ಅತಿ ಎತ್ತರದ ಅಗ್ನಿ ಪರ್ವತವೇರಿದ ಬೆಂಗ್ಳೂರು ಟೆಕ್ಕಿ..!

Indian scales world's highest volcano
Highlights

ಸತ್ಯರೂಪ್ ಸದ್ಯದಲ್ಲೇ ಅಂಟಾರ್ಟಿಕಾದಲ್ಲಿರುವ ಮೌಂಟ್ ಸಿಡ್ಲೆ ಅಗ್ನಿಪರ್ವತವನ್ನು ಏರಲಿದ್ದು, ಈ ಮೂಲಕ ವಿಶ್ವದ ಎಲ್ಲಾ ಏಳು ಅತಿ ಎತ್ತರದ ಪರ್ವತಗಳನ್ನು ಏರಿದ ವಿಶೇಷ ಮೈಲಿಗಲ್ಲು ಸ್ಥಾಪಿಸಲಿದ್ದಾರೆ.

ನವದೆಹಲಿ[ಜು.09]: ಅರ್ಜೆಂಟೀನಾದಲ್ಲಿರುವ ವಿಶ್ವದ ಅತಿ ಎತ್ತರದ ಅಗ್ನಿಪರ್ವತ ಮೌಂಟ್ ಓಜೋಸ್ ಡೆಲ್ ಸಲಾಡೋ ಏರುವಲ್ಲಿ ಬೆಂಗಳೂರು ಮೂಲದ ಟೆಕ್ಕಿ ಸತ್ಯರೂಪ್ ಸಿದ್ಧಾಂತ ಯಶಸ್ವಿಯಾಗಿದ್ದಾರೆ. 

ಮಲ್ಲಿಮಸ್ತಾನ್ ಬಾಬು ಬಳಿಕ ಈ ಸಾಧನೆ ಮಾಡಿದ 2ನೇ ಭಾರತೀಯ ಎನ್ನುವ ದಾಖಲೆಯನ್ನು ಬರೆದಿದ್ದಾರೆ. ಅರ್ಜೆಂಟೀನಾ-ಚಿಲಿ ದೇಶಗಳ ಗಡಿಯಲ್ಲಿರುವ ಈ ಅಗ್ನಿಪರ್ವತ 6,893 ಮೀ. (22,615 ಅಡಿ) ಎತ್ತರವಿದೆ. 

ಸತ್ಯರೂಪ್ ಸದ್ಯದಲ್ಲೇ ಅಂಟಾರ್ಟಿಕಾದಲ್ಲಿರುವ ಮೌಂಟ್ ಸಿಡ್ಲೆ ಅಗ್ನಿಪರ್ವತವನ್ನು ಏರಲಿದ್ದು, ಈ ಮೂಲಕ ವಿಶ್ವದ ಎಲ್ಲಾ ಏಳು ಅತಿ ಎತ್ತರದ ಪರ್ವತಗಳನ್ನು ಏರಿದ ವಿಶೇಷ ಮೈಲಿಗಲ್ಲು ಸ್ಥಾಪಿಸಲಿದ್ದಾರೆ. 2015ರಲ್ಲಿ ಸತ್ಯರೂಪ್ ಎವರೆಸ್ಟ್ ಪರ್ವತವನ್ನು ಏರಿದ್ದರು. 
 

loader