Asianet Suvarna News Asianet Suvarna News

IPL 2022 ಪಂಜಾಬ್ ವಿರುದ್ಧ ಆರ್ ಸಿಬಿ ತಂಡಕ್ಕೆ ಮತ್ತೆ ಸೋಲಿನ ಬರೆ

ಪಂಜಾಬ್ ಕಿಂಗ್ಸ್ ತಂಡದ ಬ್ಯಾಟಿಂಗ್ ಅಬ್ಬರದ ಮುಂದೆ ಮಂಡಿಯೂರಿದ ಆರ್ ಸಿಬಿ ತಂಡ ಪ್ಲೇ ಆಫ್ ಗೇರುವ ಸುಲಭ ಅವಕಾಶವನ್ನು ತನ್ನ ಕೈಯಾರೆ ಇನ್ನಷ್ಟು ಜಟಿಲ ಮಾಡಿಕೊಂಡಿದೆ. ಶುಕ್ರವಾರ ನಡೆದ ಪಂದ್ಯದಲ್ಲಿ ಆರ್ ಸಿಬಿ 54 ರನ್ ಗಳ ದೊಡ್ಡ ಅಂತರದಲ್ಲಿ ಪಂಜಾಬ್ ತಂಡಕ್ಕೆ ಶರಣಾಯಿತು.
 

IPL 2022 RCB vs PBKS  Punjab Kings Beat Royal Challengers Bangalore by 54 runs san
Author
Bengaluru, First Published May 13, 2022, 11:29 PM IST

ಮುಂಬೈ (ಮೇ. 13): ಪಂಜಾಬ್ ತಂಡದ ಬ್ಯಾಟಿಂಗ್ ಅಬ್ಬರ ಹಾಗೂ ಶಿಸ್ತಿನ ಬೌಲಿಂಗ್ ದಾಳಿಯ ಮುಂದೆ ನೀರಸ ಆಟವಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡ ಐಪಿಎಲ್ 2022ರಲ್ಲಿ (IPL 2022) ತನ್ನ 6ನೇ ಸೋಲು ಕಂಡಿದೆ. ಇದರೊಂದಿಗೆ ಸುಲಭವಾಗಿ ಪ್ಲೇ ಆಫ್ ಗೇರುವ ಅವಕಾಶ ಹೊಂದಿದ್ದ ಆರ್ ಸಿಬಿ (RCB) ತಂಡವೀಗ ತನ್ನ ಕೈಯಾರೆ ಈ ಅವಕಾಶವನ್ನು ಜಟಿಲ ಮಾಡಿಕೊಂಡಿದೆ.

ಬ್ಯಾಟಿಂಗ್ ಸ್ನೇಹಿ ಬ್ರಬೋರ್ನ್ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆರ್ ಸಿಬಿ (RCB) ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ನಿರೀಕ್ಷೆಯಂತೆ ಅಬ್ಬರದ ಬ್ಯಾಟಿಂಗ್ ನಡೆಸಿದ ಪಂಜಾಬ್ ಕಿಂಗ್ಸ್ (Punjab Kings) ಜಾನಿ ಬೇರ್ ಸ್ಟೋ (66 ರನ್, 29 ಎಸೆತ, 4 ಬೌಂಡರಿ, 7 ಸಿಕ್ಸರ್) ಹಾಗೂ ಲಿಯಾಮ್ ಲಿವಿಂಗ್ ಸ್ಟೋನ್ (70 ರನ್, 42 ಎಎಸೆತ, 5 ಬೌಂಡರಿ, 4 ಸಿಕ್ಸರ್ ) ಸ್ಪೋಟಕ ಅರ್ಧಶತಕದ ನೆರವಿನಿಂದ 9 ವಿಕೆಟ್ ಗೆ 209 ರನ್ ಬಾರಿಸಿತು.

ಪ್ರತಿಯಾಗಿ ಆರ್ ಸಿಬಿ ತಂಡ ಚೇಸಿಂಗ್ ನ ಆರಂಭದಿಂದಲೇ ಹಿನ್ನಡೆ ಕಂಡು 9 ವಿಕೆಟ್ ಗೆ 155 ರನ್ ಬಾರಿಸಲಷ್ಟೇ ಶಕ್ತವಾಯಿತು. ತಂಡದ ಬ್ಯಾಟಿಂಗ್ ವಿಭಾಗದ ದುರ್ಬಲ ಕೊಂಡಿಯಾಗಿ ಕಾಣಿಸಿಕೊಂಡಿರುವ ವಿರಾಟ್ ಕೊಹ್ಲಿ ಮತ್ತೊಮ್ಮೆ ಅಲ್ಪ ಮೊತ್ತಕ್ಕೆ ಔಟಾದರು. ಈ ಗೆಲುವಿನೊಂದಿಗೆ ಪಂಜಾಬ್ ತಂಡ ತನ್ನ ಪ್ಲೇ ಆಫ್ ಆಸೆಗೆ ಇನ್ನಷ್ಟು ಜೀವ ತುಂಬಿದೆ. 12 ಪಂದ್ಯಗಳಿಂದ 12 ಅಂಕ ಸಂಪಾದನೆ ಮಾಡಿರುವ ಪಂಜಾಬ್ ಕಿಂಗ್ಸ್ ಸದ್ಯ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದು, ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕಿಂತ ಅಲ್ಪ ರನ್ ರೇಟ್ ವ್ಯತ್ಯಾಸ ಹೊಂದಿದೆ.

