ಇಂಡೋನೇಷ್ಯಾ ಓಪನ್‌ ಬ್ಯಾಡ್ಮಿಂಟ​ನ್‌: ಕ್ವಾರ್ಟ​ರ್‌​ಗೆ ಶ್ರೀಕಾಂತ್‌, ಪ್ರಣಯ್‌ ಲಗ್ಗೆ

ಇಂಡೋನೇಷ್ಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಕ್ವಾರ್ಟರ್‌ಗೆ ಲಗ್ಗೆಯಿಟ್ಟ ಶ್ರೀಕಾಂತ್, ಪ್ರಣಯ್
ಪಿ.ವಿ.​ಸಿಂಧು ಹಾಗೂ ಲಕ್ಷ್ಯ ಸೇನ್‌ 2ನೇ ಸುತ್ತಲ್ಲೇ ಅಭಿ​ಯಾನ ಅಂತ್ಯ
ಮಾಜಿ ವಿಶ್ವ ನಂ.1 ಶ್ರೀಕಾಂತ್‌, ಸೇನ್‌ ವಿರುದ್ಧ ಜಯಭೇರಿ

Indonesia Open 2023 Kidambi Srikanth edge past Lakshya Sen to enter quarterfinals kvn

ಜಕಾರ್ತ(ಜೂ.16): ಭಾರತದ ತಾರಾ ಶಟ್ಲರ್‌ಗಳಾದ ಕಿದಂಬಿ ಶ್ರೀಕಾಂತ್‌ ಹಾಗೂ ಎಚ್‌.​ಎ​ಸ್‌.​ಪ್ರ​ಣಯ್‌ ಇಲ್ಲಿ ನಡೆಯುತ್ತಿರುವ ಇಂಡೋನೇಷ್ಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇ​ಶಿ​ಸಿ​ದ್ದಾರೆ. ಆದರೆ ಕೆಲ ಸಮ​ಯ​ದಿಂದ ಪದಕ ಬರ ಎದು​ರಿ​ಸು​ತ್ತಿ​ರುವ ಪಿ.ವಿ.​ಸಿಂಧು ಹಾಗೂ ಲಕ್ಷ್ಯ ಸೇನ್‌ 2ನೇ ಸುತ್ತಲ್ಲೇ ಅಭಿ​ಯಾನ ಕೊನೆ​ಗೊ​ಳಿ​ಸಿ​ದ್ದಾರೆ. 

ಗುರು​ವಾರ ಪುರು​ಷರ ಸಿಂಗಲ್ಸ್‌ ಪ್ರಿ ಕ್ವಾರ್ಟ​ರ್‌​ನಲ್ಲಿ 7ನೇ ಶ್ರೇಯಾಂಕಿತ ಪ್ರಣಯ್‌ ಹಾಂಕಾಂಗ್‌ನ ಅಂಗುಸ್‌ ಲಾಂಗ್‌ ವಿರುದ್ಧ 21-18, 21-16ರಲ್ಲಿ ಜಯ​ಗ​ಳಿ​ಸಿ​ದರೆ, ಮಾಜಿ ವಿಶ್ವ ನಂ.1 ಶ್ರೀಕಾಂತ್‌, ಸೇನ್‌ ವಿರುದ್ಧ 21-17, 22-20 ಅಂತ​ರ​ದಲ್ಲಿ ಗೆದ್ದು ಬೀಗಿ​ದರು. ಮಹಿಳಾ ಸಿಂಗ​ಲ್ಸ್‌​ನಲ್ಲಿ ಸಿಂಧುಗೆ ವಿಶ್ವ ನಂ.2, ಚೈನೀಸ್‌ ತೈಪೆಯ ತೈ ತ್ಸು ಯಿಂಗ್‌ ವಿರುದ್ಧ 18-21, 16-21ರಲ್ಲಿ ಸೋಲಿನ ಆಘಾತ ಎದು​ರಾ​ಯಿತು. ಇದೇ ವೇಳೆ ಪುರು​ಷರ ಡಬ​ಲ್ಸ್‌​ನಲ್ಲಿ ವಿಶ್ವ ನಂ.4 ಜೋಡಿ ಸಾತ್ವಿ​ಕ್‌​-ಚಿರಾಗ್‌ ಚೀನಾ ಜೋಡಿ​ಯನ್ನು ಮಣಿಸಿ ಕ್ವಾರ್ಟ​ರ್‌​ಗೇ​ರಿತು.

