21 ವರ್ಷದ ಇಮಾಮ್, ಎಡಗೈ ಬ್ಯಾಟ್ಸ್'ಮನ್ ಆಗಿದ್ದು 31 ಪ್ರಥಮ ದರ್ಜೆ ಹಾಗೂ 24 ಲಿಸ್ಟ್ 'ಎ' ಪಂದ್ಯಗಳನ್ನಾಡಿದ್ದಾರೆ.

ಕರಾಚಿ(ಅ.7): ಅಧ್ಯಕ್ಷ ಇಂಜಿಮಾಮ್ ಉಲ್ ಹಕ್, ಶ್ರೀಲಂಕಾ ವಿರುದ್ಧ ಮುಂಬರುವ ಏಕದಿನ ಸರಣಿಗೆ ಪಾಕಿಸ್ತಾನ ತಂಡದಲ್ಲಿ ತಮ್ಮ ಸೋದರಳಿಯ ಇಮಾಮ್ ಉಲ್ ಹಕ್‌'ಗೆ ಸ್ಥಾನ ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಲಂಕಾ ವಿರುದ್ಧದ ಏಕದಿನ ಸರಣಿಗೆ 15 ಆಟಗಾರರ ತಂಡವನ್ನು ಪ್ರಕಟಿಸಲಾಗಿದ್ದು, ಚಾಂಪಿಯನ್ಸ್ ಟ್ರೋಫಿಗೆ ಇದ್ದ ತಂಡವನ್ನೇ ಬಹುತೇಕ ಉಳಿಸಿಕೊಳ್ಳಲಾಗಿದೆ. ಅಜರ್ ಅಲಿಗೆ ವಿಶ್ರಾಂತಿ ನೀಡಲಾಗಿದೆ. ಇಮಾನ್ ಆಯ್ಕೆ ಸಾಮಾಜಿಕ ತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.

21 ವರ್ಷದ ಇಮಾಮ್, ಎಡಗೈ ಬ್ಯಾಟ್ಸ್'ಮನ್ ಆಗಿದ್ದು 31 ಪ್ರಥಮ ದರ್ಜೆ ಹಾಗೂ 24 ಲಿಸ್ಟ್ 'ಎ' ಪಂದ್ಯಗಳನ್ನಾಡಿದ್ದಾರೆ.