ನವದೆಹಲಿ(ಜೂ.23): ಶುಕ್ರವಾರದಂದು ವೆಸ್ಟ್ ಇಂಡೀಸ್ ತಂಡದ ವಿರುದ್ಧ ನಡೆಯಲಿರುವ ಈ ಸೀರೀಸ್'ನ ಮೊದಲ ಅಂತರಾಷ್ಟ್ರೀಯ ಏಕದಿನ ಪಂದ್ಯಕ್ಕೆ ಟೀಂ ಇಂಡಿಯಾದ ಆಟಗಾರರು ಬೆವರಿಳಿಸಿ ಅಭ್ಯಾಸ ನಡೆಸುತ್ತಿದ್ದರು. ಈ ವೇಳೆ ಟೀಂ ಇಂಡಿಯಾದ ಆಟಗಾರರಿರನ್ನು ನೋಡಲು ಇಬ್ಬರು ಹಳೆಯ ಸ್ನೇಹಿತರು ಆಗಮಿಸಿದ್ದು, ಇವರ ಆಗಮನ ತಂಡದ ಆಟಗಾರರಿಗೆ ಶಾಕ್ ಕೊಡುವುದರೊಂದಿಗೆ ಖುಷಿಗೊಳಿಸಿತ್ತು. ಅಷ್ಟಕ್ಕೂ ಆ ಇಬ್ಬರು ಹಳೆಯ ಗೆಳೆಯರು ಯಾರು ಅಂತೀರಾ? ಇಲ್ಲಿದೆ ವಿವರ

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(BCCI)ಯು ತನ್ನ ಮೈಕ್ರೋ ಬ್ಲಾಗಿಂಗ್ ವೆಬ್'ಸೈಟ್ ಟ್ವಿಟರ್ ಅಕೌಂಟ್'ನಲ್ಲಿ ಫೋಟೋ ಒಂದನ್ನು ಶೇರ್ ಮಾಡಿಕೊಂಡಿದೆ. ಈ ಫೋಟೋದಲ್ಲಿ ವೆಸ್ಟ್ ಇಂಡೀಸ್ ಆಟಗಾರರಾದ ಡ್ವೆನ್ ಬ್ರಾವೋ ಹಾಗೂ ಸಹೋದರ ಡ್ಯಾರನ್ ಬ್ರಾವೋ ಟೀಂ ಇಂಡಿಯಾದ ಮಾಜಿ ನಾಯಕ ಧೋನಿ, ರಿಷಬ್ ಪಂತ್ ಹಾಗೂ ಹಾರ್ಧಿಕ್ ಪಾಂಡ್ಯಾರೊಂದಿಗೆ ನಗುತ್ತಲೇ ಮಾತನಾಡುತ್ತಿರುವುದು ಕಂಡು ಬರುತ್ತದೆ.

ಇನ್ನು ಡ್ವೆನ್ ಬ್ರಾವೋ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಇನ್ನಿತರ ಆಟಗಾರರೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ. ಇದಕ್ಕೆ ಕಾರಣವಾಗಿದ್ದು ಇಂಡಿಯನ್ ಪ್ರೀಮಿಯರ್ ಲೀಗ್. ಧೋನಿ ನೇತೃತ್ವದ ತಂಡವಾಗಿದ್ದ ಚೆನ್ನೈ ಸೂಪರ್ ಜೈಂಟ್ಸ್ ಫ್ರಾಂಚೈಸಿಯಲ್ಲಿ ಡ್ವೆನ್ ಬ್ರಾವೋ ಹಲವಾರು ವರ್ಷಗಳ ಕಾಲ ಆಡಿದ್ದಾರೆ. ಇನ್ನೊಂದೆಡೆ ಡ್ಯಾರನ್ ಬ್ರಾವೋ ಕೂಡಾ ಡೆಕ್ಕನ್ ಚಾರ್ಜರ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರವಾಗಿ ಐಪಿಎಲ್'ನಲ್ಲಿ ಆಡಿದ್ದಾರೆ, ಆದರೂ ಇವರು ತಮ್ಮ ಸಹೋದರನಷ್ಟು ಫೇಮಸ್ ಆಗಿಲ್ಲ.

ತಮ್ಮ ಈ ಇಬ್ಬರು ಹಳೆಯ ಗೆಳೆಯರನ್ನು ಕಂಡ ಟೀಂ ಇಂಡಿಯಾದ ಾಟಗಾರರ ಮುಖದಲ್ಲೂ ಸಂತಸ ಕಂಡು ಬಂದಿದೆ. ಆದರೆ ಹಾರ್ದಿಕ್ ಪಾಂಡ್ಯಾ ಮಾತ್ರ ಇಬ್ಬರನ್ನೂ ಕಂಡು ಇದು ನಿಜವೇ ಎಂಬ ಭಾವನೆಯನ್ನು ವ್ಯಕ್ತಪಡಿಸುತ್ತಿಎರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ.