Asianet Suvarna News Asianet Suvarna News

ಪ್ಲೇ ಆಫ್‌ ಟಿಕೆಟ್‌: ಬಿಸಿಸಿಐಗೆ 20 ಕೋಟಿ ರುಪಾಯಿ ನಿರೀಕ್ಷೆ

ಕಳೆದ ವರ್ಷ ಪ್ಲೇ-ಆಫ್‌ ಟಿಕೆಟ್‌ ಮಾರಾಟದಿಂದ ಬಿಸಿಸಿಐ 18 ಕೋಟಿ ರುಪಾಯಿ ಗಳಿಸಿತ್ತು. ಈ ವರ್ಷ ಹೆಚ್ಚುವರಿ 2 ಕೋಟಿ ರುಪಾಯಿ ಗಳಿಸುವ ನಿರೀಕ್ಷೆಯಲ್ಲಿದೆ. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ...

IPL 12 BCCI eyes Rs 20 crore from gate money during playoffs
Author
New Delhi, First Published May 1, 2019, 1:55 PM IST

ಮುಂಬೈ(ಮೇ.01): ಐಪಿಎಲ್‌ ಪ್ಲೇ-ಆಫ್‌ ಪಂದ್ಯಗಳ ಟಿಕೆಟ್‌ ಮಾರಾಟದಿಂದ ಬಿಸಿಸಿಐ 20 ಕೋಟಿ ರುಪಾಯಿ ಗಳಿಸುವ ನಿರೀಕ್ಷೆಯಲ್ಲಿದೆ. ಲೀಗ್‌ ಹಂತದ ಪಂದ್ಯಗಳ ಟಿಕೆಟ್‌ ಮಾರಾಟದಿಂದ ಬರುವ ಹಣ ಫ್ರಾಂಚೈಸಿಗಳ ಪಾಲಾಗಲಿದೆ. ಪ್ಲೇ-ಆಫ್‌ನ ಟಿಕೆಟ್‌ ಮಾರಾಟದ ಹಣದ ಮಾತ್ರ ಬಿಸಿಸಿಐ ಖಜಾನೆ ಸೇರಲಿದೆ. 

IPL ಇತಿಹಾಸದಲ್ಲೇ ಅಪರೂಪದ ದಾಖಲೆ ಬರೆದ CSK

ಚೆನ್ನೈ ಕ್ರೀಡಾಂಗಣದಲ್ಲಿ ಕೆಲ ಸ್ಟ್ಯಾಂಡ್‌ಗಳಿಗೆ ಪ್ರವೇಶ ನಿರ್ಬಂಧಿಸಿರುವ ಕಾರಣ, ಟಿಕೆಟ್‌ ನಷ್ಟವಾಗಲಿದೆ ಎನ್ನುವ ಕಾರಣಕ್ಕೆ ಫೈನಲ್‌ ಪಂದ್ಯವನ್ನು ಚೆನ್ನೈನಿಂದ ಹೈದರಾಬಾದ್‌ಗೆ ಸ್ಥಳಾಂತರಿಸಲಾಯಿತು. ಕಳೆದ ವರ್ಷ ಪ್ಲೇ-ಆಫ್‌ ಟಿಕೆಟ್‌ ಮಾರಾಟದಿಂದ ಬಿಸಿಸಿಐ 18 ಕೋಟಿ ರುಪಾಯಿ ಗಳಿಸಿತ್ತು. ಈ ವರ್ಷ ಹೆಚ್ಚುವರಿ 2 ಕೋಟಿ ರುಪಾಯಿ ಗಳಿಸುವ ನಿರೀಕ್ಷೆಯಲ್ಲಿದೆ.

ಪಂದ್ಯ ಗೆಲ್ಲಿಸಿ IPLಗೆ ಗುಡ್’ಬೈ ಹೇಳಿದ ವಾರ್ನರ್ ಹೇಳಿದ್ದಿಷ್ಟು...

12ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಈಗಾಗಲೇ ಚೆನ್ನೈ ಸೂಪರ್’ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಪ್ಲೇ ಆಫ್ ಪ್ರವೇಶಿಸಿವೆ. ಇನ್ನುಳಿದ 2 ಸ್ಥಾನಗಳಿಗೆ ಮುಂಬೈ ಇಂಡಿಯನ್ಸ್, ಸನ್’ರೈಸರ್ಸ್ ಹೈದರಾಬಾದ್, ಕೋಲ್ಕತಾ ನೈಟ್’ರೈಡರ್ಸ್, ಪಂಜಾಬ್ ಸೂಪರ್’ಕಿಂಗ್ಸ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.   

Follow Us:
Download App:
  • android
  • ios