ಅರ್ಜುನ ಪ್ರಶಸ್ತಿಗೆ ತಮ್ಮನ್ನು ಆಯ್ಕೆ ಮಾಡದಿರುವುದಕ್ಕೆ ಭಾರತದ ಸ್ಟಾರ್ ಶಟ್ಲರ್ ಎಚ್‌.ಎಸ್‌.ಪ್ರಣಯ್‌ ಅಸಮಾಧಾನ ಹೊರಹಾಕಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ... 

ನವದೆಹಲಿ[ಆ.18]: ಭಾರತದ ತಾರಾ ಬ್ಯಾಡ್ಮಿಂಟನ್‌ ಆಟಗಾರ ಎಚ್‌.ಎಸ್‌.ಪ್ರಣಯ್‌ ಅರ್ಜುನ ಪ್ರಶಸ್ತಿ ಆಯ್ಕೆ ಪ್ರಕ್ರಿಯೆಯನ್ನು ಪ್ರಶ್ನಿಸಿದ್ದಾರೆ. ಅಲ್ಲದೇ ಪ್ರತಿಭೆಗಳಿಗೆ ದೇಶದಲ್ಲಿ ಬೆಲೆಯಿಲ್ಲ ಎಂದು ತಮ್ಮ ಅಸಮಾದಾನ ಹೊರಹಾಕಿದ್ದಾರೆ.

ವಾರ್ಷಿಕ ಕ್ರೀಡಾ ಪ್ರಶಸ್ತಿಗಳ ಪ್ರಕಟ: ದೀಪಾ, ಭಜರಂಗ್‌ಗೆ ಖೇಲ್‌ ರತ್ನ

ಭಾರತೀಯ ಬ್ಯಾಡ್ಮಿಂಟನ್‌ ಸಂಸ್ಥೆ ಪ್ರಣಯ್‌ ಹೆಸರನ್ನೂ ಶಿಫಾರಸು ಮಾಡಿತ್ತು. ಆದರೆ ಪ್ರಶಸ್ತಿ ಆಯ್ಕೆ ಸಮಿತಿ ಅವರ ಹೆಸರನ್ನು ಅರ್ಜುನಕ್ಕೆ ಪರಿಗಣಿಸಿಲ್ಲ. ‘ಪ್ರಶಸ್ತಿ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಸೇರಿಸಬಲ್ಲ ವ್ಯಕ್ತಿಗಳ ಪರಿಚಯವಿದ್ದರಷ್ಟೇ, ಪ್ರಶಸ್ತಿ ಸಿಗಲು ಸಾಧ್ಯ. ನಮ್ಮ ದೇಶದಲ್ಲಿ ಕ್ರೀಡಾಪಟುಗಳ ಪ್ರದರ್ಶನಕ್ಕೆ ಬೆಲೆಯಿಲ್ಲ. ಇದು ಬೇಸರದ ಸಂಗತಿ. ಆದರೆ ಏನೂ ಮಾಡಲು ಸಾಧ್ಯವಿಲ್ಲ. ಆಗವಷ್ಟು ದಿನ ಆಡಬೇಕಷ್ಟೇ’ ಎಂದು ಟ್ವೀಟರ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Scroll to load tweet…

ಅರ್ಜುನ ಪ್ರಶಸ್ತಿಗೆ ಬಿ. ಸಾಯಿ ಪ್ರಣೀತ್ ಅವರನ್ನು ಆಯ್ಕೆ ಮಾಡಲಾಗಿದೆ. ಆದರೆ ಎಚ್‌.ಎಸ್‌.ಪ್ರಣಯ್‌ ಅರ್ಜುನ ಪ್ರಶಸ್ತಿ ಗೌರವಕ್ಕೆ ಭಾಜನರಾಗುವಲ್ಲಿ ವಿಫಲರಾಗಿದ್ದಾರೆ.
27 ವರ್ಷದ ಪ್ರಣಯ್, 2018ರ ಕಾಮನ್ ವೆಲ್ತ್ ಮಿಶ್ರ ವಿಭಾಗದಲ್ಲಿ ಚಿನ್ನ ಜಯಿಸಿದ್ದರು. ಅಲ್ಲದೇ 2018ರ ಏಷ್ಯನ್ ಚಾಂಪಿಯನ್’ಶಿಪ್’ನ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಕಂಚು ಜಯಿಸಿದ್ದರು.