ಮೊದಲೆರಡು ಪಂದ್ಯಗಳಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಮೂಲಕ ತಂಡಕ್ಕೆ ನೆರವಾಗಿದ್ದ ಸ್ಟಾರ್ಕ್, ಒಂದು ಅರ್ಧ ಸೇರಿದಂತೆ ಐದು ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದರು.
ರಾಂಚಿ(ಮಾ.10): ಬಾರ್ಡರ್-ಗವಾಸ್ಕರ್ ಟ್ರೋಫಿ ಜಯಿಸಬೇಕು ಎಂದು ಭಾರತ ಪ್ರವಾಸ ಕೈಗೊಂಡಿದ್ದ ಆಸ್ಟ್ರೇಲಿಯಾ ತಂಡ ಪುಣೆ ಟೆಸ್ಟ್ ಗೆದ್ದು ಉತ್ತಮ ಆರಂಭವನ್ನೇ ಪಡೆಯಿತು. ಬೆಂಗಳೂರಿನಲ್ಲಿ ನಡೆದ ಎರಡನೇ ಟೆಸ್ಟ್'ನಲ್ಲಿ ಕೊಹ್ಲಿ ಪಡೆ ತಿರುಗೇಟು ನೀಡುವ ಮೂಲಕ ಪ್ರವಾಸಿಗರಿಗೆ ಶಾಕ್ ನೀಡಿದೆ. ಈ ಶಾಕ್'ನಿಂದ ಕಾಂಗರು ಪಡೆ ಹೊರಬರುವಷ್ಟರಲ್ಲಿಯೇ ಮತ್ತೊಂದು ಶಾಕ್ ಎದುರಾಗಿದೆ.
ಆಸ್ಟ್ರೆಲಿಯಾ ತಂಡದ ವೇಗದ ಬೌಲಿಂಗ್ ಸಾರಥ್ಯ ವಹಿಸಿದ್ದ ಮಿಚೆಲ್ ಸ್ಟಾರ್ಕ್ ಬಲಗಾಲು ಗಾಯದ ಸಮಸ್ಯೆಯಿಂದ ಮುಂದಿನ ಎರಡು ಟೆಸ್ಟ್ ಪಂದ್ಯಗಳಿಂದ ಹೊರಬಿದ್ದಿದ್ದಾರೆ. ಬೆಂಗಳೂರು ಟೆಸ್ಟ್ ಪಂದ್ಯದ ವೇಳೆಯಲ್ಲಿಯೇ ಬಲಗಾಲು ನೋವಿನಿಂದ ಬಳಲುತ್ತಿದ್ದರು. ಬೆಂಗಳೂರಿನಲ್ಲಿ ಸ್ಕ್ಯಾನ್ ಮಾಡಿದಾಗ ಕಾಲಿನ ಮೂಳೆಯಲ್ಲಿ ಬಿರುಕುಬಿಟ್ಟಿರುವುದು ಕಾಣಿಸಿಕೊಂಡಿದೆ. ಹಾಗಾಗಿ ಹೆಚ್ಚಿನ ಚಿಕಿತ್ಸೆಗಾಗಿ ತವರಿಗೆ ವಾಪಾಸಾಗಿದ್ದಾರೆ ಎಂದು ಆಸೀಸ್ ತಂಡದ ಫಿಸಿಯೋ ಡೇವಿಡ್ ಬೇಕ್ಲೀ ಹೇಳಿದ್ದಾರೆ.
ಮೊದಲೆರಡು ಪಂದ್ಯಗಳಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಮೂಲಕ ತಂಡಕ್ಕೆ ನೆರವಾಗಿದ್ದ ಸ್ಟಾರ್ಕ್, ಒಂದು ಅರ್ಧ ಸೇರಿದಂತೆ ಐದು ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದರು.
ಆಲ್ರೌಂಡರ್ ಮಿಚೆಲ್ ಮಾರ್ಷ್ ಬಳಿಕ ಸ್ಟಾರ್ಕ್ ತವರಿಗೆ ಮರಳುತ್ತಿರುವ ಎರಡನೇ ಆಟಗಾರ ಎನಿಸಿದ್ದಾರೆ. ಈ ಮೊದಲು ಮಿಚೆಲ್ ಮಾರ್ಷ್ ಭುಜದ ನೋವಿನಿಂದಾಗಿ ತವರಿಗೆ ಮರಳಿದ್ದಾರೆ. ಮೂರನೇ ಟೆಸ್ಟ್ ಪಂದ್ಯ ರಾಂಚಿಯಲ್ಲಿ ಮಾರ್ಚ್ 16ರಿಂದ ಆರಂಭವಾಗಲಿದೆ.
