ನವದೆಹಲಿ(ಫೆ.22): ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಾಳೆ[ಶನಿವಾರ]ಯಿಂದ ಆರಂಭಗೊಳ್ಳಲಿರುವ ಶೂಟಿಂಗ್ ವಿಶ್ವಕಪ್ ಟೂರ್ನಿಗೆ ಪಾಕಿಸ್ತಾನ ಶೂಟರ್‌ಗಳಿಗೆ ವೀಸಾ ನಿರಾಕರಿಸಿದ ಭಾರತಕ್ಕೆ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ( IOC)ತಿರುಗೇಟು ನೀಡಿದೆ. ಪುಲ್ವಾಮಾ ದಾಳಿಯಿಂದಾಗಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಬಂಧ ಹದೆಗೆಟ್ಟಿದೆ. ಹೀಗಾಗಿ ಶೂಟಿಂಗ್ ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳಬೇಕಿದ್ದ ಪಾಕಿಸ್ತಾನ ಶೂಟರ್ಸ್‌ಗೆ ಭಾರತ ವೀಸಾ ನೀಡಲು ವಿಳಂಬ ಮಾಡಿತ್ತು.

ಇದನ್ನೂ ಓದಿ: ISSF ಶೂಟಿಂಗ್ ವಿಶ್ವಕಪ್: ಭಾರತಕ್ಕೆ ಬರಲ್ಲ ಪಾಕಿಸ್ತಾನ ಶೂಟರ್ಸ್!

ಕೊನೆ ಕ್ಷಣದಲ್ಲಿ ವೀಸಾ ಮಂಜೂರು ಮಾಡಿದರೂ ಪಾಕಿಸ್ತಾನ ಶೂಟರ್ಸ್‌ಗಳಿಗೆ ತಲುಪಿಲ್ಲ. ಇದರಿಂದ ಪಾಕಿಸ್ತಾನ ಶೂಟಿಂಗ್ ಫೆಡರೇಶನ್ ಅಂತಾರಾಷ್ಟ್ರೀಯ ಸಮಿತಿಗೆ ದೂರು ನೀಡಿತ್ತು. ಇದೀಗ ಅಂತಾರಾಷ್ಟ್ರೀ ಒಲಿಂಪಿಕ್ ಸಮಿತಿ ಶಾಕ್ ನೀಡಿದೆ. ಭವಿಷ್ಯದಲ್ಲಿ ಭಾರತ ಯಾವುದೇ ಕ್ರೀಡೆ ಆಯೋಜಿಸುವ ಅವಕಾಶ ಕಳೆದುಕೊಂಡಿದೆ. ಇಷ್ಟೇ ಅಲ್ಲ, 25 ಮೀಟರ್ ಫೈರ್ ಶೂಟಿಂಗ್ ಒಲಿಂಪಿಕ್ಸ್ ಕ್ರೀಡಾಕೂಟದಿಂದಲೂ ಭಾರತಕ್ಕೆ ನಿರ್ಬಂಧ ಹೇರಿದೆ.

ಇದನ್ನೂ ಓದಿ: ಶೂಟಿಂಗ್‌ ವಿಶ್ವಕಪ್‌: ಪಾಕ್‌ ಶೂಟರ್‌ಗಳಿಗೆ ಭಾರತ ವೀಸಾ

ಪಾಕಿಸ್ತಾನ ಶೂಟರ್ಸ್‌ಗೆ ವೀಸಾ ನಿರಾಕರಿಸಿದ ಭಾರತ ಇದೀಗ ಸಂಕಷ್ಟಕ್ಕೆ ಸಿಲುಕಿದೆ. ಭಾರತದ ಶೂಟರ್‌ಗಳು ಇತರ ಕ್ರೀಡಾಪಟುಗಳು ಇದೀಗ ಅವಕಾಶವಿಲ್ಲದೆ ಪರದಾಡುವಂತಾಗಿದೆ. ಇಷ್ಟೇ ಅಲ್ಲ ಎಲ್ಲಾ ದೇಶದ ಕ್ರೀಡಾಪಟುಗಳಿಗೆ ಅವಕಾಶ ಕಲ್ಪಿಸುವ ನಿರ್ಧಾರವನ್ನ ಭಾರತ ಸರ್ಕಾರ ಸ್ಪಷ್ಪಪಡಿಸಿದರೆ ಮಾತ್ರ IOC ನಿರ್ಧಾರ ಬದಲಿಸುವ ಕುರಿತು ಚಿಂತಿಸಲಾಗುವುದು ಎಂದಿದೆ.