ಟೆನಿಸಾ ತಾರೆ ಸಾನಿಯಾ ಮಿರ್ಜಾ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದೇ ವೇಳೆ ಪುಕ್ಕಟೆ ಸಲಹೆ ನೀಡಿ ಸಾನಿಯಾ ಮಿರ್ಜಾರನ್ನ ಟ್ರೋಲ್ ಮಾಡಿದವರಿಗೆ ಸಾನಿಯಾ ಹಿಗ್ಗಾ ಮುಗ್ಗ ಜಾಡಿಸಿದ್ದಾರೆ. ಇಲ್ಲಿದೆ ಟ್ರೋಲ್ ಮಾಡಿದವರಿಗೆ ಸಾನಿಯಾ ಪ್ರತಿಕ್ರಿಯೆ.
ಹೈದರಾಬಾದ್(ಅ.14): ಭಾರತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಪತಿ, ಪಾಕಿಸ್ತಾನ ಕ್ರಿಕೆಟಿಗ ಶೋಯಿಬ್ ಮಲ್ಲಿಕ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಆದರೆ ಈ ಸಂದರ್ಭವನ್ನ ಉಪಯೋಗಿಸಿ ಇಲ್ಲ ಸಲ್ಲದ ಸಲಹೆ ನೀಡಿ ಟ್ರೋಲ್ ಮಾಡಿದವರಿಗೆ ಸಾನಿಯಾ ಸರಿಯಾಗಿ ತಿರುಗೇಟು ನೀಡಿದ್ದಾರೆ.
ತುಂಬು ಗರ್ಭಿಣಿಯಾಗಿರುವ ಸಾನಿಯಾಗೆ ಹಲವರು(ಪುರುಷರು) ಸಲಹೆ ನೀಡೋ ಮೂಲಕ ಟ್ರೋಲ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸಾನಿಯಾ ನೀವೂ ಕೂಡ ತಾಯಿಯ ಗರ್ಭದಿಂದ ಹೊರಬಂದಿದ್ದೀರಿ ಎಂಬುದನ್ನ ಮರೆಯಬೇಡಿ ಎಂದು ತಿರುಗೇಟು ನೀಡಿದ್ದಾರೆ.
ಸಲಹೆ ನೀಡಿದವರಿಗೆ(ಬಹುತೇಕರು ಪುರುಷರೆ ಆಗಿದ್ದಾರೆ), ಗರ್ಭಿಣಿ ಅಂದರೆ ನೀವು ಏನಂದುಕೊಂಡಿದ್ದೀರಾ? ಗರ್ಭ ಧರಿಸಿದವರು ಯಾರೂ ಅಸ್ಪೃಶ್ಯರೂ ಅಲ್ಲ, 9 ತಿಂಗಳ ಕಾಲ ಮನೆಯಲ್ಲಿ ಹಾಯಾಗಿ ಇರುವುದು ಎಂದುಕೊಂಡಿದ್ದೀರಾ? ನಿಮ್ಮ ಅಜ್ಞಾನದಿಂದ ಹೊರಬನ್ನಿ, ಅವರೂ ಕೂಡ ಸಾಮಾನ್ಯ ಮನುಷ್ಯರೇ ಎಂದು ಸಾನಿಯಾ ಪ್ರತಿಕ್ರಿಯಿಸಿದ್ದಾರೆ.
ಇದೇ ತಿಂಗಳಲ್ಲಿ ಮಗುವಿಗೆ ನಿರೀಕ್ಷೆಯಲ್ಲಿರುವ ಸಾನಿಯಾ ದಂಪತಿ, ಪದೇ ಪದೇ ಟ್ರೋಲ್ ಆಗುತ್ತಿದ್ದಾರೆ. ಮಗುವಿಗೆ ಜನ್ಮ ನೀಡಿದ ಬಳಿಕ ಮತ್ತೆ ಟೆನಿಸ್ ಅಂಗಳಕ್ಕೆ ಮರಳಲು ಸಾನಿಯಾ ನಿರ್ಧರಿಸಿದ್ದಾರೆ.
