ವಾಟ್ಸನ್, ರೈನಾ, ಧೋನಿ (ನಾಯಕ), ಜಡೇಜಾ, ರಾಯುಡು, ಜಾಧವ್, ಬ್ರಾವೋ, ದೀಪಕ್, ಹರ್ಭಜನ್, ಇಮ್ರಾನ್ ತಾಹಿರ್

ಸ್ಥಳ: ಮೊಹಾಲಿ

ಸಮಯ: ಸಂಜೆ 4ಕ್ಕೆ

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್