ಕಾಮನ್ವೆಲ್ತ್ನಲ್ಲಿ ಶೂಟಿಂಗ್: ಬ್ರಿಟನ್‌ಗೆ ರಿಜಿಜು ಪತ್ರ
2022ರ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಶೂಟಿಂಗ್ ಕೈಬಿಟ್ಟಿರುವುದಕ್ಕೆ ಭಾರತ ವಿರೋಧ ವ್ಯಕ್ತಪಡಿಸಿದೆ. ಇದೀಗ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಬ್ರಿಟನ್ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..
ನವದೆಹಲಿ[ಸೆ.05]: ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ 2022ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಶೂಟಿಂಗ್ ಸೇರ್ಪಡೆ ಮಾಡುವಂತೆ ಬ್ರಿಟನ್‌ನ ಕ್ರೀಡಾ ಕಾರ್ಯದರ್ಶಿ ನಿಕಿ ಮಾರ್ಗನ್‌ಗೆ ಕೇಂದ್ರ ಕ್ರೀಡಾ ಸಚಿವ ಕಿರೆನ್ ರಿಜಿಜು ಪತ್ರ ಬರೆದಿದ್ದಾರೆ.
ಶೂಟಿಂಗ್ ವಿಶ್ವಕಪ್: ಭಾರತಕ್ಕೆ ಅಗ್ರಸ್ಥಾನ!
‘1966ರ ಗೇಮ್ಸ್‌ನಲ್ಲಿ ಶೂಟಿಂಗ್ ಸೇರ್ಪಡೆಗೊಂಡಿದ್ದು, 1974ರ ಬಳಿಕ ಕಾಮನ್‌ವೆಲ್ತ್ ಗೇಮ್ಸ್‌ನಿಂದ ಶೂಟಿಂಗ್ ಆಯೋಜಿಸುತ್ತ ಬರಲಾಗಿದೆ. ನೀವು ಈ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕು’ ಎಂದು ಪತ್ರ ಬರದಿದ್ದಾರೆ. ಒಟ್ಟು 240 ಕೋಟಿ ಜನಸಂಖ್ಯೆ ಹೊಂದಿರುವ 53 ರಾಷ್ಟ್ರಗಳು ಕಾಮನ್ ವೆಲ್ತ್ ಗೇಮ್ಸ್’ನಲ್ಲಿ ಪಾಲ್ಗೊಳ್ಳುತ್ತಿವೆ. ಇದರಲ್ಲಿ ಅರ್ಧದಷ್ಟು ಜನಸಂಖ್ಯೆ ಭಾರತದಲ್ಲಿಯೇ ಇದೆ ಎಂದು ರಿಜಿಜು ಪತ್ರದಲ್ಲಿ ಉಲ್ಲೇಕಿಸಿದ್ದಾರೆ.
ಕಾಮನ್‌ವೆಲ್ತ್‌ಗೆ ಬಹಿಷ್ಕಾರ: ಐಒಎಗೆ ಹಿನ್ನಡೆ!
2022ರ ಕಾಮನ್‌ವೆಲ್ತ್ ಕ್ರೀಡಾಕೂಟವನ್ನು ಬಹಿಷ್ಕರಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಭಾರತೀಯ ಒಲಿಂಪಿಕ್ಸ್ ಸಂಸ್ಥೆ ಮನವಿ ಮಾಡಿತ್ತು.