ರಿಯೋ(ಸೆ.04): ತಾರಾ ಶೂಟರ್‌ಗಳಾದ ಮನು ಭಾಕರ್‌ ಹಾಗೂ ಸೌರಭ್‌ ಚೌಧರಿ 10 ಮೀ. ಏರ್‌ ಪಿಸ್ತೂಲ್‌ ಮಿಶ್ರ ವಿಭಾಗದಲ್ಲಿ ಚಿನ್ನ ಗೆಲ್ಲುವ ಮೂಲಕ, ಇಲ್ಲಿ ಸೋಮ​ವಾರ ಮುಕ್ತಾ​ಯ​ಗೊಂಡ ಐಎಸ್‌ಎಸ್‌ಎಫ್‌ ಶೂಟಿಂಗ್‌ ವಿಶ್ವ​ಕಪ್‌ನಲ್ಲಿ ಭಾರ​ತಕ್ಕೆ 5ನೇ ಚಿನ್ನ ದೊರ​ಕಿ​ಸಿ​ಕೊ​ಟ್ಟರು.

ಶೂಟಿಂಗ್ ವಿಶ್ವಕಪ್: ಯಶಸ್ವಿನಿ ಸಿಂಗ್‌ಗೆ ಚಿನ್ನ

5 ಚಿನ್ನ, 2 ಬೆಳ್ಳಿ, 2 ಕಂಚಿ​ನೊಂದಿಗೆ ಒಟ್ಟು 9 ಪದಕ ಗೆದ್ದ ಭಾರತ, ಪದಕಪಟ್ಟಿ​ಯಲ್ಲಿ ಅಗ್ರ​ಸ್ಥಾನ ಪಡೆಯಿತು. ವಿಶೇಷ ಎಂದರೆ ಈ ವರ್ಷ ನಡೆ​ದಿ​ರುವ ಎಲ್ಲಾ 4 ಶೂಟಿಂಗ್‌ ವಿಶ್ವ​ಕಪ್‌ಗಳಲ್ಲಿ ಭಾರತ, ಪದಕ ಪಟ್ಟಿ​ಯಲ್ಲಿ ಅಗ್ರ​ಸ್ಥಾನ ಪಡೆ​ದಿದೆ. 

ನವ​ದೆ​ಹಲಿ, ಬೀಜಿಂಗ್‌, ಮ್ಯೂನಿಕ್‌ ಹಾಗೂ ರಿಯೋನಲ್ಲಿ ನಡೆದ ವಿಶ್ವ​ಕಪ್‌ಗಳಿಂದ ಭಾರತ 16 ಚಿನ್ನ ಸೇರಿ ಒಟ್ಟು 24 ಪದ​ಕ​ಗ​ಳನ್ನು ಗೆದ್ದಿದೆ. ಚೀನಾ 8 ಚಿನ್ನಗಳೊಂದಿಗೆ 36 ಪದಕ ಗೆದ್ದು 2ನೇ ಸ್ಥಾನ​ದ​ಲ್ಲಿದೆ. ಅಕ್ಟೋ​ಬರ್‌ 8ರಿಂದ 15ರ ವರೆಗೂ ಯುಇಎನ ಅಲ್‌ ಐನ್‌ನಲ್ಲಿ ವಿಶ್ವ​ಕಪ್‌ ಫೈನಲ್‌ ಟೂರ್ನಿ ನಡೆ​ಯ​ಲಿದೆ.