ಕೌಲಾಲಂಪುರ[ಏ.12]: ಭಾರತ ಮಹಿಳಾ ಹಾಕಿ ತಂಡ, ಮಲೇಷ್ಯಾ ಪ್ರವಾಸವನ್ನು ಅಜೇಯವಾಗಿ ಮುಕ್ತಾಯಗೊಳಿಸಿದೆ. 

ಗುರುವಾರ ನಡೆದ 5ನೇ ಹಾಗೂ ಅಂತಿಮ ಪಂದ್ಯವನ್ನು 1-0 ಗೋಲುಗಳಿಂದ ಗೆಲ್ಲುವ ಮೂಲಕ, ಸರಣಿಯನ್ನು 4-0 ಅಂತರದಲ್ಲಿ ಭಾರತ ತನ್ನದಾಗಿಸಿಕೊಂಡಿತು. ಒಲಿಂಪಿಕ್ಸ್‌ ಅರ್ಹತಾ ಸುತ್ತಿಗೂ ಮೊದಲು ಈ ಸರಣಿ ಜಯ, ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ. ಗುರುವಾರದ ಪಂದ್ಯದಲ್ಲಿ ಭಾರತ ಪರ ನವ್‌ಜೋತ್‌ ಕೌರ್‌ 35ನೇ ನಿಮಿಷದಲ್ಲಿ ಗೋಲು ಬಾರಿಸಿದರು. 

ಮೊದಲ ಪಂದ್ಯದಲ್ಲಿ 3-0ಯಿಂದ ಗೆದ್ದಿದ್ದ ಭಾರತ, 2ನೇ ಪಂದ್ಯದಲ್ಲಿ 5-0ಯಿಂದ ಜಯಸಿತ್ತು. 3ನೇ ಪಂದ್ಯವನ್ನು 4-4ರಲ್ಲಿ ಡ್ರಾ ಮಾಡಿಕೊಂಡಿದ್ದ ತಂಡ, 4ನೇ ಪಂದ್ಯವನ್ನು 1-0 ಗೋಲಿನಿಂದ ಜಯಿಸಿತ್ತು.

ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.