ಏಷ್ಯನ್‌ ಗೇಮ್ಸ್‌ಗೆ ಅರ್ಹತೆ ಪಡೆದ ಕಾರ್ತಿ​ಕ್‌, ಗುಲ್ವೀ​ರ್‌

ಭುವ​ನೇ​ಶ್ವ​ರ್‌: ಇಲ್ಲಿ ಗುರು​ವಾರ ಆರಂಭ​ಗೊಂಡ ರಾಷ್ಟ್ರೀಯ ಅಂತಾರಾ​ಜ್ಯ ಅಥ್ಲೆ​ಟಿಕ್ಸ್‌ ಚಾಂಪಿ​ಯ​ನ್‌​ಶಿ​ಪ್‌ನಲ್ಲಿ ಉತ್ತರ ಪ್ರದೇ​ಶದ ಕಾರ್ತಿಕ್‌ ಕುಮಾ​ರ್‌ ಹಾಗೂ ಗುಲ್ವೀರ್‌ ಸಿಂಗ್‌ ಏಷ್ಯನ್‌ ಗೇಮ್ಸ್‌ಗೆ ಅರ್ಹತೆ ಗಿಟ್ಟಿ​ಸಿ​ಕೊಂಡಿ​ದ್ದಾರೆ. ಕೂಟದ ಮೊದಲ ದಿನ 1000 ಮೀ. ಓಟ​ದಲ್ಲಿ ಕುಮಾರ್‌ 29 ನಿಮಿಷ 01.84 ಸೆಕೆಂಡ್‌​ಗ​ಳಲ್ಲಿ ಗುರಿ ತಲುಪಿ ಅಗ್ರ​ಸ್ಥಾ​ನಿ​ಯಾ​ದರೆ, ಗುಲ್ವೀರ್‌ 29:03.78 ನಿಮಿ​ಷ​ಗ​ಳಲ್ಲಿ ಕ್ರಮಿಸಿ ದ್ವಿತೀಯ ಸ್ಥಾನ ಪಡೆ​ದ​ರು.

ಬ್ರಿಜ್‌ ವಿರುದ್ಧ ಜಾರ್ಜ್‌ಶೀ​ಟ್‌: 6 ಮಂದಿ ಮೇಲೆ ಲೈಂಗಿಕ ಕಿರುಕುಳ ತನಿಖೆಯಿಂದ ಸಾಬೀತು..!

ಏಷ್ಯನ್‌ ಗೇಮ್ಸ್‌ಗೆ ಅರ್ಹತೆ ಪಡೆ​ಯಲು 29:30.00 ನಿಮಿ​ಷ​ಗ​ಳಲ್ಲಿ ಕ್ರಮಿ​ಸ​ಬೇ​ಕಿತ್ತು. ಇನ್ನು, ಇದೇ ಸ್ಪರ್ಧೆ​ಯಲ್ಲಿ ಡೆಲ್ಲಿಯ ಪ್ರೀತಂ ಕುಮಾ​ರ್‌​(29:22.36 ನಿ), ಮಧ್ಯ​ಪ್ರ​ದೇ​ಶದ ಹರ್ಮ​ನ್‌​ಜೋತ್‌ ಸಿಂಗ್‌​(29:26.86 ನಿ.) ಕೂಡಾ ಅರ್ಹತಾ ಮಟ್ಟ​ವನ್ನು ತಲು​ಪಿ​ದರೂ 1 ದೇಶದ ಇಬ್ಬರಿಗೆ ಮಾತ್ರ ಏಷ್ಯನ್‌ ಗೇಮ್ಸ್‌ನಲ್ಲಿ ಪಾಲ್ಗೊ​ಳ್ಳಲು ಅವ​ಕಾ​ಶ​ವಿ​ರು​ವು​ದ​ರಿಂದ ಇವ​ರಿ​ಬ್ಬ​ರೂ ಅರ್ಹತೆ ಗಿಟ್ಟಿ​ಸಿ​ಕೊ​ಳ್ಳ​ಲಿಲ್ಲ. ಇದೇ ವೇಳೆ ಕರ್ನಾ​ಟಕದ ವಂದನಾ ಮಹಿಳೆಯರ 20 ಕಿ.ಮೀ. ವೇಗದ ನಡಿಗೆ ಸ್ಪರ್ಧೆಯಲ್ಲಿ 1 ಗಂಟೆ 41:54 ನಿಮಿ​ಷ​ಗ​ಳಲ್ಲಿ ಗುರಿ ತಲುಪಿ ಕಂಚಿನ ಪದಕ ಗೆದ್ದರು.