ಚೇಸಿಂಗ್ ವೇಳೆ ಮೊದಲ ಐದು ಓವರ್ ಗಳ ಆಟದಲ್ಲಿ ಆರ್ ಸಿಬಿ ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ ಹಾಗೂ ಮಹಿಪಾಲ್ ಲೋಮ್ರರ್ ವಿಕೆಟ್ ಗಳನ್ನು ಕಳೆದುಕೊಂಡಿತು. ಗ್ಲೆನ್ ಮ್ಯಾಕ್ಸ್ ವೆಲ್ ಹಾಗೂ ರಜತ್ ಪಾಟೀದಾರ್ ತಂಡದ ಇನ್ನಿಂಗ್ಸ್ ಗೆ ಚೇತರಿಕೆ ನೀಡುವ ಪ್ರಯತ್ನ ಮಾಡಿದರಾದರೂ ಇದರಲ್ಲಿ ಯಶಸ್ಸು ಕಾಣಲಿಲ್ಲ.

ಮೊದಲ ವಿಕೆಟ್ ಗೆ ಉತ್ತಮ ಜೊತೆಯಾಟವಾಡಿದ್ದ ಫಾಫ್ ಡು ಪ್ಲೆಸಿಸ್ ಹಾಗೂ ವಿರಾಟ್ ಕೊಹ್ಲಿ 33 ರನ್ ಕೂಡಿಸಿದ್ದರು. ಈ ವೇಳೆ ರಬಾಡ ಎಸೆತದಲ್ಲಿ ವಿರಾಟ್ ಕೊಹ್ಲಿ ಶಾರ್ಟ್ ಫೈನ್ ಲೆಗ್ ನಲ್ಲಿ ರಾಹುಲ್ ಚಹರ್ ಗೆ ಕ್ಯಾಚ್ ನೀಡಿದರು. ನಂತರ ಫಾಫ್ ಡು ಪ್ಲೆಸಿಸ್ ಹಾಗೂ ಮಹೀಪಾಲ್ ಲೋಮ್ರರ್ ಕೂಡ ನಿರ್ಗಮಿಸಿದಾಗ ಆರ್ ಸಿಬಿ ಪವರ್ ಪ್ಲೇ ಓವರ್ ಗಳ ಅಂತ್ಯಕ್ಕೆ 44 ರನ್ ಗೆ 3 ವಿಕೆಟ್ ಕಳೆದುಕೊಂಡಿತ್ತು.

IPL 2022 ಬೇರ್ ಸ್ಟೋ, ಲಿವಿಂಗ್ ಸ್ಟೋನ್ ಬೆಂಕಿ ಬ್ಯಾಟಿಂಗ್

ಈ ವೇಳೆ ಜೊತೆಯಾದ ರಜತ್ ಪಾಟೀದಾರ್ (26) ಹಾಗೂ ಗ್ಲೆನ್ ಮ್ಯಾಕ್ಸ್ ವೆಲ್ (35) ನಾಲ್ಕನೇ ವಿಕೆಟ್ ಗೆ 50 ರನ್ ಜೊತೆಯಾಟವಾಡಿದರು.ಇದರ ಫಲವಾಗಿ ತಂಡ 11ನೇ ಓವರ್ ನಲ್ಲಿ 100ರ ಗಡಿ ದಾಟಿ ಗೆಲುವಿನ ಪ್ರಯತ್ನದಲ್ಲಿತ್ತು. ಇವರಿಬ್ಬರ 64 ರನ್ ಜೊತೆಯಾಟಕ್ಕೆ ರಾಹುಲ್ ಚಹರ್ ಬ್ರೇಕ್ ಹಾಕಿದರು. ರಜತ್ ಪಾಟೀದಾರ್ ಶಿಖರ್ ಧವನ್ ಗೆ ಕ್ಯಾಚ್ ನೀಡಿ ಹೊರನಡೆದರೆ, ಮ್ಯಾಕ್ಸ್ ವೆಲ್ ವಿಕೆಟ್ ಅನ್ನು ಬ್ರಾರ್ ಪಡೆದುಕೊಂಡರು.

IPL 2022 ಕೊನೆಗೂ ಗೆಲುವಿನ ದಡ ಸೇರಿದ ಮುಂಬೈ, ಚೆನ್ನೈ ಅಧಿಕೃತವಾಗಿ ಟೂರ್ನಿಯಿಂದ ಔಟ್!

ಈ ವೇಳೆ ದಿನೇಶ್ ಕಾರ್ತಿಕ್ ಹಾಗೂ ಶಾಬಾಜ್ ಅಹ್ಮದ್ ಮೇಲೆ ತಂಡ ನಿರೀಕ್ಷೆ ಇಟ್ಟಿತ್ತು. 11 ಎಸೆತಗಳಲ್ಲಿ 11 ರನ್ ಬಾರಿಸಿ ದಿನೇಶ್ ಕಾರ್ತಿಕ್ ನಿರ್ಗಮನ ಕಂಡ ಬಳಿಕ, ಆರ್ ಸಿಬಿ ಗೆಲುವಿನ ಹೋರಾಟ ಬಹುತೇಕವಾಗಿ ಮುಕ್ತಾಯ ಕಂಡಿತ್ತು.

Follow Us:
Download App:
  • android
  • ios