ಪ್ರಸಕ್ತ ವರ್ಷದ ಫೆಬ್ರವರಿಯಲ್ಲಿ ಬೆನ್ನುಹುರಿ ನೋವಿನಿಂದ ಬಳಲಿದ್ದು, ಕಳೆದ ತಿಂಗಳಷ್ಟೇ ತಂಡಕ್ಕೆ ಮರಳಿದ್ದರು. ಇದೀಗ ಸಿಡಲ್ ಮತ್ತದೇ ಬೆನ್ನುಹುರಿ ನೋವಿಗೆ ತುತ್ತಾಗಿದ್ದು, ಸ್ಕ್ಯಾನ್ ಮಾಡಿಸಿದ ವೇಳೆ ತಿಳಿದುಬಂದಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿದೆ.
ಹೋಬಾರ್ಟ್(ನ.09): ಆಸ್ಟ್ರೇಲಿಯಾದ ವೇಗದ ಬೌಲರ್ ಪೀಟರ್ ಸಿಡಲ್ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಹೋಬಾರ್ಟ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.
ಸಿಡಲ್, ಪ್ರಸಕ್ತ ವರ್ಷದ ಫೆಬ್ರವರಿಯಲ್ಲಿ ಬೆನ್ನುಹುರಿ ನೋವಿನಿಂದ ಬಳಲಿದ್ದು, ಕಳೆದ ತಿಂಗಳಷ್ಟೇ ತಂಡಕ್ಕೆ ಮರಳಿದ್ದರು. ಇದೀಗ ಸಿಡಲ್ ಮತ್ತದೇ ಬೆನ್ನುಹುರಿ ನೋವಿಗೆ ತುತ್ತಾಗಿದ್ದು, ಸ್ಕ್ಯಾನ್ ಮಾಡಿಸಿದ ವೇಳೆ ತಿಳಿದುಬಂದಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿದೆ.
ಸಿಡಲ್‌ಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದ್ದು, 12ರಿಂದ ಆರಂಭವಾಗುವ ಎರಡನೇ ಟೆಸ್ಟ್ ವೇಳೆಗೆ ಚೇತರಿಸಿಕೊಳ್ಳುವ ಸಾಧ್ಯತೆಯಿದೆ. ಚಿಕಿತ್ಸೆಗೆ ಸಿಡಲ್ ಉತ್ತಮವಾಗಿ ಸ್ಪಂದಿಸುತ್ತಿದ್ದು ಶೀಘ್ರವಾಗಿ ಗುಣಮುಖರಾಗಲಿದ್ದಾರೆ ಎಂದು ತಂಡದ ಪಿಸಿಯೊ ಡೇವಿಡ್ ಬೇಕ್ಲೆ ಹೇಳಿದ್ದಾರೆ.
