Asianet Suvarna News Asianet Suvarna News

ಐತಿಹಾಸಿಕ ಸಾಧನೆ ಮಾಡಿದ ಭಾರತ ಬ್ಯಾಡ್ಮಿಂಟನ್ ತಂಡ, ಥಾಮಸ್ ಕಪ್ ಫೈನಲ್ ಗೆ ಲಗ್ಗೆ!

ಭಾರತ ಪುರುಷರ ಬ್ಯಾಡ್ಮಿಂಟನ್ ತಂಡ ಐತಿಹಾಸಿಕ ಸಾಧನೆ ಮಾಡಿದ್ದು, ಇದೇ ಮೊದಲ ಬಾರಿಗೆ ಥಾಮಸ್ ಕಪ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಫೈನಲ್ ಸಾಧನೆ ಮಾಡಿದೆ. ಸೆಮಿಫೈನಲ್ ನಲ್ಲಿ ಡೆನ್ಮಾರ್ಕ್ ತಂಡವನ್ನು ಬಗ್ಗುಬಡಿದು ಭಾರತ ಈ ಸಾಧನೆ ಮಾಡಿದೆ.
 

Indian Mens Badminton Team Creates History Reach Thomas Cup Final san
Author
Bengaluru, First Published May 13, 2022, 11:16 PM IST

ಬ್ಯಾಂಕಾಕ್ (ಮೇ.13): ಭರ್ಜರಿ ನಿರ್ವಹಣೆ ತೋರಿದ ಎಚ್ ಎಸ್ ಪ್ರಣಯ್ (H S Prannoy) ನಿರ್ಣಾಯಕ ಪಂದ್ಯದಲ್ಲಿ  ರಾಸ್ಮಸ್ ಗೆಮ್ಕೆ (Rasmus Gemke) ಅವರನ್ನು ಸೋಲಿಸುವ ಮೂಲಕ ಭಾರತವು (India) 3-2 ರಿಂದ ಡೆನ್ಮಾರ್ಕ್ (Denmark) ತಂಡವನ್ನು ಸೋಲಿಸಿ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಥಾಮಸ್ ಕಪ್ಫೈ (Thomas Cup)ನಲ್ ಗೆ ಲಗ್ಗೆ ಇಟ್ಟಿದೆ. ಅದರೊಂದಿಗೆ ಟೂರ್ನಿಯಲ್ಲಿ ಭಾರತಕ್ಕೆ ಈಗ ಕನಿಷ್ಠ ಬೆಳ್ಳಿ ಪದಕ ಖಚಿತವಾಗಿದೆ.

ಇದೇ ಮೊದಲ ಬಾರಿಗೆ ಥಾಮಸ್ ಕಪ್ ಫೈನಲ್ ಗೆ ನಮ್ಮ ಹುಡುಗರು ಪ್ರವೇಶಿಸಿದ್ದಕ್ಕೆ ಬಹಳ ಸಂಭ್ರಮವಾಗಿದೆ. ಇಡೀ ಟೂರ್ನಿಯಲ್ಲಿ ತಂಡದ ಒಟ್ಟಾರೆ ನಿರ್ವಹಣೆ ಅದ್ಭುತವಾಗಿತ್ತು. ಗೆಲುವಿನ ಹೋರಾಟವನ್ನು ಒಂದು ಕ್ಷಣ ಕೂಡ ಕೈಬಿಟ್ಟಿರಲಿಲ್ಲ. ಭಾರತದಲ್ಲಿ ಬ್ಯಾಡ್ಮಿಂಟನ್ ಕ್ರೀಡೆಯ ಬೆಳವಣಿಗೆಗೆ ಈ ಸಾಧನೆ ಇನ್ನಷ್ಟು ಪ್ರೇರಣೆ ನೀಡಲಿದೆ ಎಂದು ಭಾರತ ಬ್ಯಾಡ್ಮಿಂಟನ್ ತಂಡದ ಮುಖ್ಯಕೋಚ್ ಹಾಗೂ ಭಾರತೀ ಬ್ಯಾಡ್ಮಿಂಟನ್ ಅಸೋಸಿಯೇಷನ್ ನ ಉಪಾಧ್ಯಕ್ಷ ಪುಲ್ಲೇಲ ಗೋಪಿಚಂದ್ (Pullela Gopichand, Chief National Coach and Vice President of BAI)  ಏಷ್ಯಾನೆಟ್ ನ್ಯೂಸ್ ಗೆ ಪ್ರತಿಕ್ರಿಯಿಸಿದ್ದಾರೆ.

ಶುಕ್ರವಾರ ನಡೆದ ಸೆಮಿಫೈನಲ್ ನ ಮೊದಲ ಸಿಂಗಲ್ಸ್ ಪಂದ್ಯದಲ್ಲಿ ವಿಶ್ವ ಚಾಂಪಿಯನ್ ಷಿಪ್ ನಲ್ಲಿ ಬೆಳ್ಳಿ ಪದಕ ವಿಜೇತ ಲಕ್ಷ್ಯ ಸೆನ್ (Lakshya Sen) 13-21 13-21 ರಿಂದ ವಿಶ್ವದ ಅಗ್ರ ಆಟಗಾರ ವಿಕ್ಟರ್ ಅಕ್ಸೆಲ್ ಸನ್ ಗೆ  (Viktor Axelsen) ಶರಣಾದರು. ಇದರಿಂದಾಗಿ ಭಾರತ 0-1 ರ ಹಿನ್ನಡೆ ಕಂಡಿತು. ನಂತರ ನಡೆದ ಮೊದಲ ಡಬಲ್ಸ್ ಪಂದ್ಯದಲ್ಲಿ ಸಾತ್ವಿಕ್ ಸಾಯಿರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ (Satwiksairaj Rankireddy/Chirag Shetty)  ಜೋಡಿ 21-18, 21-13, 22-20 ರಿಂದ ರೋಚಕವಾಗಿ ಕಿಮ್ ಆಸ್ಟ್ರಪ್ ಹಾಗೂ ಮಥಿಯಾಸ್ ಕ್ರಿಶ್ಚಿಯನ್ಸೆನ್ (Kim Astrup/Mathias Christiansen) ಜೋಡಿಯನ್ನು ಮಣಿಸಿ ಸಮಬಲ ಸಾಧಿಸುವಲ್ಲಿ ಯಶ ಕಂಡಿತ್ತು.

