ಪ್ರತಿಷ್ಠಿತ ವಿಶ್ವ ಟಿ20 ಟೂರ್ನಿಗೆ ಟೀಂ ಇಂಡಿಯಾ ಮಹಿಳಾ ತಂಡ ಆಯ್ಕೆ ಮಾಡಲಾಗಿದೆ. ನೂತನ ತಂಡದಲ್ಲಿ ಯಾರಿಗೆ ಸ್ಥಾನ ನೀಡಲಾಗಿದೆ. ಇಲ್ಲದೆ ವಿವರ.
ಮುಂಬೈ(ಸೆ.28): ವಿಶ್ವ ಟಿ20 ಟೂರ್ನಿಗೆ ಟೀಂ ಇಂಡಿಯಾ ಮಹಿಳಾ ತಂಡವನ್ನ ಆಯ್ಕೆ ಮಾಡಲಾಗಿದೆ. ಹರ್ಮನ್‌ಪ್ರೀತ್ ಕೌರ್‌ಗೆ ನಾಯಕಿ ಸ್ಥಾನ ನೀಡಿದರೆ, ಸ್ಮೃತಿ ಮಂದಾನ ಉಪನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ಶ್ರೀಲಂಕಾ ವಿರುದ್ಧದ ಇತ್ತೀಚಿನ ಟಿ20 ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಮಿಥಾಲಿ ರಾಜಜ್ ಹಾಗೂ ಜಮೈಯ ರೋಡ್ರಿಗಸ್ ಕೂಡ 15 ಸದಸ್ಯರ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ ಅನುಭವಿ ಬೌಲರ್ ಶಿಖಾ ಪಾಂಡೆಗೆ ಸ್ಥಾನ ನೀಡಿಲ್ಲ. ಹೀಗಾಗಿ ಪೂಜಾ ವಸ್ತ್ರಾಕರ್‌ಗೆ ಅವಕಾಶ ನೀಡಲಾಗಿದೆ.
ನವೆಂಬರ್ 9 ರಿಂದ 24ರ ವರೆಗೆ ವಿಶ್ವ ಟಿ20 ಟೂರ್ನಿ ನಡೆಯಲಿದೆ. ವೆಸ್ಟ್‌ಇಂಡೀಸ್‌ನಲ್ಲಿ ನಡೆಯಲಿರುವ ಭಾರತ ಸೇರಿದಂತೆ 10 ತಂಡಗಳು ಪಾಲ್ಗೊಳ್ಳುತ್ತಿದೆ. ಹಾಲಿ ಚಾಂಪಿಯನ್ ವೆಸ್ಟ್ಇಂಡೀಸ್ ಇದೀಗ ಸತತ 2ನೇ ಬಾರಿಗೆ ಚಾಂಪಿಯನ್ ಪಟ್ಟದ ಮೇಲೆ ಕಣ್ಣಿಟ್ಟಿದೆ.
