ಆಡಿರುವ 5 ಪಂದ್ಯಗಳಲ್ಲಿ 4ರಲ್ಲಿ ಸೋತು, ಕೇವಲ 1 ಪಂದ್ಯ ಗೆದ್ದಿರುವ ರಾಜಸ್ಥಾನ ರಾಯಲ್ಸ್ ತಂಡ ಇದೀಗ ಬಲಿಷ್ಠ ಚೆನ್ನೈ ಎದುರು ಕಾದಾಡಲು ಸಜ್ಜಾಗಿದೆ. ಇನ್ನು 6 ಪಂದ್ಯಗಳನ್ನಾಡಿರುವ ಚೆನ್ನೈ 5 ರಲ್ಲಿ ಜಯಿಸಿದ್ದು ಕೇವಲ 1 ಪಂದ್ಯ ಮಾತ್ರ ಸೋತಿದ್ದು, ರಾಜಸ್ಥಾನವನ್ನು ಮಣಿಸುವ ಮೂಲಕ ಮತ್ತೊಮ್ಮೆ ಅಗ್ರಸ್ಥಾನಕ್ಕೇರಲು ಹವಣಿಸುತ್ತಿದೆ.

ಜೈಪುರ[ಏ.11]: ಹಾಲಿ ಚಾಂಪಿಯನ್ ಚೆನ್ನೈ ಸೂಪರ್’ಕಿಂಗ್ಸ್ ಹಾಗೂ ಚೊಚ್ಚಲ ಆವೃತ್ತಿಯ ಚಾಂಪಿಯನ್ ರಾಜಸ್ಥಾನ ರಾಯಲ್ಸ್ ನಡುವಿನ ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ಸೂಪರ್’ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ ಫೀಲ್ಡಿಂಗ್ ಆಯ್ದುಕೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಚೆನ್ನೈ ತಂಡದಲ್ಲಿ 2 ಬದಲಾವಣೆ ಮಾಡಲಾಗಿದ್ದು, ಮಿಚೆಲ್ ಸ್ಯಾಂಟ್ನರ್ ಹಾಗೂ ಶಾರ್ದೂಲ್ ಠಾಕೂರ್ ತಂಡ ಕೂಡಿಕೊಂಡಿದ್ದು, ಹರ್ಭಜನ್ ಹಾಗೂ ಕುಗ್ಲಿಜಿನ್’ಗೆ ವಿಶ್ರಾಂತಿ ನೀಡಲಾಗಿದೆ. ಇನ್ನು ರಾಜಸ್ಥಾನ ರಾಯಲ್ಸ್ ತಂಡದಲ್ಲಿ 3 ಬದಲಾವಣೆ ಮಾಡಲಾಗಿದ್ದು, ಸಂಜು ಸ್ಯಾಮ್ಸನ್, ಜಯದೇವ್ ಉನಾದ್ಕಟ್ ತಂಡ ಕೂಡಿಕೊಂಡಿದ್ದು, ಯುವ ಕ್ರಿಕೆಟಿಗ ರಿಯಾನ್ ಪರಾಗ್ ಐಪಿಎಲ್’ಗೆ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ.

ಆಡಿರುವ 5 ಪಂದ್ಯಗಳಲ್ಲಿ 4ರಲ್ಲಿ ಸೋತು, ಕೇವಲ 1 ಪಂದ್ಯ ಗೆದ್ದಿರುವ ರಾಜಸ್ಥಾನ ರಾಯಲ್ಸ್ ತಂಡ ಇದೀಗ ಬಲಿಷ್ಠ ಚೆನ್ನೈ ಎದುರು ಕಾದಾಡಲು ಸಜ್ಜಾಗಿದೆ. ಇನ್ನು 6 ಪಂದ್ಯಗಳನ್ನಾಡಿರುವ ಚೆನ್ನೈ 5 ರಲ್ಲಿ ಜಯಿಸಿದ್ದು ಕೇವಲ 1 ಪಂದ್ಯ ಮಾತ್ರ ಸೋತಿದ್ದು, ರಾಜಸ್ಥಾನವನ್ನು ಮಣಿಸುವ ಮೂಲಕ ಮತ್ತೊಮ್ಮೆ ಅಗ್ರಸ್ಥಾನಕ್ಕೇರಲು ಹವಣಿಸುತ್ತಿದೆ.

ತಂಡಗಳು ಹೀಗಿವೆ:

Scroll to load tweet…