ಆ ಬಳಿಕ ನಡೆದ 2ನೇ ಸಿಂಗಲ್ಸ್ ಪಂದ್ಯದಲ್ಲಿ ಕಿಡಂಬಿ ಶ್ರೀಕಾಂತ್ (Kidambi Srikanth) 21-18, 12-21, 21-15 ರಿಂದ ಆಂಡ್ರೆಸ್ ಅಂಟೋನ್ಸೆನ್ (Anders Antonsen) ಅವರನ್ನು ಬಗ್ಗು ಬಡಿಯುವ ಮೂಲಕ ಪಂದ್ಯದಲ್ಲಿ ಮೊದಲ ಬಾರಿಗೆ ಭಾರತಕ್ಕೆ ಮುನ್ನಡೆ ತಂದುಕೊಟ್ಟಿದ್ದರು. 2-1 ಮುನ್ನಡೆಯೊಂದಿಗೆ ನಾಲ್ಕನೇ ಪಂದ್ಯವಾಗಿದ್ದ 2ನೇ ಡಬಲ್ಸ್ ನಲ್ಲಿ ಕಣಕ್ಕಿಳಿದ ಕೃಷ್ಣ ಪ್ರಸಾದ್ ಗರಗ ಹಾಗೂ ವಿಷ್ಣು ವರ್ಧರ್ ಗೌಡ್ ಪಾಂಜಾಲ (Krishna Prasad Garaga/Vishnuvardhan Goud Panjala) ಜೋಡಿ 14-21, 13-21 ರಿಂದ ಆಂಡರ್ಸ್ ಸ್ಕಾರಪ್ ರಾಸ್ಮುಸ್ಸೆನ್ ಹಾಗೂ ಫ್ರೆಡ್ರಿಕ್ ಸೊಗಾರ್ಡ್ ( Anders Skaarup Rasmussen/Frederik SøGAARD) ಜೋಡಿಗೆ ನಿರೀಕ್ಷೆಯಂತೆ ಶರಣಾಯಿತು.

IPL 2022 ಪಂಜಾಬ್ ವಿರುದ್ಧ ಆರ್ ಸಿಬಿ ತಂಡಕ್ಕೆ ಮತ್ತೆ ಸೋಲಿನ ಬರೆ

2-2 ರಿಂದ ನಿರ್ಣಾಯಕವಾಗಿದ್ದ ಮೂರನೇ ಹಾಗೂ ಅಂತಿಮ ಸಿಂಗಲ್ಸ್ ಪಂದ್ಯದಲ್ಲಿ ಭಾರತದ ಪರವಾಗಿ ಎಚ್ ಎಸ್ ಪ್ರಣಯ್ ಹಾಗೂ ಡೆನ್ಮಾರ್ಕ್ ಪರವಾಗಿ ರಾಸ್ಮಸ್ ಗೆಮ್ಕೆ ಕಣಕ್ಕಿಳಿದಿದ್ದರು. ಮೊದಲ ಗೇಮ್ ನಲ್ಲಿ ಎಚ್ ಎಸ್ ಪ್ರಣಯ್ 13-21 ರಿಂದ ಸೋಲು ಕಂಡಾಗ ಭಾರತ ಪಂದ್ಯದಲ್ಲಿ ಸೋಲು ಕಾಣಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, 2ನೇ ಗೇಮ್ ನಲ್ಲಿ ಗೆಮ್ಕೆಯನ್ನು 21-9 ರಿಂದ ಮಣಿಸಿದ ಪ್ರಣಯ್, ನಿರ್ಣಾಯಕ ಗೇಮ್ ನಲ್ಲು 21-12 ರಿಂದ ಗೆಲ್ಲುವ ಮೂಲಕ ಭಾರತದ ಐತಿಹಾಸಿಕ ವಿಜಯಕ್ಕೆ ಕಾರಣರಾದರು.

MS Dhoni ತಮಿಳು ಚಿತ್ರರಂಗಕ್ಕೆ ; Nayanthara ನಾಯಕಿ?

ಸೆಮಿಫೈನಲ್ ಪಂದ್ಯದಲ್ಲಿ ಮಲೇಷ್ಯಾ ತಂಡವನ್ನು ಇದೇ ಅಂತರದಲ್ಲಿ ಮಣಿಸುವ ಮೂಲಕ ಭಾರತ 43 ವರ್ಷಗಳ ಬಳಿಕ ಥಾಮಸ್ ಕಪ್ ನಲ್ಲಿ ಸೆಮಿಫೈನಲ್ ಗೇರಿದ್ದ ಸಾಧನೆ ಮಾಡಿತ್ತು. ಇದಕ್ಕೂ ಮುನ್ನ 1979ರಲ್ಲಿ ಕೊನೆಯ ಬಾರಿಗೆ ಭಾರತ ಥಾಮಸ್ ಕಪ್ ನಲ್ಲಿ ಸೆಮಿಫೈನಲ್ ಹಂತಕ್ಕೇರಿತ್ತು.

Follow Us:
Download App:
  • android
  • ios