‘ಎ’ ಗುಂಪಿನಲ್ಲಿರುವ ಭಾರತ, ಜಪಾನ್ ವಿರುದ್ಧ 5-1 ಗೋಲುಗಳಿಂದ ಜಯ ಪಡೆದಿತ್ತು. ಮನ್‌ಪ್ರೀತ್ ಸಿಂಗ್ ನೇತೃತ್ವದ ಹಾಕಿ ತಂಡ, ಬಾಂಗ್ಲಾ ವಿರುದ್ಧ ಸಹ ಇದೇ ಪ್ರದರ್ಶನ ಮುಂದುವರಿಸುವ ವಿಶ್ವಾಸದಲ್ಲಿದೆ.

ಢಾಕಾ(ಅ.13): ಏಷ್ಯಾಕಪ್ ಪಂದ್ಯಾವಳಿಯ ಮೊದಲ ಪಂದ್ಯದಲ್ಲಿ ಜಪಾನ್ ಎದುರು ಭರ್ಜರಿ ಗೆಲುವು ಸಾಧಿಸಿದ್ದ ಭಾರತ ತಂಡ, ಇಂದು ಆತಿಥೇಯ ಬಾಂಗ್ಲಾದೇಶ ಎದುರು ಸೆಣಸಲು ಸಜ್ಜಾಗಿದೆ.

‘ಎ’ ಗುಂಪಿನಲ್ಲಿರುವ ಭಾರತ, ಜಪಾನ್ ವಿರುದ್ಧ 5-1 ಗೋಲುಗಳಿಂದ ಜಯ ಪಡೆದಿತ್ತು. ಮನ್‌ಪ್ರೀತ್ ಸಿಂಗ್ ನೇತೃತ್ವದ ಹಾಕಿ ತಂಡ, ಬಾಂಗ್ಲಾ ವಿರುದ್ಧ ಸಹ ಇದೇ ಪ್ರದರ್ಶನ ಮುಂದುವರಿಸುವ ವಿಶ್ವಾಸದಲ್ಲಿದೆ.

ಕರ್ನಾಟಕದ ಎಸ್.ವಿ.ಸುನಿಲ್, ಲಲಿತ್ ಉಪಾಧ್ಯಾಯ, ರಮಣ್‌'ದೀಪ್ ಸಿಂಗ್, ಹರ್ಮನ್'ಪ್ರೀತ್ ಸಿಂಗ್ ಮೊದಲ ಪಂದ್ಯದಲ್ಲಿ ಗೋಲುಗಳಿಸುವ ಮೂಲಕ ಉತ್ತಮ ಫಾರ್ಮ್'ನಲ್ಲಿದ್ದು, ಬಾಂಗ್ಲಾ ವಿರುದ್ಧ ಇದೇ ಆಟ ಮುಂದುವರಿಸುವ ಉತ್ಸಾಹದಲ್ಲಿದ್ದಾರೆ.