ಡಿ.16ರಿಂದ 20 ರವರೆಗೆ ನಡೆಯುವ 5ನೇ ಟೆಸ್ಟ್‌'ನಲ್ಲಿ ಶಮಿ ಮತ್ತು ಸಹಾ ಆಡುವುದಿಲ್ಲ ಎಂದು ಬಿಸಿಸಿಐ ಮೆಡಿಕಲ್ ತಂಡ ಸ್ಪಷ್ಟಪಡಿಸಿದೆ ಎಂದು ಕಾರ್ಯದರ್ಶಿ ಅಜಯ್ ಶಿರ್ಕೆ ಹೇಳಿದ್ದಾರೆ.

ಮುಂಬೈ(ಡಿ.11): ಮಧ್ಯಮ ಕ್ರಮಾಂಕದ ವೇಗಿ ಮೊಹಮ್ಮದ್ ಶಮಿ ಮತ್ತು ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ, ಇಂಗ್ಲೆಂಡ್ ವಿರುದ್ಧದ ಐದನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದಿಂದ ಹೊರಗುಳಿಯಲಿದ್ದಾರೆ.

ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಶಮಿ ಮತ್ತು ಸಹಾ ಮುಂಬೈ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿದಿರಲಿಲ್ಲ.

ರಾಜ್‌ಕೋಟ್‌ನಲ್ಲಿ ನಡೆದ ಸರಣಿಯ ಮೊದಲ ಪಂದ್ಯದಲ್ಲಿ ಶಮಿ ತಮ್ಮ ಬಲಗಾಲಿನ ನೋವಿಗೆ ತುತ್ತಾಗಿದ್ದರು. ಆದರೂ ಮೂರನೇ ಟೆಸ್ಟ್'ವರೆಗೂ ತಂಡದಲ್ಲಿ ಸ್ಥಾನ ಪಡೆದಿದ್ದರು.

ಡಿ.16ರಿಂದ 20 ರವರೆಗೆ ನಡೆಯುವ 5ನೇ ಟೆಸ್ಟ್‌'ನಲ್ಲಿ ಶಮಿ ಮತ್ತು ಸಹಾ ಆಡುವುದಿಲ್ಲ ಎಂದು ಬಿಸಿಸಿಐ ಮೆಡಿಕಲ್ ತಂಡ ಸ್ಪಷ್ಟಪಡಿಸಿದೆ ಎಂದು ಕಾರ್ಯದರ್ಶಿ ಅಜಯ್ ಶಿರ್ಕೆ ಹೇಳಿದ್ದಾರೆ.