ಕಿರಿ​ಯರ ಹಾಕಿ: ರಾಜ್ಯ ತಂಡಕ್ಕೆ ಸತತ 2ನೇ ಜಯ

ರೂರ್ಕೆ​ಲಾ: 13ನೇ ಆವೃ​ತ್ತಿಯ ರಾಷ್ಟ್ರೀಯ ಕಿರಿಯರ ಹಾಕಿ ಟೂರ್ನಿ​ಯಲ್ಲಿ ಕರ್ನಾ​ಟಕ ಸತತ 2ನೇ ಗೆಲುವು ಸಾಧಿ​ಸಿದೆ. ಆರಂಭಿಕ ಪಂದ್ಯ​ದಲ್ಲಿ ತ್ರಿಪುರ ವಿರುದ್ಧ ವಾಕ್‌ ಓವರ್‌ ಪಡೆದು ಗೆದ್ದಿದ್ದ ರಾಜ್ಯ ತಂಡ ಬುಧ​ವಾರ ರಾಜ​ಸ್ಥಾ​ನ​ವನ್ನು 4-1 ಗೋಲು​ಗ​ಳಿಂದ ಮಣಿ​ಸಿತು. ಇದ​ರೊಂದಿಗೆ ಕರ್ನಾ​ಟಕ ‘ಇ’ ಗುಂಪಿ​ನಲ್ಲಿ ಅಗ್ರ​ಸ್ಥಾನ ಕಾಯ್ದು​ಕೊಂಡಿದ್ದು, ನಾಕೌಟ್‌ ಹಂತಕ್ಕೇರುವುದು ಬಹುತೇಕ ಖಚಿತವಾಗಿದೆ. 

ಬುಧ​ವಾ​ರದ ಪಂದ್ಯ​ದಲ್ಲಿ ರಾಜ್ಯದ ಪರ ಆರ‍್ಯನ್‌ ಉತ್ತಪ್ಪ(27ನೇ ನಿಮಿ​ಷ), ಎಚ್‌.​ಆ​ರ್‌.​ಹ​ರ್ಷಾ​(51ನೇ ನಿ.), ಸಪನ್‌ ಅಯ್ಯ​ಪ್ಪ​(59ನೇ ನಿ.) ಹಾಗೂ ನಕುಲ್‌ ಮಲ್ನಾ​ಡ್‌​(60ನೇ ನಿಮಿ​ಷ​) ಗೋಲು ಬಾರಿ​ಸಿ​ದರು. ರಾಜ್ಯ ತಂಡ ಗುಂಪು ಹಂತ​ದ ಕೊನೆ ಪಂದ್ಯ​ದಲ್ಲಿ ಶುಕ್ರ​ವಾರ ದಾದರ್‌-ನಗ​ರ್‌​ಹ​ವೇಲಿ ಮತ್ತು ದಿಯು-ದಾಮನ್‌ ತಂಡದ ವಿರುದ್ಧ ಸೆಣ​ಸಾ​ಡ​ಲಿದೆ.

ಮಹಿಳಾ ಫುಟ್ಬಾಲ್‌: ರಾಜ್ಯ ತಂಡಕ್ಕೆ ಪಂಜಾಬ್‌ ಸವಾ​ಲು

ಅಮೃ​ತ್‌​ಸ​ರ್‌: 27ನೇ ರಾಷ್ಟ್ರೀಯ ಹಿರಿಯ ಮಹಿಳೆಯರ ಫುಟ್ಬಾಲ್‌ ಚಾಂಪಿಯನ್‌ಶಿಪ್‌ನ ಫೈನಲ್‌ ಸುತ್ತಿನಲ್ಲಿ ಸೋಲಿನ ಆರಂಭ ಪಡೆ​ದಿ​ರುವ ಕರ್ನಾ​ಟಕ, ಗುರು​ವಾರ ತನ್ನ 2ನೇ ಪಂದ್ಯ​ದಲ್ಲಿ ಆತಿ​ಥೇಯ ಪಂಜಾಬ್‌ ವಿರುದ್ಧ ಸೆಣ​ಸಾ​ಡ​ಲಿದೆ.

ಬುಧ​ವಾರ ‘ಎ’ ಗುಂಪಿನ ಆರಂಭಿಕ ಪಂದ್ಯ​ದಲ್ಲಿ ರಾಜ್ಯ ತಂಡ 0-4 ಅಂತ​ರ​ದಲ್ಲಿ ಸೋಲ​ನು​ಭ​ವಿ​ಸಿ​ತ್ತು. 6 ತಂಡ​ಗ​ಳಿ​ರುವ ಗುಂಪಿ​ನಲ್ಲಿ ಅಗ್ರ 2 ತಂಡ​ಗಳು ಮಾತ್ರ ಸೆಮೀ​ಸ್‌​ಗೇ​ರ​ಲಿದ್ದು, ಪಂಜಾಬ್‌ ವಿರುದ್ಧ ಗೆಲ್ಲುವ ಮೂಲಕ ಕರ್ನಾ​ಟಕ ಅಗ್ರ-2ರಲ್ಲಿ ಸ್ಥಾನ ಪಡೆ​ದು​ಕೊ​ಳ್ಳುವ ನಿರೀಕ್ಷೆ​ಯ​ಲ್ಲಿದೆ.

Latest Videos
Follow Us:
Download App:
  • android
  • ios