ಇದುವರೆಗೆ ಭಾರತ-ಆಸ್ಟ್ರೇಲಿಯಾ ತಂಡಗಳು ಏಕದಿನ ಕ್ರಿಕೆಟ್'ನಲ್ಲಿ 123 ಬಾರಿ ಮುಖಾಮುಖಿಯಾಗಿದ್ದು, ಆಸ್ಟ್ರೇಲಿಯಾ 72 ಬಾರಿ ಗೆಲುವಿನ ನಗೆ ಬೀರಿದ್ದರೆ, ಭಾರತ 41 ಪಂದ್ಯಗಳನ್ನು ಗೆದ್ದುಕೊಂಡಿದೆ.
ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಹಾಗೂ ಸ್ಟೀವ್ ಸ್ಮಿತ್ ನೇತೃತ್ವದ ಆಸ್ಟ್ರೇಲಿಯಾ ತಂಡಗಳ ಮುಖಾಮುಖಿಗೆ ಚೆನ್ನೈನ ಚೆಪಾಕ್ ಮೈದಾನ ವೇದಿಕೆಯಾಗಿದೆ. ಐದು ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿಯೇ ವಿಜಯದುಂದುಬಿ ಮೊಳಗಿಸಲು ವಿರಾಟ್ ಪಡೆ ಸಜ್ಜಾಗಿದ್ದರೆ, ಆತಿಥೇಯ ತಂಡಕ್ಕೆ ಶಾಕ್ ನೀಡಲು ಸಜ್ಜಾಗಿದೆ.
ಉಭಯ ತಂಡಗಳ ನಡುವಿನ ಕೆಲವು ಕುತೂಹಲಕಾರಿ ಅಂಕಿಅಂಶಗಳು ನಿಮಗಾಗಿ
* ಇದುವರೆಗೆ ಭಾರತ-ಆಸ್ಟ್ರೇಲಿಯಾ ತಂಡಗಳು ಏಕದಿನ ಕ್ರಿಕೆಟ್'ನಲ್ಲಿ 123 ಬಾರಿ ಮುಖಾಮುಖಿಯಾಗಿದ್ದು, ಆಸ್ಟ್ರೇಲಿಯಾ 72 ಬಾರಿ ಗೆಲುವಿನ ನಗೆ ಬೀರಿದ್ದರೆ, ಭಾರತ 41 ಪಂದ್ಯಗಳನ್ನು ಗೆದ್ದುಕೊಂಡಿದೆ. 10 ಪಂದ್ಯಗಳು ಫಲಿತಾಂಶ ಹೊರಬಂದಿಲ್ಲ.
* ಗರಿಷ್ಠ ರನ್ ಕಲೆ ಹಾಕಿದ ಟಾಪ್ 3 ಬ್ಯಾಟ್ಸ್'ಮನ್'ಗಳು
ಭಾರತ ಆಸ್ಟ್ರೇಲಿಯಾ
ತೆಂಡುಲ್ಕರ್ : 3077 ರಿಕಿ ಪಾಂಟಿಂಗ್ : 2164
ರೋಹಿತ್ ಶರ್ಮಾ : 1297 ಗಿಲ್'ಕ್ರಿಸ್ಟ್ : 1622
ಎಂ.ಎಸ್ ಧೋನಿ : 1255 ಹ್ಯಾಡನ್ : 1450
ಗರಿಷ್ಠ ವಿಕೆಟ್ ಪಡೆದ ಬೌಲರ್'ಗಳು
ಕಪಿಲ್ ದೇವ್: 45 ಬ್ರೇಟ್ ಲೀ: 55
ಅಜಿತ್ ಅಗರ್ಕರ್: 36 ಮಿಚೆಲ್ ಜಾನ್ಸನ್: 43
ಜಾವಗಲ್ ಶ್ರೀನಾಥ್: 33 ಸ್ಟೀವ್ ವಾ: 43
