ಇಂಡಿಯನ್ ಓಪನ್‌ ಬಾಕ್ಸಿಂಗ್‌: ಸೆಮೀಸ್‌ಗೇರಿದ ಮೇರಿ ಕೋಮ್‌

ಮಹಿಳೆಯರ 51 ಕೆ.ಜಿ. ವಿಭಾಗದಲ್ಲಿ ಮೇರಿ, ನೇಪಾಳದ ಮಾಲಾ ರೈ ವಿರುದ್ಧ 5-0 ಬೌಟ್‌ಗಳಲ್ಲಿ ಗೆಲುವು ಪಡೆದು ಸೆಮೀಸ್‌ಗೇರಿದರು. ಇದರೊಂದಿಗೆ ಸೆಮೀಸ್‌ನಲ್ಲಿ ಮೇರಿ, ಭಾರತದವರೇ ಆದ ನಿಖತ್‌ ಜರೀನ್‌ ವಿರುದ್ಧ ಸೆಣಸಲು ಸಜ್ಜಾಗಿದ್ದಾರೆ.

Indian Open boxing 2019 Mary Kom assured of medal

ಗುವಾಹಟಿ(ಮೇ.22): 6 ಬಾರಿ ವಿಶ್ವ ಚಾಂಪಿಯನ್‌ ಭಾರತದ ತಾರಾ ಮಹಿಳಾ ಬಾಕ್ಸರ್‌ ಮೇರಿ ಕೋಮ್‌, 2ನೇ ಆವೃತ್ತಿಯ ಇಂಡಿಯನ್‌ ಓಪನ್‌ ಬಾಕ್ಸಿಂಗ್‌ ಟೂರ್ನಿಯಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದಾರೆ. ಐವರು ಪುರುಷ ಬಾಕ್ಸರ್‌ಗಳು ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. 

ಇಂಡಿಯನ್‌ ಓಪನ್‌ ಬಾಕ್ಸಿಂಗ್‌: ಭಾರತಕ್ಕೆ 10 ಪದಕ ಖಚಿತ

2ನೇ ದಿನವಾದ ಮಂಗಳವಾರ ನಡೆದ ಮಹಿಳೆಯರ 51 ಕೆ.ಜಿ. ವಿಭಾಗದಲ್ಲಿ ಮೇರಿ, ನೇಪಾಳದ ಮಾಲಾ ರೈ ವಿರುದ್ಧ 5-0 ಬೌಟ್‌ಗಳಲ್ಲಿ ಗೆಲುವು ಪಡೆದು ಸೆಮೀಸ್‌ಗೇರಿದರು. ಇದರೊಂದಿಗೆ ಸೆಮೀಸ್‌ನಲ್ಲಿ ಮೇರಿ, ಭಾರತದವರೇ ಆದ ನಿಖತ್‌ ಜರೀನ್‌ ವಿರುದ್ಧ ಸೆಣಸಲು ಸಜ್ಜಾಗಿದ್ದಾರೆ.

ಮತ್ತೊಂದು ಕ್ವಾರ್ಟರ್‌ನಲ್ಲಿ ನಿಖತ್‌ ಜರೀನ್‌, ಭಾರತದವರೇ ಆದ ಅನಾಮಿಕ ವಿರುದ್ಧ 5-0 ಬೌಟ್‌ಗಳಲ್ಲಿ ಗೆಲುವು ಪಡೆದರು. ಉಳಿದಂತೆ ನಿಖತ್‌ ಜರೀನ್‌, ಮಂಜು ರಾಣಿ, ಮೋನಿಕಾ, ಮೀನಾ ಕುಮಾರಿ, ಜ್ಯೋತಿ ಗುಲಿಯಾ ಸೆಮೀಸ್‌ಗೇರಿದ್ದಾರೆ. ಪುರುಷರ ವಿಭಾಗದಲ್ಲಿ ಪವನ್‌ ನರ್ವಾಲ್‌, ಅಂಕಿತ್‌, ದಿನೇಶ್‌, ಆಶೀಶ್‌ ಹಾಗೂ ಮಂಜಿತ್‌ ಪಂಗಲ್‌ ಕ್ವಾರ್ಟರ್‌ಫೈನಲ್‌ ಪ್ರವೇಶಿಸಿದರು.

Latest Videos
Follow Us:
Download App:
  • android
  • ios